ಜೀವನದ ವಿಶೇಷ ದಿನದಂದು ವಿಶೇಷ ವೀಡಿಯೊ ಶೇರ್ ಮಾಡಿ ಗಟ್ಟಿಮೇಳ ಸೀರಿಯಲ್ ನಟ ರಕ್ಷ್ ಹೇಳಿದ್ದೇನು?
ಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿ, ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸೀರಿಯಲ್ ಆಗಿದೆ ಗಟ್ಟಿಮೇಳ. ಈ ಸೀರಿಯಲ್ ಕಳೆದ ಕೆಲವು ಸಮಯದಿಂದಲೂ ಟಿ ಆರ್ ಪಿ ವಿಚಾರದಲ್ಲಿ ಭರ್ಜರಿ ಸಕ್ಸಸ್ ಪಡೆದು ನಂಬರ್ ಒನ್ ಸ್ಥಾನವನ್ನು ಪಡೆದಿದ್ದು ಕೂಡಾ ಉಂಟು. ಗಟ್ಟಿಮೇಳ ಸೀರಿಯಲ್ ಕಿರುತೆರೆಯ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿ ಯಶಸ್ಸಿನ ನಾಗಾಲೋಟವನ್ನು ಮಾಡುತ್ತಾ ಮುಂದೆ ಮುಂದೆ ಸಾಗುತ್ತಾ, ಇನ್ನಷ್ಟು ಜನಪ್ರಿಯತೆ ತನ್ನದಾಗಿಸಿಕೊಳ್ಳುತ್ತಿದೆ.
ಗಟ್ಟಿಮೇಳ ಧಾರಾವಾಹಿಯ ನಾಯಕ ಹಾಗೂ ನಿರ್ಮಾಪಕ ಕೂಡಾ ಆಗಿರುವ ಸ್ಯಾಂಡಲ್ವುಡ್ ಹಾಗೂ ಕನ್ನಡ ಕಿರುತೆರೆಯಲ್ಲಿಯೂ ಜನಪ್ರಿಯತೆ ಪಡೆದಿರುವ ನಟ ರಕ್ಷ್ ಅವರು ತಮ್ಮ ಜೀವನದಲ್ಲಿ ಮತ್ತೊಂದು ಹೊಸ ವಸಂತಕ್ಕೆ ಅಡಿಯಿರಿಸಿದ್ದಾರೆ. ಒಂದು ವರ್ಷ ಹಿರಿಯರಾಗಿದ್ದಾರೆ, ಅಂದರೆ ನಟ ರಕ್ಷ್ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ. ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ನಟ ರಕ್ಷ್ ಬ್ಯುಸಿ ಶೆಡ್ಯೂಲ್ ನ ನಡುವೆಯೂ ಬಿಡುವು ಮಾಡಿಕೊಂಡು ಶಿರಡಿ ಕ್ಷೇತ್ರಕ್ಕೆ ವಿಮಾನದಲ್ಲಿ ಹಾರಿದ್ದಾರೆ.
ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ ನೀಡುವ ಸಲುವಾಗಿ ನಟ ರಕ್ಷ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಸಂತೋಷದ ಕ್ಷಣಗಳ ಒಂದು ಸುಂದರ ನೋಟವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಶಿರಡಿಯಿಂದ ಒಂದು ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ನಟ ರಕ್ಷ್ ಅವರು ಆ ಮೂಲಕ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆಯನ್ನು ಸಹಾ ಸಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ.
ವೀಡಿಯೋ ಮೂಲಕ ನಟ ರಕ್ಷ್ ತಮ್ಮ ಧಾರಾವಾಹಿಗೆ ಪ್ರೇಕ್ಷಕರು ಹಾಗೂ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ಹೃದಯಪೂರ್ವವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ವೇದಾಂತ್ ವಿವಾಹದ ಸಂಚಿಕೆಗಳಿಗೆ ವೀಕ್ಷಕರು ನೀಡಿದ ಪ್ರೀತಿ, ಧಾರಾವಾಹಿಗೆ ಸಿಕ್ಕಿದ ಟಿ ಆರ್ ಪಿ ಹಾಗೂ ಕನ್ನಡ ಕಿರುತೆರೆಯಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಧಾರಾವಾಹಿ ಎನ್ನುವ ಹೆಗ್ಗಳಿಕೆಯನ್ನು ಪಡೆದ ಗಟ್ಟಿಮೇಳ ಧಾರಾವಾಹಿಯ ಯಶಸ್ಸಿಗೆ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ತನ್ನ ಜನ್ಮದಿನಕ್ಕೆ ಈ ಬಾರಿ ಮೊದಲು ಮಾಡಿದ ಕೆಲಸ ಶಿರ್ಡಿಗೆ ಭೇಟಿ ನೀಡಿದ್ದು ಎನ್ನುವ ಮಾತನ್ನು ಸಹಾ ರಕ್ಷ್ ಹೇಳಿದ್ದಾರೆ. ಕನ್ನಡ ಕಿರುತೆರೆಯ ಲೋಕದಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ರಕ್ಷ್ ಪುಟ್ಟಗೌರಿ ಮದುವೆ ಸೀರಿಯಲ್ ನ ಮಹೇಶ ಪಾತ್ರದ ಮೂಲಕ ಕಿರುತೆರೆಗೆ ಅಡಿಯಿಟ್ಟವರು. ಆ ಪಾತ್ರದ ಮೂಲಕ ಅವರು ಮನೆ ಮಾತಾದರು. ನಂತರ ಗಟ್ಟಿಮೇಳದ ವೇದಾಂತ್ ವಸಿಷ್ಠನ ಪಾತ್ರದಲ್ಲಿ ಮತ್ತೊಮ್ಮೆ ಕಿರುತೆರೆಯ ಪ್ರೇಕ್ಷಕರ ಮುಂದೆ ಬಂದ ಅವರು ಈ ಪಾತ್ರದ ಮೂಲಕ ಇನ್ನಷ್ಟು ಜನಪ್ರಿಯತೆ ತಮ್ಮದಾಗಿಸಿಕೊಂಡಿದ್ದಾರೆ.