ಜೀವನದ ಅದೃಷ್ಟದ ಬಾಗಿಲು ತೆರೆಯಲು ಭಾನುವಾರ ಈ ಕೆಲಸಗಳನ್ನು ತಪ್ಪದೇ ಮಾಡಿ: ಶುಭ ಫಲ ಪಡೆಯಿರಿ

0 1

ಹಿಂದೂ ಧರ್ಮದಲ್ಲಿ, ವಾರದ ಪ್ರತಿಯೊಂದು ದಿನವೂ ಒಂದೊಂದು ದೇವತೆಗೆ ಮೀಸಲಾಗಿದೆ. ಇಂದು ಭಾನುವಾರ ಮತ್ತು ಈ ದಿನವು ಸೂರ್ಯನಿಗೆ ಸಮರ್ಪಿತವಾಗಿದೆ. ಸನಾತನ ಧರ್ಮದಲ್ಲಿ ಸೂರ್ಯ ದೇವರನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ ಎನ್ನುವ ನಂಬಿಕೆಯಿದೆ. ಇದು ಎಲ್ಲಾ ಗ್ರಹಗಳಿಗಿಂತ ಅತ್ಯಂತ ಶಕ್ತಿಶಾಲಿಯಾಗಿದೆ. ಈ ದಿನದಂದು ಸಮರ್ಪಕವಾಗಿ, ನಿಯಮಗಳ ಅನುಸಾರ ಸೂರ್ಯ ದೇವನನ್ನು ಪೂಜಿಸಿದರೆ ನಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಎನ್ನಲಾಗಿದೆ. ಈ ದಿನ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಲಾಗುತ್ತದೆ ಮತ್ತು ಕೆಲವರು ಉಪವಾಸವನ್ನು ಸಹ ಆಚರಣೆ‌ ಮಾಡುತ್ತಾರೆ.

ಸೂರ್ಯ ಭಗವಾನನು ನಮಗೆ ನೇರ ದರ್ಶನ ನೀಡುವುದರಿಂದ ಸೂರ್ಯನ ಆರಾಧನೆಯೂ ಅಗತ್ಯ ಎಂದು ನಂಬಲಾಗಿದೆ. ಭಾನುವಾರದಂದು ಕೆಲವು ಕ್ರಮಗಳನ್ನು ಅನುಸರಿಸುವುದರಿಂದ, ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ನಮ್ಮ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ ಎಂದು ನಂಬಲಾಗಿದೆ. ನೀವೂ ಸಹ ಜೀವನದಲ್ಲಿ ಸಂಪತ್ತು, ಕೀರ್ತಿ ಮತ್ತು ಸಮೃದ್ಧಿಯನ್ನು ಪಡೆಯಲು ಬಯಸುವುದೇ ಆದರೆ, ಖಂಡಿತವಾಗಿಯೂ ಭಾನುವಾರದಂದು ಕೆಲವೊಂದು ಕ್ರಮಗಳನ್ನು ಅನುಸರಿಸಿ.

ನೀವು ಸೂರ್ಯ ದೇವನ ಆಶೀರ್ವಾದವನ್ನು ಪಡೆಯಲು ಬಯಸುವುದಾದರೆ, ಭಾನುವಾರದಂದು, ಸ್ನಾನ ಇತ್ಯಾದಿಗಳನ್ನು ಮಾಡಿ ಮುಗಿಸಿ, ನಂತರ ಉದಯಿಸುವ ಸೂರ್ಯನಿಗೆ ನೀರನ್ನು ಅರ್ಪಿಸಿ. ನೀರನ್ನು ಅರ್ಪಿಸಲು ತಾಮ್ರದ ಪಾತ್ರೆಗಳನ್ನು ಮಾತ್ರ ಬಳಸಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ಭಾನುವಾರದಂದು ಪೊರಕೆಯನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಭಾನುವಾರ ಮತ್ತು ಮರುದಿನ 3 ಪೊರಕೆಗಳನ್ನು ಖರೀದಿಸಿ, ಅಂದರೆ ಸೋಮವಾರ, ನಿಮ್ಮ ಹತ್ತಿರದ ದೇವಸ್ಥಾನಕ್ಕೆ ಹೋಗಿ ಪೊರಕೆಯನ್ನು ದಾನ ಮಾಡಿ.

ನಿಮಗೇನಾದರೂ ಆಸೆಯಿದ್ದರೆ ಭಾನುವಾರದಂದು ಆಲದ ಮರದಿಂದ ಒಂದು ಎಲೆಯನ್ನು ತನ್ನಿ. ನಂತರ ಈ ಎಲೆಯ ಮೇಲೆ ನಿಮ್ಮ ಆಸೆಯನ್ನು ಬರೆದು ಹರಿಯುವ ನೀರಿನಲ್ಲಿ ಎಸೆಯಿರಿ. ಆಲದ ಮರದ ಎಲೆಯನ್ನು ಭಾನುವಾರದಂದು ಪೂಜಿಸಲಾಗುತ್ತದೆ ಮತ್ತು ಇದು ಭಗವಂತನನ್ನು ಮೆಚ್ಚಿಸುತ್ತದೆ ಎನ್ನಲಾಗಿದೆ. ಆದ್ದರಿಂದ, ಭಾನುವಾರ ಸಂಜೆ, ಹಿಟ್ಟಿನಿಂದ ನಾಲ್ಕು ಮುಖದ ದೀಪವನ್ನು ಮಾಡಿ ನಂತರ ಅದನ್ನು ಆಲದ ಮರದ ಕೆಳಗೆ ಬೆಳಗಿಸಿ. ಇದು ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ.

Leave A Reply

Your email address will not be published.