ಜೀವನದಲ್ಲಿ ಹೊಸ ಹೆಜ್ಜೆ, ಅಪ್ಪ ಅಮ್ಮನ ಆಸೆ ಈಡೇರಿಸಲು ಬಿಗ್ ಬಾಸ್ ಖ್ಯಾತಿಯ ನಟಿ ಚಂದನಾ ಸಜ್ಜು

Entertainment Featured-Articles News
46 Views

ಕಿರುತೆರೆಯ ನಟಿ ಚಂದನಾ ಅನಂತ ಕೃಷ್ಟ ಈಗಾಗಲೇ ಸಾಕಷ್ಟು ಜನಪ್ರಿಯತೆ ತನ್ನದಾಗಿಸಿಕೊಂಡಿದ್ದಾರೆ. ಚಂದನಾ ಬಿಗ್ ಬಾಸ್ ಗೆ ಬಂದ ಮೇಲೆ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟಿ ಚಂದನಾ ಕೃಷ್ಣ ಅವರು ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಹೊಸ ಪೋಸ್ಟ್ ಹಂಚಿಕೊಳ್ಳುವ ಮೂಲಕ ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ಎಂದು ಬಹಳ ಆಸಕ್ತಿಕಕರವಾದ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಅವರ ಅಭಿಮಾನಿಗಳು ಸಹಾ ಖುಷಿ ಪಟ್ಟಿದ್ದಾರೆ.

ಚಂದನಾ ಅವರು ಭರತ ನಾಟ್ಯ ಅಭ್ಯಾಸ ಮಾಡಿದ ನಂತರದ ಫೋಟೋ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಅವರು, “ಇಂದು ಜೀವನದ ಹೊಸದೊಂದು ಹೆಜ್ಜೆ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ. ಭರತನಾಟ್ಯದಲ್ಲಿ ಮುಂದುವರೆಯಬೇಕೆಂಬುದು ಅಪ್ಪ, ಅಮ್ಮನ ಕನಸು, ನನ್ನ ಕನಸು ಕೂಡಾ. ಅದರಂತೆಯೇ ಇವತ್ತು ಎಂಪಿಎ ಮೊದಲನೇ ಪ್ರಾಕ್ಟಿಕಲ್ ಕ್ಲಾಸ್ ನಲ್ಲಿ ಭಾಗವಹಿಸಿದ ಖುಷಿ ನನ್ನದು. ಎಂದಿನಂತೆಯೇ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೀರಲಿ” ಎಂದು ಬರೆದುಕೊಂಡಿದ್ದಾರೆ.

ಬಿಗ್ ಬಾಸ್ ಮೂಲಕ ಚಂದನಾ ಅವರು ಸಾಕಷ್ಟು ಚಿರಪರಿಚಿತರಾಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಲಕ್ಷಾಂತರ ಜನರು ಅವರನ್ನು ಫಾಲೋ ಮಾಡುತ್ತಾರೆ. ಭರತನಾಟ್ಯ ಕಲಿತಿರುವ ಅವರು ಇದೀಗ ಅದರಲ್ಲೇ ಮುಂದುವರೆಯಲು, ತಮ್ಮ ಅಪ್ಪ ಅಮ್ಮನ ಕನಸನ್ನು , ಅವರ ಆಸೆಯನ್ನು ಈಡೇರಿಸಲು ಜೀವನದಲ್ಲಿ ಒಂದು ಮಹತ್ವದ ಹೊಸ ಹೆಜ್ಜೆ ಎನ್ನುವಂತಹ ನಿರ್ಧಾರವನ್ನು ಮಾಡಿದ್ದಾರೆ. ಖಾಸಗಿ ವಾಹಿನಿಯೊಂದರ ಸೀರಿಯಲ್ ನಲ್ಲಿ ಚಂದನಾ ಅವರು ಪ್ರಮುಖವಾದ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಅಪ್ಪ, ಅಮ್ಮನ ಕನಸು ಹಾಗೂ ತನ್ನ ಕನಸನ್ನು ನನಸು ಮಾಡಲು, ಅದರ ಕಡೆಗೆ ಗಮನವನ್ನು ನೀಡುವ ಚಂದನಾ ಅವರ ನಿರ್ಧಾರವು ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ. ಚಂದನಾ ಅವರು ಹಂಚಿಕೊಂಡ ಈ ಪೋಸ್ಟ್ ನೋಡಿ ಬಹಳಷ್ಟು ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ ಹಾಗೂ ಅನೇಕರು ಕಾಮೆಂಟ್ ಗಳ ಮೂಲಕವೂ ಸಹಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *