ಜಾಹೀರಾತು ಕಂಡು ಕಕ್ಕಾಬಿಕ್ಕಿಯಾದ ಜನ: ಅಂತದ್ದೇನಿತ್ತು ಈ ಜಾಹೀರಾತಲ್ಲಿ!! ಸ್ಪಷ್ಟನೆ ನೀಡಿದ ಮಾಲೀಕ

Written by Soma Shekar

Published on:

---Join Our Channel---

ಪ್ರಸ್ತುತ ಕಾಲದಲ್ಲಿ ಒಂದು ಸೂಜಿಯಿಂದ ಹಿಡಿದು ವಿಮಾನದ ವರೆಗೂ ಯಾವುದೇ ವಸ್ತುವಿನ ಮಾರಾಟವನ್ನು ಮಾಡಲು, ಬೇಡಿಕೆಯನ್ನು ಹೆಚ್ಚಿಸಲು ಜಾಹೀರಾತುಗಳು ಬಹಳ ಪ್ರಮುಖ ಎನಿಸಿವೆ. ಆದ್ದರಿಂದಲೇ ಟಿವಿ, ಸಿನಿಮಾ, ಸೋಶಿಯಲ್ ಮೀಡಿಯಾ ಹೀಗೆ ಎಲ್ಲಾ ಕಡೆಗಳಲ್ಲಿ ಕೂಡಾ ಹಲವು ಸುಪ್ರಸಿದ್ಧ ಬ್ರಾಂಡ್ ಗಳು ತಮ್ಮ ಉತ್ಪನ್ನಗಳನ್ನು ಜನರ ಮುಂದೆ ಇರಿಸಲು ವೈವಿಧ್ಯಮಯ ವಾದಂತಹ ಹಾಗೂ ವಿನೂತನ ಎನಿಸುವಂಥ ಜಾಹೀರಾತುಗಳನ್ನು ತರುವ ಮೂಲಕ ಜನರ ಗಮನವನ್ನು ಸೆಳೆಯುತ್ತವೆ. ಇನ್ನು ಈ ಜಾಹೀರಾತುಗಳ ಪ್ರಭಾವ ಹೇಗಿದೆ ಎನ್ನುವುದಾದರೆ ಅನೇಕ ಜನರು ಜಾಹೀರಾತುಗಳನ್ನು ನೋಡಿ ಮೋಸ ಹೋಗಿರುವ ಉದಾಹರಣೆಗಳು ಇದೆ.

ಜಾಹೀರಾತು ಎನ್ನುವುದು ಜನರ ಮನಸ್ಸಿನ ಮೇಲೆ ಬಹಳಷ್ಟು ಪರಿಣಾಮವನ್ನು ಬೀರುತ್ತದೆ. ಆದ್ದರಿಂದಲೇ ಯಾವುದೇ ಒಂದು ಉತ್ಪನ್ನ ಅಥವಾ ಇನ್ನಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಜಾಹೀರಾತನ್ನು ನೀಡುವಾಗ ಅವು ಬಹಳ ಪರಿಣಾಮಕಾರಿಯಾಗಿ ಜನರ ಮನಸ್ಸನ್ನು ಹೇಗೆ ತಲುಪಲು ಸಾಧ್ಯ ಎಂದು ಆಲೋಚನೆ ಮಾಡಿ, ವಿಶಿಷ್ಟ ರೀತಿಯಲ್ಲಿ ಜಾಹೀರಾತುಗಳನ್ನು ರೂಪಿಸಲು ಸಾಕಷ್ಟು ವಿಭಿನ್ನವಾಗಿ ಆಲೋಚನೆಯನ್ನು ಮಾಡುವ ಕಂಪನಿಗಳು ಸಹಾ ತಲೆ ಎತ್ತಿವೆ. ಆದರೆ ಕೆಲವೊಮ್ಮೆ ಇಂತಹ ಆಲೋಚನೆಗಳು ಕೂಡಾ ಉಲ್ಟಾ ಹೊಡೆಯುತ್ತವೆ.

ಇಂತಹ ಒಂದು ತಾಜಾ ಉದಾಹರಣೆ ಎನ್ನುವಂತೆ, ಜಾಹೀರಾತನ್ನು ನೀಡಲು ಹಂಚಿಕೊಂಡ ಫೋಟೋಗಳು ಜನರನ್ನು ಗೊಂದಲಕ್ಕೀಡು ಮಾಡಿದ ಘಟನೆಯೊಂದು ನಡೆದಿದೆ. ಜನ ಜಾಹೀರಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಹೌದು, ಇಂತಹದೊಂದು ವಿಚಿತ್ರವಾದ ಘಟನೆ ಥೈಲ್ಯಾಂಡಿನಲ್ಲಿ ನಡೆದಿದೆ. ಥೈಲ್ಯಾಂಡಿನ ನಾಕೋನ್ ಸಾವನ್ ಎನ್ನುವ ನಗರದಲ್ಲಿ ‘ರಿಯಲ್ ಕಟ್ 4’ ಎನ್ನುವ ಹೆಸರಿನ ಹೇರ್ ಕಟಿಂಗ್ ಅಂಗಡಿಯೊಂದನ್ನು ಪ್ರಾರಂಭಿಸಲಾಗಿದೆ. ಈ ಅಂಗಡಿಯ ಜಾಹೀರಾತಿನ ಭಾಗವಾಗಿ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಜಾಹೀರಾತಿನ ಭಾಗವಾಗಿ ಹೇರ್ ಸಲೂನ್ ಅವರ ಅಧಿಕೃತ ಪೇಜ್ ನಲ್ಲಿ ಶೇರ್ ಮಾಡಿದ ಫೋಟೋಗಳಲ್ಲಿ ಕಡಿಮೆ ವಸ್ತ್ರವನ್ನು ಧರಿಸಿದ ಮಹಿಳೆಯರು ಪುರುಷ ಗ್ರಾಹಕರ ಜೊತೆಗೆ ಇರುವಂತಹ ದೃಶ್ಯಗಳ ಮೂಲಕ ಜಾಹೀರಾತನ್ನು ನೀಡಲಾಗಿತ್ತು. ಇದನ್ನು ನೋಡಿದ ಜನರು ಇದು ಹೇರ್ ಕಟಿಂಗ್ ಸಲೂನಾ? ಅಥವಾ ಬೇರೆ ಏನಾದರೂ ಅಂಗಡಿಯಾ? ಎನ್ನುವ ಅನುಮಾನ ಹೊರಹಾಕಿದ್ದಾರೆ. ಫೋಟೋಗಳ ಕುರಿತಾಗಿ ಜೋರು ಚರ್ಚೆ ನಡೆದಿದೆ. ಅಲ್ಲದೇ ಕೆಲವರು ಇದು ಹೇರ್ ಕಂಟಿಂಗ್ ಸೆಲೂನ್ ಅಲ್ಲ ಬದಲಿಗೆ ಥಾಯ್ ವೈ ಶ್ಯಾ ಗೃಹ ಎನ್ನುವಂತಿದೆ ಎಂದು ಟೀಕಿಸಿದ್ದಾರೆ.

ಜಾಹಿರಾತಿಗಾಗಿ ಶೇರ್ ಮಾಡಿದ ಫೋಟೋಗಳು ಹೀಗೆ ದೊಡ್ಡ ಚರ್ಚೆಗೆ ಕಾರಣವಾಗಿ, ಟೀಕೆಗಳು ಹರಿದ ಬಂದ ಬೆನ್ನಲ್ಲೇ, ಹೇರ್ ಸಲೂನ್ ನ ಮಾಲೀಕರು ತಮ್ಮ ಅಧಿಕೃತ ಪೇಜ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಪೇಜಿನಲ್ಲಿ ಜಾಹೀರಾತಿನ ಭಾಗವಾಗಿ ಹಂಚಿಕೊಂಡ ಫೋಟೋಗಳನ್ನು ನೋಡಿದ ಮೇಲೆ ಬಹಳಷ್ಟು ಜನರು ಕರೆ ಮಾಡಿ ವಿಚಾರಣೆ ಮಾಡಿದ್ದಾರೆ. ಇದು ಪ್ರಮೋಷನಲ್ ಫೋಟೋ ಶೂಟ್ ನ ದೃಶ್ಯಗಳ ಫೋಟೋಗಳು, ನಮ್ಮಲ್ಲಿ ಹೇರ್ ಕಟಿಂಗ್ ಸೌಲಭ್ಯ ಮಾತ್ರವೇ ಸಿಗುತ್ತೆ ಆದರೆ ಫೋಟೋ ನೋಡಿ ಜನ ತಪ್ಪು ಭಾವಿಸಿದ್ದಾರೆ.

ಇನ್ನು ನಮ್ಮಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಪುರುಷರು ಕೆಲಸ ಮಾಡುತ್ತಾರೆ. ಫೋಟೋದಲ್ಲಿ ಕಾಣಿಸಿಕೊಂಡಿರುವುದು ಹೇರ್ ಸಲೂನ್ ನ ಮಾಲೀಕರು ಎಂದು ಬರೆದುಕೊಂಡು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಜಾಹೀರಾತಿನಲ್ಲಿ ಕಾಣಿಸಿಕೊಂಡ ಹುಡುಗಿಯರು ಕೂಡಾ ನಾವು ಮಾಲೀಕನ ಪತ್ನಿಯ ಸ್ನೇಹಿತೆಯರು, ಅವರಿಗೆ ಸಹಾಯ ಮಾಡೋದಿಕ್ಕೆ ಈ ಫೋಟೋ ಶೂಟ್ ನಲ್ಲಿ ಅವರ ಜೊತೆಗೆ ನಾವು ಇದ್ವಿ ಎನ್ನುವ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.

Leave a Comment