ಜಾತಿ ಆಧಾರದ ಮೀಸಲಾತಿ ನಿಲ್ಲಿಸಿ, ಆರ್ಥಿಕ ಸ್ಥಿತಿ ಆಧಾರದಲ್ಲಿ ಮೀಸಲಾತಿ ನೀಡಲಿ: ಮುಖ್ಯಮಂತ್ರಿ ಚಂದ್ರು

Written by Soma Shekar

Published on:

---Join Our Channel---

ನಮ್ಮ ದೇಶದಲ್ಲಿ ಸಂವಿಧಾನದ ಮೂಲಕವೇ ಕೆಲವು ಜಾತಿಗಳಿಗೆ ವಿಶೇಷವಾದ ಮೀಸಲಾತಿಗಳನ್ನು ನೀಡಲಾಗಿದೆ. ಈ ಮೀಸಲಾತಿಯ ವಿಚಾರವು ಆಗಾಗ ಚರ್ಚೆಗಳಿಗೆ, ವಿಮರ್ಶೆಗಳಿಗೆ ಕಾರಣವಾಗುತ್ತದೆ. ಇದರ ಪರವಾಗಿ ಹಾಗೂ ವಿರೋಧವಾಗಿ ಮಾತನಾಡುವ ದೊಡ್ಡ ಬಣಗಳೇ ನಮ್ಮ ದೇಶದಲ್ಲಿವೆ. ಇಲ್ಲಿ ಯಾರು? ಯಾರು ತಪ್ಪು? ಎನ್ನುವುದಕ್ಕಿಂದ ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಷಯವು ತೀವ್ರವಾದ ಚರ್ಚೆಯನ್ನು ಹುಟ್ಟು ಹಾಕಿದರೆ, ಇನ್ನೂ ಕೆಲವು ಸಂದರ್ಭಗಳಲ್ಲಿ ಈ ವಿಚಾರವು ಎಲ್ಲಾ ಮಾತಿನ ಎಲ್ಲೆಯನ್ನು ಮೀರಿ ಪರಸ್ಪರ ಅ ಶಾಂ ತಿ ಮತ್ತು ಅಸಮಾಧಾನಕ್ಕೆ ಕೂಡಾ ಕಾರಣವಾಗುವುದು ಸಹಜ. ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಕೂಡಾ ನೀಡುವ ಹೇಳಿಕೆಗಳು ಸುದ್ದಿಯಾಗುತ್ತವೆ.

ಇದೀಗ ಅಂತುಹುದೇ ಒಂದು ಹೇಳಿಕೆಯನ್ನು ನೀಡಿದ್ದಾರೆ ಹಿರಿಯ ನಟ ಹಾಗೂ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವ ಅಧ್ಯಕ್ಷರಾಗಿರುವ ಡಾ. ಮುಖ್ಯಮಂತ್ರಿ ಚಂದ್ರು ಅವರು. ಹೌದು ಮುಖ್ಯಮಂತ್ರಿ ಚಂದ್ರು ಅವರು ತುಮಕೂರಿನಲ್ಲಿ ಮಾತನಾಡುತ್ತಾ ಸರ್ಕಾರದ ಮುಂದೆ ಒಂದು ಆಗ್ರಹವನ್ನು ಮಾಡುವ ಮೂಲಕ ಗಮನವನ್ನು ಸೆಳೆದಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರು ಜಾತಿ ಆಧಾರದ ಮೇಲೆ ನೀಡಲಾಗುವ ಮೀಸಲಾತಿಯನ್ನು ನಿಲ್ಲಿಸಬೇಕು ಎನ್ನುವ ಮಾತನ್ನು ಹೇಳುವ ಮೂಲಕ ಇದೀಗ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರು ಜಾತಿ ಆಧಾರದ ಮೇಲಿನ ಮೀಸಲಾತಿ ನಿಲ್ಲಿಸಬೇಕು ಎಂದು ಹೇಳುತ್ತಲೇ, ಆರ್ಥಿಕತೆಯ ಆಧಾರದ ಮೇಲೆ ಮೀಸಲಾತಿಯನ್ನು ನೀಡಬೇಕು ಎನ್ನುವ ಸಲಹೆಯೊಂದನ್ನು ನೀಡಿದ್ದಾರೆ.

ಸರ್ಕಾರಗಳು ಆಯಾ ಜಾತಿಯಲ್ಲಿ ಬಡವರನ್ನು ಹುಡುಕುವ ಕೆಲಸವನ್ನು ಮಾಡಲಿ, ಅನಂತರ ಅದರ ಆಧಾರದ ಮೇಲೆ ಮೀಸಲಾತಿಯನ್ನು ನೀಡಬೇಕು ಎಂದಿದ್ದಾರೆ. ಈಗಾಗಲೇ ನಡೆದಿರುವಂತಹ ಆರ್ಥಿಕ,ಸಾಮಾಜಿಕ ಗಣತಿಯ ವರದಿಯು ಮಂಡನೆಯಾಗಲಿ, ಅದರ ಆಧಾರದಲ್ಲಿ ಸರ್ಕಾರವು ಮೀಸಲಾತಿಯನ್ನು ನೀಡಬೇಕು. ಜಾತಿಗಳ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಅದಕ್ಕೆ ತಕ್ಕ ಹಾಗೆ ಮೀಸಲಾತಿಯನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಸುದ್ದಿಯಾದ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಪರ, ವಿರೋಧದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Leave a Comment