ಜಲಾಲುದ್ದೀನ್ ರೂಮಿ ಶಿವ ಆಗಿದ್ದೇಕೆ? ಬ್ರಹ್ಮಾಸ್ತ್ರ ನಿರ್ದೇಶಕನ ಮೇಲೆ ನಟಿ ಕಂಗನಾ ಆರೋಪ, ಶಾಕಿಂಗ್ ಸತ್ಯ ಬಹಿರಂಗ!

Entertainment Featured-Articles Movies News

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿಯಾಗಿ, ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಬ್ರಹ್ಮಾಸ್ತ್ರ ನಿನ್ನೆ ಬಿಡುಗಡೆಯಾಗಿದೆ. ಬಿಡುಗಡೆಯ ನಂತರ ಸಿನಿಮಾ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.‌‌ ಮತ್ತೊಂದೆಡೆ ಸಿನಿಮಾ ಮೊದಲ ದಿನವೇ ಸುಮಾರು 30 ಕೋಟಿಗೂ ಮೀರಿದ ಕಲೆಕ್ಷನ್ ಮಾಡಿದೆ ಎನ್ನುವ ಸುದ್ದಿಗಳು ಹರಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆರೆಗೆ ಬಂದಿರುವ ಬ್ರಹ್ಮಾಸ್ತ್ರ ಸಿನಿಮಾದ ಮೇಲೆ ಬಾಲಿವುಡ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಏಕೆಂದರೆ ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್ ಗೆ ಈಗ ಒಂದು ಸೂಪರ್ ಹಿಟ್ ಸಿನಿಮಾದ ಅನಿವಾರ್ಯತೆ ಇದೆ.

ಬ್ರಹ್ಮಾಸ್ತ್ರ ಸಿನಿಮಾದ ಓಪನಿಂಗ್ ಸುತ್ತು ಸುಣ್ಣವಾಗಿರುವ ಬಾಲಿವುಡ್ ಗೆ ಚೇತರಿಕೆ ನೀಡುವಂತಾಗಿದೆ. ಸಿನಿಮಾ ಬಗ್ಗೆ ಪಾಸಿಟಿವ್ ಮತ್ತು ನೆಗೆಟಿವ್ ರಿವ್ಯೂ ಗಳು ಬರುವಾಗಲೇ ಬಾಲಿವುಡ್ ನಟಿ ಕಂಗನಾ ರಣಾವತ್ ಬ್ರಹ್ಮಾಸ್ತ್ರ ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದು, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನೇರವಾಗಿ ಹೆಸರನ್ನು ಹೇಳುವ ಮೂಲಕವೇ ನಟಿಯು ನಿರ್ದೇಶಕ ಅಯಾನ್ ಮುಖರ್ಜಿ ಯನ್ನು ಬುದ್ಧಿವಂತ ಎಂದು ಕರೆದವರನ್ನೆಲ್ಲಾ ಜೈಲಿಗೆ ಹಾಕಬೇಕು ಎಂದು ಹೇಳಿದ್ದಾರೆ. ಅಯಾನ್ ಮುಖರ್ಜಿ ಸಿನಿಮಾ ತಯಾರು ಮಾಡಲು 12 ವರ್ಷಗಳನ್ನು ತೆಗೆದುಕೊಂಡಿದ್ದಾರೆ.

ಅವರು 14 ಡಿಓಪಿ ಗಳನ್ನು ಬದಲಾಯಿಸಿದ್ದಾರೆ.‌ 400 ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ಮಾಡಿದ್ದಾರೆ. 45 ಕ್ಕೂ ಅಧಿಕ ಮಂದಿ ಸಹಾ ನಿರ್ದೇಶಕರನ್ನು ಬದಲಾಯಿಸಿರುವ ಅವರು 600 ಕೋಟಿ ರೂಪಾಯಿಗಳನ್ನು ಸುಟ್ಟು ಹಾಕಿದ್ದಾರೆ. ಜನರ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳಲು ಸಿನಿಮಾದ ಹೆಸರನ್ನು ಜಲಾಲುದ್ದೀನ್ ರೂಮಿಯಿಂದ ಶಿವ ಎಂದು ಬದಲಾಯಿಸಿದ್ದಾರೆ.‌ ಬಾಹುಬಲಿ ಸಿನಿಮಾದ ಯಶಸ್ಸಿನಿಂದಾಗಿ ಕೊನೆ ಕ್ಷಣದಲ್ಲಿ ಟೈಟಲ್ ಅನ್ನು ಬದಲಾಯಿಸಿಕೊಂಡಿದ್ದಾರೆ.‌ ಕರಣ್ ಜೋಹರ್ ನಂತಹ ನಿರ್ಮಾಪಕರು ಇದನ್ನು ಪ್ರಶ್ನೆ ಮಾಡಬೇಕು. ಆದರೆ ಅವರಿಗೆ ಸಿನಿಮಾದ ಸ್ಕ್ರಿಪ್ಟ್ ಗಿಂತ ಇತರರ ಲೈಂ ಗಿ ಕ ಜೀವನದ ಬಗ್ಗೆ ಆಸಕ್ತಿ ಹೆಚ್ಚು.

ಈ ಬಾರಿ ಕರಣ್ ಹಿಂದುತ್ವ ಮತ್ತು ದಕ್ಷಿಣದ ಕಡೆಗೆ ಸವಾರಿ ಮಾಡಿ ಜನರ ಮೆಚ್ಚುಗೆಯನ್ನು ಗಳಿಸಲು ಹೊರಟಿದ್ದಾರೆ. ಸಿನಿಮಾ ಚೆನ್ನಾಗಿದೆ ಎಂದು ವಿಮರ್ಶೆ ಮಾಡಿಸಿ, ಸುಳ್ಳು ರೇಟಿಂಗ್ ಕೊಟ್ಟು, ಕಲೆಕ್ಷನ್ ಬಗ್ಗೆ ಹೇಳುತ್ತಾರೆ. ದಕ್ಷಿಣದ ಸ್ಟಾರ್ ಗಳನ್ನು, ಬರಹಗಾರರನ್ನು, ನಿರ್ದೇಶಕರನ್ನು ಸಿನಿಮಾದ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ. ಅವರು ಎಲ್ಲವನ್ನು ಸಹಾ ಮಾಡುತ್ತಾರೆ ಆದರೆ ಬ್ರಹ್ಮಾಸ್ತ್ರ ಎನ್ನುವ ದುರಂತವನ್ನು ಸರಿ ಮಾಡಲು ಒಳ್ಳೆಯ ನಿರ್ದೇಶಕ, ಕಲಾವಿದರನ್ನು ಏಕೆ ಬಳಸಿಕೊಳ್ಳಲಿಲ್ಲ? ಎಂದು ಕಂಗನಾ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.