ಎಲ್ಲರಂತಲ್ಲ ರಕುಲ್ ಪ್ರೀತ್: ಜನ್ಮದಿನದಂದೇ ಬಾಳ ಸಂಗಾತಿಯನ್ನು ಪರಿಚಯಿಸಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ನಟಿ

0 0

ತನ್ನ ಅಂದ ಹಾಗೂ ನಟನೆಯಿಂದಾಗಿ ಅಪಾರ ಅಭಿಮಾನಿಗಳನ್ನು ಪಡೆದಿರುವ ನಟಿ ರಕುಲ್ ಪ್ರೀತ್ ದಕ್ಷಿಣ ಸಿನಿಮಾ ರಂಗದಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟಿ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇಂದು ರಕುಲ್ ಪ್ರೀತ್ ಸಿಂಗ್ ಅವರ ಜನ್ಮದಿನ, ಇಂದು ತಮ್ಮ ಜನ್ಮದಿನದ ಸಂಭ್ರಮದ ದಿನವೇ ಮತ್ತೊಂದು ಸಂಭ್ರಮವನ್ನು ತಮ್ಮ ಅಭಿಮಾನಿಗಳು ಹಾಗೂ ನೆಟ್ಟಿಗರೊಡನೆ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಒಂದು ದೊಡ್ಡ ಸರ್ಪ್ರೈಸ್ ಅನ್ನು ನೀಡಿದ್ದಾರೆ ರಕುಲ್ ಪ್ರೀತ್ ಸಿಂಗ್.

ರಕುಲ್ ಪ್ರೀತ್ ಇಂದು ದೊಡ್ಡ ಸ್ಟಾರ್ ನಟಿಯಾಗಿದ್ದಾರೆ ಆದರೆ ಈ ನಟಿ ತಮ್ಮ ಸಿನಿ ಕೆರಿಯರ್ ಆರಂಭಿಸಿದ್ದು ಕನ್ನಡ ಸಿನಿಮಾದಿಂದ. ಇಂದು ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ತೊಡಗಿಕೊಂಡಿರುವ ರಕುಲ್ ಇಂದು ತಮ್ಮ 31 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಖುಷಿಯ ದಿನದಂದು ರಕುಲ್ ಪ್ರೀತ್ ತಮ್ಮ ಬಾಳ ಸಂಗಾತಿಯನ್ನ ಎಲ್ಲರಿಗೂ ಪರಿಚಯಿಸುವ ಮೂಲಕ ಎಲ್ಲರಿಗೂ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಬಾಳ ಸಂಗಾತಿ ಆಗುವವರನ್ನು ಮಾದ್ಯಮಗಳ ಮುಂದೆ ಬಹಳ ಬೇಗ ಪರಿಚಯ ಮಾಡುವುದಿಲ್ಲ.

ಕೆಲವರಂತೂ ಮದುವೆಯ ವರೆಗೂ ಅದನ್ನು ಬಹಳ ಸೀಕ್ರೇಟ್ ಆಗಿಯೇ ಇಡುತ್ತಾರೆ. ಇದೀಗ ರಕುಲ್ ಪ್ರೀತ್ ಅಂತಹ ಯಾವುದೇ ಸೀಕ್ರೆಟ್ ಗೆ ಅವಕಾಶ ನೀಡದೆ ತಮ್ಮ ಸಂಗಾರಿಯಾಗಲಿರುವ ವ್ಯಕ್ತಿಯನ್ನು ಪರಿಚಯ ಮಾಡಿದ್ದಾರೆ. ಅದಕ್ಕಾಗಿ ತಮ್ಮ ಜನ್ಮದಿನವನ್ನು ಅವರು ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ‌. ರಕುಲ್ ಸೋಶಿಯಲ್ ಮೀಡಿಯಾ ಮೂಲಕ ಸಂಗಾತಿಯನ್ನು ಪರಿಚಯಿಸಿದ್ದು, ಅವರ ಹೆಸರು ಜಾಕಿ ಭಗ್ನಾನಿ. ರಕುಲ್ ತಮ್ಮ ಪೋಸ್ಟ್ ನಲ್ಲಿ ಕೆಲವೊಂದು ಸಾಲುಗಳನ್ನು ಬರೆದುಕೊಂಡಿದ್ದಾರೆ.

ರಕುಲ್ ತಮ್ಮ ಪೋಸ್ಟ್ ನಲ್ಲಿ, ತಮ್ಮ ಸಂಗಾತಿಯ ಜೊತೆ ಇರುವ ಫೋಟೋ ಹಂಚಿಕೊಂಡು,  ‘ಧನ್ಯವಾದಗಳು ನನ್ನ ಲವ್​. ಈ ವರ್ಷದ ಅತಿ ದೊಡ್ಡ ಉಡುಗೊರೆಗಳಲ್ಲಿ ನನಗೆ ಸಿಕ್ಕ ಅದ್ಭುತ ಉಡುಗೊರೆ ನೀನು. ನನ್ನ ಜೀವನಕ್ಕೆ ಬಣ್ಣ ತುಂಬಿದ್ದಕ್ಕೆ ಧನ್ಯವಾದಗಳು.ಜೊತೆಗೆ ನನ್ನ ಬಾಳಲ್ಲಿ ಸದಾ ನಗುವೊಂದು ಮೂಡಲು ಕಾರಣನಾಗಿರುವ ನಿನಗೆ ಧನ್ಯವಾದಗಳು. ಇನ್ಮುಂದೆ ಜಂಟಿಯಾಗಿ ಸಾಕಷ್ಟು ನೆನಪುಗಳನ್ನು ಕೊಡೋಣ’ ಎಂದು ರಕುಲ್ ಬರೆದುಕೊಂಡಿದ್ದಾರೆ.

Leave A Reply

Your email address will not be published.