ಬಾಲಿವುಡ್ ನ ಸ್ಟಾರ್ ನಟ, ಅಭಿಮಾನಿಗಳು ಪ್ರೀತಿಯಿಂದ ಭಾಯಿ ಎಂದು ಕರೆಯುವ ನಟ ಸಲ್ಮಾನ್ ಖಾನ್ ಅವರ ಜನ್ಮದಿನ ಇದೇ ಡಿಸೆಂಬರ್ 27 ರಂದು ಇದೆ. ನಟ ಸಲ್ಮಾನ್ ಖಾನ್ ಜನ್ಮದಿನ ಎಂದ ಮೇಲೆ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಈ ಬಾರಿ ಕೂಡಾ ತಮ್ಮ ಜನ್ಮದಿನವನ್ನು ಬಹಳ ಖುಷಿಯಿಂದ ಸಂಭ್ರಮಿಸಲು ಅಂದರೆ ತಮ್ಮ ಕುಟುಂಬ ಹಾಗೂ ಆಪ್ತರೊಡನೆ ಜನ್ಮದಿನವನ್ನು ಆಚರಿಸಿಕೊಳ್ಳಲು ನಟ ಸಲ್ಮಾನ್ ಖಾನ್ ಪ್ಲಾನ್ ಮಾಡಿದ್ದಾರೆ. ಅವರು ತಮ್ಮ ಜನ್ಮದಿನವನ್ನು ತಮ್ಮ ಪನ್ವೇಲ್ ನ ಫಾರ್ಮ್ ಹೌಸ್ ನಲ್ಲಿ ಆಚರಿಸುವ ಯೋಜನೆ ಮಾಡಿದ್ದರು.
ಆದರೆ ಪನ್ವೇಲ್ ನ ಫಾರ್ಮ್ ಹೌಸ್ ನಲ್ಲಿ ರಾತ್ರಿ ಸಲ್ಮಾನ್ ಅವರಿಗೆ ಹಾವು ಕಚ್ಚಿದ್ದು ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು ಡಿಸೆಂಬರ್ 25 ರ ರಾತ್ರಿ ಸಲ್ಮಾನ್ ಖಾನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುವ ವೇಳೆ ಹಾವೊಂದು ಅವರನ್ನು ಕಚ್ಚಿದ್ದು, ಕುಟುಂಬದ ಸದಸ್ಯರು ವಿಷಯ ತಿಳಿದು ಕೆಲವು ಕಾಲ ತೀ ವ್ರ ಆ ತಂ ಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಹಾವು ಕಚ್ಚಿದ ವಿಷಯ ತಿಳಿದ ಕೂಡಲೇ ಕುಟುಂಬದ ಸದಸ್ಯರು ಸಲ್ಮಾನ್ ಖಾನ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ವೈದ್ಯರು ಹಾವು ಹೆಚ್ಚು ವಿಷಕಾರಿಯೇನಲ್ಲ, ಆದ್ದರಿಂದ ಹೆಚ್ಚು ಸಮಸ್ಯೆ ಏನಿಲ್ಲ ಎಂದು ತಿಳಿಸಿದ ಮೇಲೆ ಕುಟುಂಬದ ಸದಸ್ಯರು ಹಾಗೂ ಅವರ ಆಪ್ತರು ಮತ್ತು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಅವರು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಬಂದಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ರಾಯಘಡ ಜಿಲ್ಲೆಯ ಪನ್ವೇಲ್ ನಲ್ಲಿ ಇದ್ದು ಸಲ್ಮಾನ್ ತಮ್ಮ ಬಿಡುವಿನ ಸಮಯವನ್ನು ಸ್ನೇಹಿತರೊಂದಿಗೆ ಇಲ್ಲೇ ಕಳೆಯುತ್ತಾರೆ. ಕಳೆದ ಲಾಕ್ ಡೌನ್ ಅವಧಿಯಲ್ಲೂ ಅವರು ಅಲ್ಲೇ ಇದ್ದರು.