ಜನರ ಸಂಕಷ್ಟಕ್ಕೆ ಮಿಡಿವ ನಟ ಸೋನು ಸೂದ್ ಮೇಲೆ ಬಹು ಕೋಟಿ ತೆರಿಗೆ ವಂಚನೆ ಆರೋಪ: ಐಟಿ ಇಲಾಖೆ

Written by Soma Shekar

Published on:

---Join Our Channel---

ಕಳೆದ ಎರಡು ದಿನಗಳಿಂದೂ ಆದಾಯ ತೆರಿಗೆ ಇಲಾಖೆಯು ಬಾಲಿವುಡ್ ಹಾಗೂ ದಕ್ಷಿಣ ಸಿನಿರಂಗದ ಪ್ರಖ್ಯಾತ ನಟ ಎನಿಸಿಕೊಂಡಿರುವ, ಕೊರೊನಾ ಸಂಕಷ್ಟ ದಲ್ಲಿ ದೇಶದ ಜನರಿಗೆ ತನ್ನಿಂದ ಆಗುವ ಸಹಾಯವನ್ನು ನೀಡುತ್ತಾ, ದೇಶದ ರಿಯಲ್ ಹೀರೋ ಎಂದೇ ಖ್ಯಾತಿ ಪಡೆದಿರುವ ಸೋನು ಸೂದ್ ಅವರ ಕಚೇರಿ ಮತ್ತು ಮನೆಯ ಮೇಲೆ ಸರ್ವೆ ನಡೆಸಿದ್ದು, ಎಲ್ಲಾ ವಿಷಯಗಳನ್ನು ಪರಿಶೀಲನೆ ನಡೆಸಿದ ನಂತರ ಆದಾಯ ತೆರಿಗೆ ಇಲಾಖೆಯು ನಟ ಸೋನು ಸೂದ್ ಅವರು ಸುಮಾರು 20 ಕೋಟಿ ರೂಪಾಯಿಗಳ ತೆರಿಗೆ ವಂಚನೆಯನ್ನು ಮಾಡಿದ್ದಾರೆ ಎಂದು ಹೇಳಿದೆ. ಅಲ್ಲದೇ ಕೆಲವು ಮಾಹಿತಿಗಳನ್ನು ಸಹಾ ನೀಡಿದೆ.

ಆದಾಯ ತೆರಿಗೆ ಇಲಾಖೆಯು ಇದಕ್ಕೆ ಸಂಬಂಧಪಟ್ಟಂತಹ ದಾಖಲೆಗಳು ಸಾಕ್ಷಾಧಾರಗಳು ದೊರೆತಿದೆ ಎಂದು ಹೇಳಿದೆ. ತೆರಿಗೆ ಇಲಾಖೆಯು ಹೇಳುವ ಪ್ರಕಾರ ನಟ ಸೋನು ಸೂದ್ ಅವರ ಲಾಭರಹಿತ ಸಂಸ್ಥೆಯು ಕ್ರೌಡ್‌ ಫಂಡಿಂಗ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ವಿದೇಶಿ ದಾನಿಗಳಿಂದ 2.1 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಹೇಳಿದೆ. ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ – ಅಂತಹ ವಹಿವಾಟುಗಳನ್ನು ನಿಯಂತ್ರಿಸುತ್ತದೆ ಎನ್ನಲಾಗಿದೆ.

ನಟ ಮತ್ತು ಆತನ ಸಹಚರರ ಕಛೇರಿ ಮತ್ತು ಮನೆಗಳಲ್ಲಿ ನಡೆಸಿದ ಹುಡುಕಾಟದ ಸಮಯದಲ್ಲಿ, ತೆರಿಗೆ ವಂಚನೆಗೆ ಸಂಬಂಧಿಸಿದ ಅಪರಾಧ ಸಾಕ್ಷ್ಯಗಳು ಪತ್ತೆಯಾಗಿವೆ. ನಟ ತೆರಿಗೆ ವಂಚನೆ ಮಾಡಲು ಅನುಸರಿಸಿದ ಮುಖ್ಯ ವಿಧಾನವೆಂದರೆ ತನ್ನ ಲೆಕ್ಕವಿಲ್ಲದ ಆದಾಯವನ್ನು ಅನೇಕ ನಕಲಿ ಸಂಸ್ಥೆಗಳಿಂದ ಅಸುರಕ್ಷಿತ ಸಾಲಗಳ ರೂಪದಲ್ಲಿ ಸಾಗಿಸುವುದು ಎಂದು ತೆರಿಗೆ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇಲ್ಲಿಯವರೆಗಿನ ತನಿಖೆಯ ನಂತರ ಒಟ್ಟು ಇಂತಹ 20 ನಮೂದುಗಳ ಬಳಕೆಯನ್ನು ಬಹಿರಂಗಪಡಿಸಿದೆ ಎನ್ನಲಾಗಿದ್ದು, ಇವುಗಳನ್ನು ಒದಗಿಸುವವರು ನಕಲಿ ವಸತಿ ನಮೂದುಗಳನ್ನು ನೀಡಿದ್ದಾಗಿ, ನಗದು ಬದಲಾಗಿ ಚೆಕ್‌ಗಳನ್ನು ನೀಡಲು ಅವರು ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ತೆರಿಗೆ ವಂಚನೆಯ ಉದ್ದೇಶದಿಂದ ಖಾತೆಗಳ ಪುಸ್ತಕಗಳಲ್ಲಿ ವೃತ್ತಿಪರ ರಸೀದಿಗಳನ್ನು ಸಾಲಗಳೆಂದು ಮರೆಮಾಚಿದ ಉದಾಹರಣೆಗಳಿವೆ.

ಹೂಡಿಕೆಗಳನ್ನು ಮಾಡಲು ಮತ್ತು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಈ ನಕಲಿ ಸಾಲಗಳನ್ನು ಬಳಸಲಾಗಿದೆ ಎಂದು ಸಹ ಬಹಿರಂಗಪಡಿಸಲಾಗಿದೆ. ಇಲ್ಲಿಯವರೆಗೆ ಪತ್ತೆಯಾದ ತೆರಿಗೆಯ ಒಟ್ಟು ಮೊತ್ತವು ರೂ. 20 ಕೋಟಿಗೂ ಹೆಚ್ಚು ಎಂದು ತೆರಿಗೆ ಇಲಾಖೆ ತಿಳಿಸಿದೆ. ಕಳೆದ ಎರಡು ದಿನಗಳಿಂದಲೂ ಸೋನು ಸೂದ್ ಅವರ ಮನೆ ಮತ್ತು ಕಛೇರಿಗಳಲ್ಲಿ ನಡೆದ ಪರಿಶೀಲನೆ ರಾಜಕೀಯ ಪ್ರೇರಿತ ಎಂದು ಕೆಲವು ಪಕ್ಷಿಗಳು ಬಿಜೆಪಿಯನ್ನು ಟೀಕೆ ಮಾಡುತ್ತಿವೆ.

Leave a Comment