ಜನರು ನಿಮ್ಮ ಯಾವ ಗುಣ ಮೆಚ್ಚುತ್ತಾರೆ? ಈ ಫೋಟೋದಲ್ಲೇ ಇದೆ ಅದಕ್ಕೆ ಉತ್ತರ! ಹೇಗೆ ಅಂತೀರಾ? ಓದಿ ನೋಡಿ

0 4

ಸೋಶಿಯಲ್ ಮೀಡಿಯಾಗಳಲ್ಲಿ ಸದ್ಯಕ್ಕಂತೂ ದೃಷ್ಟಿ ಭ್ರಮೆಯ ಚಿತ್ರಗಳದ್ದೇ ದೊಡ್ಡ ಟ್ರೆಂಡ್. ಈ ದೃಷ್ಟಿ ಭ್ರಮೆಯನ್ನುಂಟು ಮಾಡುವ ಅಥವಾ ಆಪ್ಟಿಕಲ್ ಇಲ್ಯೂಷನ್ ಗಳ ಚಿತ್ರಗಳು ನಮ್ಮ ಕಣ್ಣಿಗೆ ಮೋಸ ಮಾಡುವುದು ಮಾತ್ರವೇ ಅಲ್ಲ, ಅವು ನಮ್ಮ ಮನಸ್ಸಿನ ಜೊತೆಗೂ ಸಹಾ ಒಂದು ಆಟವನ್ನು ಆಡುತ್ತವೆ. ಸೋಶಿಯಲ್ ಮೀಡಿಯಾಗಳಲ್ಲಿ ಇಂತಹ ತರಹೇವಾರಿ ಫೋಟೋಗಳು ಪ್ರತಿದಿನವೂ ವೈರಲ್ ಆಗಿ ಸಂಚಲನ ಸೃಷ್ಟಿಸುತ್ತಲೇ ಇವೆ. ಕೆಲವು ಫೋಟೋ ಗಳು ಅದರಲ್ಲಿ ರಹಸ್ಯವನ್ನು ಹೊತ್ತು ತರುತ್ತವೆ.

ಆ ರಹಸ್ಯಗಳನ್ನು ಬಿಡಿಸಲು ನೆಟ್ಟಿಗರು ಕೂಡಾ ತೊಡೆ ತಟ್ಟಿ ನಿಂತವರ ಹಾಗೆ ಮುಂದೆ ಬರುತ್ತಾರೆ. ಆದ್ದರಿಂದಲೇ ಈ ಫೋಟೋಗಳು ಬಹಳ ಬೇಗ ವೈರಲ್ ಆಗುತ್ತವೆ. ಈಗ ಅಂತಹುದೇ ಒಂದು ಹೊಸ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸುತ್ತುತ್ತಿದೆ. ಈ ಹೊಸ ಫೋಟೋದಲ್ಲಿನ ವಿಶೇಷತೆ ಏನೆಂದರೆ ಈ ಚಿತ್ರದಲ್ಲಿ ನಿಮಗೆ ಏನು ಮೊದಲು ಕಾಣುತ್ತದೆಯೋ ಅದರ ಆಧಾರದಲ್ಲಿ ನಿಮ್ಮ ಬಗ್ಗೆ ಜನರ ಫಸ್ಟ್ ಇಂಪ್ರೆಶನ್ ಏನಾಗಿತ್ತು ಎನ್ನುವುದನ್ನು ಅರ್ಥೈಸಿಕೊಳ್ಳಬಹುದಾಗಿದೆ.

ಮೊದಲು ನೀವು ಹುಲಿಯ ಮುಖವನ್ನು ನೋಡಿದರೆ:
ಇತರರು ನಿಮ್ಮಲ್ಲಿ ಮೊದಲು ಗಮನಿಸಿದ್ದು, ನಿಮ್ಮ ವಿಶ್ವಾಸ ಮತ್ತು ದೃಢ ಸಂಕಲ್ಪವಾಗಿರುತ್ತದೆ. ನೀವು ಯಾವುದೇ ವಿಷಯದಲ್ಲೇ ಆಗಲಿ ಬಹಳ ದೃಢ ಹಾಗೂ ಬಲವಾಗಿ ಇರುವಿರಿ ಎಂದು ನಂಬುತ್ತಾರೆ. ಇದೇ ಇತರರು ನಿಮ್ಮಲ್ಲಿ ಕಾಣುವ ನಿಮ್ಮ ಗುಣವಾಗಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದೇ ಗುಣವು ಇತರರಿಗೆ ಭ ಯ ವನ್ನು ಸಹಾ ಹುಟ್ಟಿಸಬಹುದು ಕೂಡಾ.

ಒಂದು ವೇಳೆ ಮೊದಲಿಗೆ ಮರಗಳನ್ನು ನೋಡಿದರೆ :
ಜನಗಳು ನಿಮ್ಮಲ್ಲಿ ಮೊದಲು ಗಮನಿಸುವುದು ನಿಮ್ಮ ಶಾಂತಿಯ ಗುಣ. ಅದೇ ರೀತಿ ನೀವು ಒಂದು ಸಂತೃಪ್ತಿಕರವಾದ ಜೀವನವನ್ನು ನಡೆಸುತ್ತಿದ್ದೀರಿ ಎನ್ನುವ ಅರ್ಥವನ್ನು ನೀಡುತ್ತದೆ. ಈಗಾಗಲೇ ನಿಮ್ಮ ಗುರಿಯನ್ನು ತಲುಪಿರುವಿರಿ. ನಿಮ್ಮ ಕೆಲಸವನ್ನು ನಿಶ್ಯಬ್ದವಾಗಿ ಮಾಡಲು ಬಯಸುವಿರಿ ಮತ್ತು ಜನರು ನಿಮ್ಮ ಇದೇ ಗುಣದಿಂದ ಪ್ರಭಾವಿತರಾಗುವರು ಎಂದು ಹೇಳಲಾಗಿದೆ.

Leave A Reply

Your email address will not be published.