ಜನರಿಗಾಗಿ ಮಿಡಿಯುವ ಮೃದು ಮನಸ್ಸಿನ ಪ್ರಥಮ್ ಅವರು ಹಂಚಿಕೊಂಡ್ರು ಬೇಸರದ ವಿಷಯ

Written by Soma Shekar

Published on:

---Join Our Channel---

ಬಿಗ್ ಬಾಸ್ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡವರು ನಟ ಪ್ರಥಮ್ ಅವರು. ನಟ ಪ್ರಥಮ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ಜನರ ನಡುವೆ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವುದು ಒಳ್ಳೆ ಹುಡುಗ ಪ್ರಥಮ್ ಎನ್ನುವ ಹೆಸರಿನಲ್ಲಿಯೇ ಎನ್ನುವುದು ವಾಸ್ತವ. ಪ್ರಥಮ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಶೋ ಪ್ರಥಮ್ ಅವರಿಗೆ ಇನ್ನೊಂದು ಹಂತಕ್ಕೆ ಜನಪ್ರಿಯತೆ ಪಡೆಯುವಂತೆ ಮಾಡಿತ್ತು. ಬಿಗ್ ಬಾಸ್ ನ ಟ್ರೋಫಿ ಗೆದ್ದು ಬಂದ ಮೇಲೆ ಪ್ರಥಮ್ ಅವರು ಸ್ಯಾಂಪಲ್ ಗೆ ಎಂಟ್ರಿ ನೀಡಿ ಕೆಲವು ಸಿನಿಮಾಗಳಲ್ಲಿ ಸಹಾ ನಟಿಸಿದರು.

ಪ್ರಥಮ್ ಸಿನಿಮಾ, ಶೋ ಗಳು ಮಾತ್ರವಲ್ಲದೇ ಕೃಷಿಯಲ್ಲಿ ಸಹಾ ಅವರು ತೊಡಗಿಕೊಂಡರು. ಸೋಶಿಯಲ್ ಮೀಡಿಯಾಗಳ ಮೂಲಕ ಆಗಾಗ ಅವರು ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾ, ಪ್ರಮುಖ ವಿಚಾರಗಳ ಬಗ್ಗೆ ಮಾತನಾಡುವ ಅವರು, ಕೆಲವು ವಿಷಯಗಳಲ್ಲಿ ಚರ್ಚೆಗಳನ್ನು ಸಹಾ ಹುಟ್ಟು ಹಾಕುತ್ತಾರೆ. ಇನ್ನು ಕೊರೊನಾ ಸಂಕಷ್ಟ ಕಾಲದಲ್ಲಿ ಪ್ರಥಮ್ ಅಪಾರ ಜನ ಮೆಚ್ಚುಗೆಯನ್ನು ಪಡೆದುಕೊಂಡರು.

ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದ ಅದೆಷ್ಟೋ ಬಡ ಕುಟುಂಬಗಳಿಗೆ ಅವರು ಆಹಾರದ ಕಿಟ್ ಗಳನ್ನು ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರು. ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಜನರ ಮೆಚ್ಚುಗೆ ಹರಿದು ಬಂತು.ರಾಜಕಾರಣಿಗಳು ಸಹಾ ಪ್ರಥಮ್ ಅವರ ಈ ಕಾರ್ಯಕ್ಕೆ ಕೈ ಜೋಡಿಸಿದ್ದು ವಿಶೇಷ. ಹೀಗೆ ಜನರಿಗಾಗಿ ಮಿಡಿದ ಪ್ರಥಮ್ ಈಗ ಒಂದು ಬೇಸರದ ವಿಷಯವನ್ನು ಎಲ್ಲರೊಡನೆ ಹಂಚಿಕೊಂಡಿದ್ದಾರೆ.

ಪ್ರಥಮ್ ಅವರು ಬೆಂಗಳೂರಿನಲ್ಲಿ ವಾಸವಿರುವ ಅವರ ಮನೆಯಲ್ಲಿ ಮಳೆಯ ಕಾರಣದಿಂದ ಉಂಟಾದ ಉಪದ್ರವದಿಂದ ಸುಮಾರು ಎರಡೂವರೆ ಲಕ್ಷ ರೂಗಳಷ್ಟು ನಷ್ಟ ಸಂಭವಿಸಿದೆ ಎನ್ನುವ ವಿಚಾರವನ್ನು ಬಹಳ ಬೇಸರದಿಂದ, ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ ನಟ ಪ್ರಥಮ್ ಅವರು. ಪ್ರಥಮ್ ಅವರ ಕೆಲಸಕ್ಕೆ ಸಂಬಂಧಿಸಿದ ಕೆಲವು ಮುಖ್ಯ ವಸ್ತುಗಳು ಹಾಳಾಗಿವೆ.

ಪ್ರಥಮ್ ತಮ್ಮ ಪೋಸ್ಟ್ ನಲ್ಲಿ, ಮಿನಿಮಮ್ 2.5 ಲಕ್ಷ ಹೊಗೆ! ಬಹಳ ಕಷ್ಟಪಟ್ಟು ಸೆಟ್ ಪ್ರಾಪರ್ಟಿ ಎಲ್ಲಾ ರೆಡಿ ಮಾಡ್ಸಿದ್ದೆ! ಆಫೋಸ್ ನಲ್ಲಿ ಕಿಟಕಿ ಓಪನ್ ಮಾಡಿ ಸೈಕ್ಲಿಂಗ್ ಮಾಡೋಕೆ ಹೋಗಿದ್ದೆ!! ಎಲ್ಲಾ ರೈನ್ ಎಫೆಕ್ಟ್. ನಾಳಿದ್ದು ಕರ್ನಾಟಕದಅಳಿಯ ಶೂಟ್ ಗೆ ಮಾಡಿಸಿದ್ದ ಎಲ್ಲಾ ಸೆಟ್ ಪ್ರಾಪರ್ಟಿ, ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್ , ಟೇಬಲ್ ಫ್ಯಾನ್, ಒನ್ ಪ್ಲಸ್ ಫೋನ್ , ಸ್ವಿಗ್ಗಿ ಲಿ ಏನಾದ್ರೂ ತಿನ್ನೋಕೆ ಅಂತಾನೇ ಒಂದು ಫೋನ್ ನಂಬರ್ ಇಟ್ಟಿದ್ದೆ… ಅದು ಡಿಸ್ಲ್ಪೈ ಹೋಗಿದೆ.

30 ರೂ.ನ ಡಾರ್ಕ್ ಫ್ಯಾಂಟಸಿ ಬಿಸ್ಕೆಟ್ ಮಾತ್ರ ಏನೂ ಆಗಿಲ್ಲ! ಜಸ್ಟ್ ಒಂದು ರೂಮಿನ ಹಣೆಬರಹ ಇದು. ಬಹಳ ಕಷ್ಟಪಟ್ಟು ಇದೆಲ್ಲವೂ ಸಂಪಾದಿಸಿದ್ದೆ!! ಬೇಜಾರಾಯ್ತು! ಎಂದು ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆಗಳನ್ನು ನೀಡಿ ಬೇಸರ ಪಟ್ಟುಕೊಳ್ಳಬೇಡಿ ಎಂದು ಹೇಳಿದ್ದಾರೆ. ಕೆಲವರು ಅವರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಇನ್ನೂ ಕೆಲವರು ನಮಗೂ ಬೇಸರವಾಯಿತು, ಎಲ್ಲಾ ಸರಿಯಾಗುತ್ತೆ ಬಿಡಿ ಎಂದು ಸಾಂತ್ವನ ಹೇಳಿದ್ದಾರೆ.

Leave a Comment