ಜನಪ್ರಿಯ ಶೋ ವೇದಿಕೆಯಲ್ಲಿ ‘ಹಾಗಲ್ಲ ಹೀಗೆ’ ಎಂದು ಅಮಿತಾಬ್ ಗೆ ನಟನೆ ಹೇಳಿಕೊಟ್ಟ ದೀಪಿಕಾ ಪಡುಕೋಣೆ: ವೀಡಿಯೋ ವೈರಲ್

Written by Soma Shekar

Published on:

---Join Our Channel---

ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರಲ್ಲಿ ಒಬ್ಬರು ಅಮಿತಾಬ್ ಬಚ್ಚನ್. ಬಾಲಿವುಡ್ ನಲ್ಲಿ ಇಂದಿಗೂ ಸಹಾ ಬಹುಬೇಡಿಕೆಯ ನಟನಾಗಿರುವ ಹೆಗ್ಗಳಿಕೆ ಇವರದ್ದು. ವಯಸ್ಸು ಏರಿದರೂ ಅಮಿತಾಬ್ ಚಾರ್ಮ್ ಮಾತ್ರ ತಗ್ಗಿಲ್ಲ‌. ನಟನೆಯ ವಿಷಯ ಬಂದರೆ ಬಾಲಿವುಡ್ ನಲ್ಲಿ ಅಮಿತಾಬ್ ಗೆ ಸರಿಸಾಟಿ ಇನ್ನೊಬ್ಬರಿಲ್ಲ ಎನ್ನುವುದನ್ನು ಬಾಲಿವುಡ್ ನ ಮಂದಿ ಸಹಾ ಒಪ್ಪುತ್ತಾರೆ. ಅವರ ಜೊತೆ ನಟಿಸಬೇಕೆನ್ನುವುದು ಹಲವು ನಟ ನಟಿಯರ ಕನಸು ಆದರೆ ಎಲ್ಲರಿಗೂ ಆ ಅವಕಾಶ ಸಿಗುವುದು ಮಾತ್ರ ಸಾಧ್ಯವಿಲ್ಲ ಎನ್ನುವುದು ನಿಜ. ಇಂತಹ ಮೇರು ನಟನಿಗೆ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕಿ ಪರ್ಹಾ ಖಾನ್ ಇಬ್ಬರೂ ಸೇರಿ ನಟನೆ ಹೇಳಿ ಕೊಡುವ ಅವಕಾಶ ಸಿಕ್ಕರೆ, ನಟನೆಯ ಪಾಠ ಹೇಳಿ ಕೊಡುತ್ತಾರೆ ಎಂದರೆ ಅಚ್ಚರಿಯಾಗಬಹುದಲ್ಲವೇ? ಹೌದು ಇಂತಹುದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಅಮಿತಾಬ್ ಬಚ್ಚನ್ ಅವರು ನಿರೂಪಣೆ ಮಾಡುವ ಜನಪ್ರಿಯ ಶೋ ಕೌನ್ ಬನೇಗಾ ಕರೋಡ್ ಪತಿ.

ಕೌನ್ ಬನೇಗಾ ಕರೋಡ್ ಪತಿ ಶೋನ ಭರ್ಜರಿ ಹದಿಮೂರನೇ ಸೀಸನ್ ಆರಂಭವಾಗಿದ್ದು, ಈ ಬಾರಿ ಶಾಂದಾರ್ ಶುಕ್ರವಾರ್ ಎನ್ನುವ ಸೆಲೆಬ್ರಿಟಿಗಳ ಜೊತೆಗೆ ನಡೆಸುವ ಹೊಸ ಎಪಿಸೋಡ್ ಒಂದನ್ನು ವಾರಕ್ಕೊಮ್ಮೆ ನಡೆಸಲು ಯೋಜಿಸಿದ್ದ, ಅದರ ಭಾಗವಾಗಿ ಮುಂದಿನ ಶುಕ್ರವಾರ ಅಂದರೆ ಸೆಪ್ಟೆಂಬರ್ 10 ರ ಎಪಿಸೋಡ್ ಗೆ ಬರಲಿದ್ದಾರೆ ನಿರ್ದೇಶಕಿ ಫರ್ಹಾ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ. ವಾಹಿನಿಯು ಈಗಾಗಲೇ ಪ್ರೋಮೋ ಬಿಡುಗಡೆ ಮಾಡಿದ್ದು, ಎಲ್ಲರ ಗಮನವನ್ನು ಸೆಳೆದಿದೆ. ಹೌದು ಕಾರ್ಯಕ್ರಮಕ್ಕೆ ಬಂದ ಅತಿಥಿಗಳಲ್ಲಿ ಒಬ್ಬರಾದ ಪರ್ಹಾ ಅವರನ್ನು ಅಮಿತಾಬ್ ಅವರು “ನಿಮ್ಮ ಸಿನಿಮಾಗಳಿಗೆ ನನ್ನನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿಮಗೆ ಒಂದೂ ಸಲವೂ ಅನಿಸಲಿಲ್ಲವೇ??” ಎಂದು ಕೇಳಿದ್ದಾರೆ.

ಆಗ ಪರ್ಹಾ ಅದು ಎಲ್ಲರ ಕನಸು ಎಂದಾಗ ಅಮಿತಾಬ್ ಅವರು ನಿಜ ಹೇಳಿ ಎಂದು ಒತ್ತಾಯ ಮಾಡಿದಾಗ ಪರ್ಹಾ ಒಂದು ಆಡಿಷನ್ ಮಾಡೋಣವೇ ಎಂದು ಸಜ್ಜಾಗುತ್ತಾರೆ. ಆಗ ದೀಪಿಕಾ ಅಭಿನಯದ ಮೊದಲ ಸಿನಿಮಾ, ಸೂಪರ್ ಹಿಟ್ ಸಿನಿಮಾ ಓಂ ಶಾಂತಿ ಓಂ ನ ಜನಪ್ರಿಯ ಡೈಲಾಗ್ ಏಕ್ ಚುಟ್ಕೀ ಸಿಂಧೂರ್ ಅನ್ನು ದೀಪಿಕಾ ಅಭಿನಯಿಸಿ ತೋರಿಸಿದಾಗ, ಅಮಿತಾಬ್ ಅದನ್ನು ನಟಿಸಲು ಪ್ರಯತ್ನ ಮಾಡಿದಾಗ, ದೀಪಿಕಾ ಹಾಗಲ್ಲ ಹೀಗೆ ಮಾಡಬೇಕು ಎಂದು ಅಮಿತಾಬ್ ಅವರಿಗೆ ಸಲಹೆ ನೀಡಿದರು ಹಾಗೂ ಪರ್ಹಾ ಕೂಡಾ ನಟನೆ ಹೇಳಿ ಕೊಟ್ಟರು.

Leave a Comment