ಕನ್ನಡ ಕಿರುತೆರೆಯಲ್ಲಿ ಎಷ್ಟೆಲ್ಲಾ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದರೂ ಸಹಾ ಧಾರಾವಾಹಿಗಳಿಗೆ ಅವುಗಳದ್ದೇ ಆದ ಪ್ರತ್ಯೇಕ ಸ್ಥಾನವಿದೆ. ಅದರಲ್ಲೂ ಕೆಲವು ಧಾರಾವಾಹಿಗಳು ಟಿ ಆರ್ ಪಿ ಗಳಿಕೆಯಲ್ಲಿ ದಾಪುಗಾಲು ಹಾಕುತ್ತಾ, ಟಾಪ್ ಸೀರಿಯಲ್ ಗಳು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಕೆಲವು ಧಾರಾವಾಹಿಗಳು ಮಾತ್ರ ತಮ್ಮ ಜರ್ನಿ ಯನ್ನು ಮುಗಿಸುತ್ತಿವೆ. ಹೀಗೆ ಮುಗಿಯುತ್ತಿರುವ ಕೆಲವು ಧಾರಾವಾಹಿಗಳು ನಿರೀಕ್ಷಿತ ಮಟ್ಟದ ಟಿ ಆರ್ ಪಿ ಪಡೆಯುವಲ್ಲಿ ಸಾಧಿಸಿದ ಹಿನ್ನೆಡೆಯೇ ಅವು ಕಿರುತೆರೆಯಿಂದ ತಮ್ಮ ಜರ್ನಿ ಯನ್ನು ಮುಗಿಸಲು ಕಾರಣ ಎನ್ನಲಾಗಿದೆ.
ಇತ್ತೀಚಿಗಷ್ಟೇ ಕಿರುತೆರೆಯ ಜನಪ್ರಿಯ ಧಾರವಾಹಿಗಳು ಎನಿಸಿಕೊಂಡಿದ್ದ ಇಂತಿ ನಿಮ್ಮ ಆಶಾ, ಜೀವ ಹೂವಾಗಿದೆ, ಆಕಾಶ ದೀಪ, ಮತ್ತೆ ವಸಂತಗಳಂತಹ ಧಾರವಾಹಿಗಳು ಮುಕ್ತಾಯಗೊಂಡಿದ್ದವು. ಈ ಧಾರಾವಾಹಿಗಳು ಇಷ್ಟು ಬೇಗ ಕೊನೆಯ ಹಂತವನ್ನು ತಲುಪಿದ್ದು ಧಾರಾವಾಹಿಯನ್ನು ಇಷ್ಟಪಟ್ಟು ನೋಡುತ್ತಿದ್ದ ಪ್ರೇಕ್ಷಕರಿಗೆ ಖಂಡಿತ ಅಚ್ಚರಿಯನ್ನು ಮೂಡಿಸಿತ್ತು. ಈಗ ಈ ಧಾರಾವಾಹಿಗಳ ಬೆನ್ನಲ್ಲೇ ಮತ್ತೊಂದು ಧಾರಾವಾಹಿ ಕೂಡಾ ಕಿರುತೆರೆಯ ತನ್ನ ಪಯಣವನ್ನು ಮುಗಿಸಲಿದೆ ಎನ್ನುವ ಸುದ್ದಿಯೊಂದು ಹೊರ ಬಂದಿದೆ.
ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ರಾಧೇ ಶ್ಯಾಮ ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎಂದು ಮಾಧ್ಯಮವೊಂದರಲ್ಲಿ ಸುದ್ದಿಯಾಗಿದೆ. ಇತ್ತೀಚಿಗಷ್ಟೇ ಧಾರಾವಾಹಿ ತನ್ನ 200 ಸಂಚಿಕೆಗಳನ್ನು ಮುಗಿಸಿತ್ತು. ಆದರೆ ಈಗ ಮೂಲಗಳ ಪ್ರಕಾರ ಧಾರಾವಾಹಿ ಪಿ ಆರ್ ಪಿ ಪಡೆದುಕೊಳ್ಳುವಲ್ಲಿ ಹಿನ್ನಡೆ ಸಾಧಿಸಿದ ಕಾರಣದಿಂದ, ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವ ವಾಹಿನಿಯು ಈ ಧಾರಾವಾಹಿಯನ್ನು ಮುಗಿಸುವ ಆಲೋಚನೆ ಮಾಡಿದೆ ಎಂದು ಹೇಳಲಾಗಿದೆ.
ರಾಧೆ ಶಾಮ ಧಾರಾವಾಹಿಯ ಕ್ಲೈಮ್ಯಾಕ್ಸ್ ಎಪಿಸೋಡುಗಳ ಚಿತ್ರೀಕರಣ ಈಗಾಗಲೇ ನಡೆದಿದೆ ಎನ್ನಲಾಗಿದ್ದು, ಕೊನೆಯ ದಿನದ ಚಿತ್ರೀಕರಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿದೆ. ಇನ್ನು ಈ ಧಾರಾವಾಹಿ ಕೆಲವು ದಿನಗಳ ಹಿಂದೆಯಷ್ಟೇ ಪ್ರಮುಖ ನಟಿಯೊಬ್ಬರು ತಮ್ಮ ಪಾತ್ರದಿಂದ ಹೊರನಡೆದಾಗ ಸುದ್ದಿಯಾಗಿತ್ತು. ಹೌದು ಈ ಧಾರಾವಾಹಿ ಯಲ್ಲಿ ಪ್ರತಿಮಾದೇವಿ ಪಾತ್ರವನ್ನು ನಿರ್ವಹಿಸುತ್ತಿದ್ದ ನಟಿ ಅಶ್ವಿನಿಗೌಡ ಅವರು ಕೆಲವು ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರ ನಡೆದಿದ್ದರು.
ಅನಂತರ ಅವರ ಜಾಗಕ್ಕೆ ಕನ್ನಡದ ಹಿರಿಯ ನಟಿ ಅಭಿನಯ ಅವರ ಆಗಮನವಾಗಿತ್ತು. ಅವರು ಪ್ರತಿಮಾ ದೇವಿಯ ಪಾತ್ರದಲ್ಲಿ ಜನರ ಗಮನವನ್ನು ಸೆಳೆದಿದ್ದರು. ಆದರೆ ಈಗ ಈ ಎಲ್ಲಾ ಬದಲಾವಣೆಗಳ ನಡುವೆಯೂ ಧಾರಾವಾಹಿ ತನ್ನ ಜರ್ನಿ ಯನ್ನು ಮುಗಿಸಲು ಸಜ್ಜಾಗಿರುವುದು ಮಾತ್ರ ವಾಸ್ತವದ ವಿಷಯವಾಗಿದೆ. ರಾಧೇ ಶ್ಯಾಮ ಸೀರಿಯಲ್ ಅನ್ನು ಇಷ್ಟಪಟ್ಟು ನೋಡುತ್ತಿದ್ದ ಪ್ರೇಕ್ಷಕರಿಗೆ ಇದು ಖಂಡಿತ ಬೇಸರವನ್ನು ಉಂಟು ಮಾಡುವ ವಿಷಯವಾಗಿದೆ.