ಜಗ್ಗೇಶ್ ಅವರ SSLC ಮಾರ್ಕ್ಸ್ ನೋಡಿ ಅವರಪ್ಪ ಬೂಟ್ ನಲ್ಲಿ ಹೊಡೆದಿದ್ದರಂತೆ: ಅಂಕಪಟ್ಟಿ ಶೇರ್ ಮಾಡಿದ ನಟ

0
192

ಕನ್ನಡ ಚಿತ್ರರಂಗದ ಹಿರಿಯ ನಟ ಎನಿಸಿಕೊಂಡಿರುವಂತಹ ನವರಸನಾಯಕ ಖ್ಯಾತಿಯ ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟ. ಇಲ್ಲಿ ಅವರು ತಮ್ಮ ಜೀವನದ ಅನೇಕ ಸಿಹಿ ಕಹಿ ಘಟನೆಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರು ತಮ್ಮ ಹತ್ತನೇ ತರಗತಿಯ ಅಂಕಪಟ್ಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಆಗ ಆ ಅಂಕಗಳನ್ನು ಗಳಿಸಿದ್ದಕ್ಕಾಗಿ ತಮ್ಮ ತಂದೆಯವರಿಂದ ಬೂಟಿನಲ್ಲಿ ಏಟು ತಿಂದ ಘಟನೆಯನ್ನು ಅವರು ಸ್ಮರಿಸಿಕೊಂಡು, ಎಲ್ಲರೊಂದಿಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಜಗ್ಗೇಶ್ ಅವರು ಶೇರ್ ಮಾಡಿರುವ ಅವರ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಗಮನಿಸಿದಾಗ ಜಗ್ಗೇಶ್ ಅವರು ಕನ್ನಡದಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದಿರುವುದನ್ನು ನಾವು ಕಾಣಬಹುದಾಗಿದೆ. ಅಂಕಪಟ್ಟಿಯನ್ನು ಶೇರ್ ಮಾಡಿಕೊಂಡಿರುವ ಜಗ್ಗೇಶ್ ಅವರು ತಮ್ಮ‌ ಟ್ವೀಟ್ ನಲ್ಲಿ, “ಇಂದಿನ ಜಗ್ಗೇಶ ಶಾಲೆಯ ಈಶ್ವರ. ಭಾಷಾಭಿಮಾನ ಬಾಲ್ಯದಿಂದ ಬಂದಾಗ ಮಾತ್ರ ಅವನು ಸಾಯುವವರೆಗೆ ಕನ್ನಡ ಹೃದಯಬಡಿತದ ಜೊತೆಯಲ್ಲೆ ಉಳಿಯುತ್ತದೆ! ಈ ಅಂಕೆಗೆ ಅಪ್ಪ ನಡುರೋಡಲ್ಲಿ ಬೂಟಿನಲ್ಲಿ ಹೊಡೆದಿದ್ದರು! ಮನನೊಂದು ಆ ತ್ಮ ಹ ತ್ಯಗೆ ಯತ್ನಿಸಿದ್ದೆ! ಒಂದು ವೇಳೆ ಹೋಗಿದ್ದರೆ ಇಂದು ಜಗ್ಗೇಶ ಸತ್ತವರಲ್ಲಿ ಒಬ್ಬ! ಮಕ್ಕಳ ತಂದೆ ತಾಯಿ ಹುರಿದುಂಬಿಸಿ ! ಸಾಧಕ ಹುಟ್ಟುತ್ತಾನೆ! ಎಂದು ಹೇಳಿದ್ದಾರೆ.

ಇದರ ಜೊತೆಗೆ ಮತ್ತೊಂದು ಟ್ವೀಟನ್ನು ಸಹಾ‌‌ ಮಾಡಿರುವ ಅವರು ಅದರಲ್ಲಿ, ಎಂಟು ರೂಪಾಯಿ ಶಾಲಾ ಶುಲ್ಕ, ಎರಡು ಜೊತೆ ಸಮವಸ್ತ್ರ, ಯಾವುದೇ ವಿಶೇಷ ಟ್ಯೂಷನ್ ಇರಲಿಲ್ಲ, ರಾಗಿಮುದ್ದೆ ನನಗೆ ಟಿಫನ್, ಅಮ್ಮನ ಪ್ರೀತಿ ಮತ್ತು ಸಲಹೆಗಳು, ಸಂಗಾತಿಯಾಗಿ ನನ್ನ ಪತ್ನಿಯ ಸಮರ್ಪಣೆ ಹಾಗೂ ರಾಯರ ಆಶೀರ್ವಾದ ನನ್ನ ಇಂದಿನ ಸಾಧನೆಗೆ ಶಕ್ತಿ, ಮನಸ್ಸಿದ್ದರೆ ಮಾರ್ಗ” ಎಂದಿದ್ದಾರೆ. ಜಗ್ಗೇಶ್ ಅವರ ಅಂಕಪಟ್ಟಿ ಪೋಸ್ಟ್ ನೋಡಿ ಅನೇಕ ಮಂದಿ ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ‌ಆ ಕಾಲಕ್ಕೆ ಅದು ಉತ್ತಮವಾದ ಅಂಕ ಎಂದಿದ್ದಾರೆ.

LEAVE A REPLY

Please enter your comment!
Please enter your name here