ತೆಲುಗಿನ ಕ್ಯೂಟ್ ಕಪಲ್ ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯವು ಕೊನೆಗೊಂಡಿದೆ. ನಾಗಚೈತನ್ಯ ಮತ್ತು ಸಮಂತಾ ಸಂಬಂಧದ ನಡುವೆ ಒಂದು ಬಿರುಕು ಮೂಡಿದೆ ಎನ್ನುವ ವಿಚಾರ ಜುಲೈನಲ್ಲೇ ಹೊಗೆಯಾಡಿತ್ತು. ಇದಕ್ಕಿದ್ದ ಹಾಗೆ ನಟಿ ಸಮಂತಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದ ಅಕ್ಕಿನೇನಿ ಎನ್ನುವ ಸರ್ ನೇಮ್ ತೆಗೆದು ಹಾಕಿದ ಕೂಡಲೇ ಅನುಮಾನಗಳ ಅಲೆಯು ಎದ್ದಿತ್ತು. ಸುದ್ದಿಗಳು ಹರಡಲು ಆರಂಭವಾಯಿತು. ಸಮಂತಾ, ನಾಗಚೈತನ್ಯ ಬೇರೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದವು.
ಹೀಗೆ ಸುದ್ದಿಗಳು ಹರಡಿದಾಗಲೇ ಅಭಿಮಾನಿಗಳು ಮಾತ್ರ ಇಬ್ಬರೂ ಮನಸ್ತಾಪ ದೂರ ಮಾಡಿಕೊಂಡು ಒಂದಾಗಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿದ್ದರು. ಆದರೆ ಅದು ನಿಜವಾಗಲಿಲ್ಲ. ಅಧಿಕೃತವಾಗಿಯೇ ಸಮಂತಾ, ನಾಗಚೈತನ್ಯ ತಾವು ಬೇರೆಯಾಗಲಿರುವ ವಿಚಾರವನ್ನು ಹಂಚಿಕೊಂಡರು. ಇದಾದ ನಂತರ ಅವರ ವಿಚ್ಚೇದನದ ಕುರಿತಾಗಿ ಕೆಲವು ಸೆಲೆಬ್ರಿಟಿಗಳು ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಶೇರ್ ಮಾಡಿಕೊಂಡಿದ್ದರು.
ನಟ ಸಿದ್ಧಾರ್ಥ್ ತಮ್ಮ ಮಾಜಿ ಗೆಳತಿಯ ವಿಚ್ಛೇದನದ ಅಧಿಕೃತ ಘೋಷಣೆ ನಂತರ ಪರೋಕ್ಷವಾಗಿ ವ್ಯಂಗ್ಯ ಮಾಡಿ ಟ್ವೀಟ್ ಮಾಡಿಯೇ ಬಿಟ್ಟರು. ಇನ್ನೊಂದು ಕಡೆ ಕಾಂಟ್ರವರ್ಸಿ ಡೈರಕ್ಟರ್ ರಾಮ್ ಗೋಪಾಲ್ ವರ್ಮಾ ಈ ವಿಚ್ಛೇದನವನ್ನು ಸೆಲೆಬ್ರೆಟ್ ಮಾಡಬೇಕೆಂದು ಎಂದಿನ ಹಾಗೇ ತನ್ನದೆ ಎನ್ನುವ ವಿಚಿತ್ರ ಸ್ಟೈಲ್ ನಲ್ಲಿ ಟ್ವೀಟ್ ಮಾಡಿದರು. ಇವೆಲ್ಲವುಗಳ ನಡುವೆಯೇ ಬಾಲಿವುಡ್ ಬೆಡಗಿ ಕ್ವೀನ್ ಕಂಗನಾ ರಣಾವತ್ ಅವರು ಕೂಡಾ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಕಂಗನಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ವಿಚ್ಚೇದನದ ವಿಚಾರದಲ್ಲಿ ನೂರಕ್ಕೆ ಒಂದರಷ್ಟು ಮಾತ್ರ ಮಹಿಳೆಯರದ್ದು ತಪ್ಪು ಇರುತ್ತದೆ. ವಿಚ್ಚೇದನ ಸಂಸ್ಕೃತಿ ಪುರುಷರಿಂದಲೇ ಹೆಚ್ಚುತ್ತಿದ್ದು, ಬಟ್ಟೆ ಬದಲಿಸಿದಂತೆ ಮಹಿಳೆಯರನ್ನು ಬದಲಾಯಿಸುವವರನ್ನು ಪ್ರೋತ್ಸಾಹಿಸುವುದನ್ನು ಮೊದಲು ಬಿಡಿ ಎಂದಿರುವ ಕಂಗನಾ ಇದೇ ವೇಳೆ ಪರೋಕ್ಷವಾಗಿ ನಟ ಅಮೀರ್ ಖಾನ್ ಮೇಲೆ ಗುಡುಗಿದ್ದಾರೆ.
ಕಂಗನಾ, ಇದ್ದಕ್ಕಿದ್ದಂತೆ ಡಿವೋರ್ಸ್ ಘೋಷಣೆ ಮಾಡಿದ ದಕ್ಷಿಣ ಭಾರತದ ನಟ ಮದುವೆಯಾಗಿ ನಾಲ್ಕು ವರ್ಷವಾಗಿತ್ತು, ಆಕೆಯ ಪರಿಚಯ ಹತ್ತು ವರ್ಷಗಳಿಂದಲೂ ಇತ್ತು. ಆದರೆ ಬಾಲಿವುಡ್ ಸೂಪರ್ ಸ್ಟಾರ್, ಡಿವೋರ್ಸ್ ಎಕ್ಸ್ ಪರ್ಟ್, ಮಹಿಳೆಯರ ಮತ್ತು ಮಕ್ಕಳ ಜೀವನ ಹಾಳು ಮಾಡಿದವರ ಸಂಪರ್ಕಕ್ಕೆ ಬಂದರು. ಆ ನಟ ಈ ವಿಷಯವಾಗಿ ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು..
ಇದೇನು ಕಣ್ಣಿಗೆ ಕಾಣದ ಸತ್ಯವಂತೂ ಅಲ್ಲ, ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆಂದು ನಿಮಗೆಲ್ಲರಿಗೂ ಸಹಾ ತಿಳಿದಿದೆ ಎನ್ನುವ ಮೂಲಕ ಪರೋಕ್ಷವಾಗಿ ನಟ ಅಮೀರ್ ಖಾನ್ ಮೇಲೆ ಆ ರೋ ಪ ಮಾಡುತ್ತಾ ನಾಗಚೈತನ್ಯ ಸಮಂತಾ ಗೆ ವಿಚ್ಛೇದನ ನೀಡುವಲ್ಲಿ ಅಮೀರ್ ಖಾನ್ ಪಾತ್ರ ಸಹಾ ಇದೆ ಎನ್ನುವ ಮಾತುಗಳನ್ನು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಕಂಗನಾ ಮಾತಿನಲ್ಲಿ ಸತ್ಯ ಇದೆಯೋ ಇಲ್ಲವೋ ಆದರೆ ಸದ್ಯಕ್ಕಂತೂ ಅನೇಕರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.