ಚೆನ್ನೈ ಸೂಪರ್ ಕಿಂಗ್ಸ್ ಗೆ ಭಾರೀ ಆಘಾತ: IPL 2022 ಯಿಂದಲೇ ಹೊರಬಿದ್ದ ಆಟಗಾರ??

Entertainment Featured-Articles News

ಐಪಿಎಲ್ 2022 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸತತ ಸೋಲುಗಳಿಂದ ಈಗಾಗಲೇ ಸಾಕಷ್ಟು ಕಂಗೆಟ್ಟಿದೆ. ಈಗಾಗಲೇ ನಾಲ್ಕು ಸೋಲುಗಳನ್ನು ಎದುರು ಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈಗ ಒಂದು ಭರ್ಜರಿ ಗೆಲುವಿನ ಅಗತ್ಯ ಇದೆ. ಆದರೆ ಇದೀಗ ತಂಡಕ್ಕೆ ಮತ್ತೊಂದು ಭಾರಿ ಆ ಘಾ ತ ಉಂಟಾಗಿದೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ವೇಗದ ಬೌಲರ್ ಆಗಿದ್ದ ದೀಪಕ್ ಚಹರ್ ಅವರ ಸೇವೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಂದು ರೀತಿಯಲ್ಲಿ ಭಾರೀ ಹೊ ಡೆ ತವನ್ನು ನೀಡಿದೆ.

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸಲುವಾಗಿ ನಡೆದಂತಹ ಬಹು ದೊಡ್ಡ ಆಕ್ಷನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದುಬಾರಿ ಬೆಲೆಯಲ್ಲಿ ಅಂದರೆ ಬರೋಬ್ಬರಿ 14 ಕೋಟಿ ರೂಪಾಯಿಗಳನ್ನು ನೀಡುವ ಮೂಲಕ ದೀಪಕ್ ಚಹರ್ ಅವರನ್ನು ತನ್ನ ತಂಡಕ್ಕಾಗಿ ಖರೀದಿ ಮಾಡಿತ್ತು. ಆದರೆ ದುರದೃಷ್ಟವಶಾತ್ ಟೂರ್ನಿ ಆರಂಭವಾಗುವುದಕ್ಕೆ ಮೊದಲೇ ದೀಪಕ್ ಚಹರ್ ಅವರು ಸ್ನಾಯು ಸೆಳೆತ ಗಾಯದ ಸಮಸ್ಯೆಗೆ ತುತ್ತಾಗಿ ಚಿಕಿತ್ಸೆ ಪಡೆಯಲು ಹೊರಡಬೇಕಾಯಿತು.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಇದೀಗ ಅವರು ಬೆನ್ನು ನೋವಿನ ಸಮಸ್ಯೆಗೆ ಕೂಡ ತುತ್ತಾಗಿದ್ದಾರೆ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿಯೇ ಈಗ ಅವರು ಐಪಿಎಲ್ 2022 ರಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿವೆ. ಫೆಬ್ರವರಿಯಲ್ಲಿ ನಡೆದಂತಹ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ದೀಪಕ್ ಚಹರ್ ಅವರು ಗಾಯಗೊಂಡಿದ್ದರು.

ದೀಪಕ್ ಚಹರ್ ಐಪಿಎಲ್ 2022ರಿಂದ ಹೊರಬಿದ್ದಿರುವುದು ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ದೀಪಕ್ ಅವರ ಸ್ಥಾನಕ್ಕೆ ಒಬ್ಬ ಒಳ್ಳೆಯ ಭಾರತೀಯ ಬೌಲರ್ ಅನ್ನು ಕರೆ ತರುವಲ್ಲಿ ಫ್ರಾಂಚೈಸಿ ಕೂಡಾ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ದೀಪಕ್ ಚಹರ್ ಶೀಘ್ರದಲ್ಲೇ ತಂಡಕ್ಕೆ ಮರಳಿ ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ತಂಡಕ್ಕೆ ಅವರು ಸಂಪೂರ್ಣವಾಗಿ ಹೊರಗುಳಿದಿರುವ ವಿಚಾರ ದೊಡ್ಡ ಹೊಡೆತವನ್ನೇ ನೀಡಿದೆ.

Leave a Reply

Your email address will not be published. Required fields are marked *