ಚಿರು-ಮೇಘನ ಪುತ್ರನ ಹೆಸರು ರಿವೀಲ್: ಈ ಹೆಸರಿನ ವಿಶೇಷತೆ ಏನು ಗೊತ್ತಾ??

Written by Soma Shekar

Published on:

---Join Our Channel---

ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಾಂಪತಿಯ ಮುದ್ದಾದ ಮಗನ ಕುರಿತಾಗಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ, ಮಾದ್ಯಮಗಳಲ್ಲಿ ಸಾಕಷ್ಟು ಸುದ್ದಿಗಳಾಗಿವೆ. ಮೇಘನಾ ರಾಜ್ ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗನ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಅವರು ಫೋಟೋಗಳನ್ನು ಶೇರ್ ಮಾಡಿದಂತಹ ಬಹುತೇಕ ಸಂದರ್ಭಗಳಲ್ಲಿ ಅಭಿಮಾನಿಗಳು ಕೇಳುತ್ತಿದ್ದ ಬಹುಮುಖ್ಯವಾದ ಪ್ರಶ್ನೆ, ಜೂನಿಯರ್ ಚಿರುವಿಗೆ ಏನೆಂದು ಹೆಸರನ್ನು ಇಡುವಿರಿ, ಜೂ.ಚಿರು ನಾಮಕರಣ ಯಾವಾಗ? ಎಂದು. ಅದೂ ಅಲ್ಲದೇ ಕೆಲವು ಕಡೆಯಲ್ಲಿ ಈಗಾಗಲೇ ಮೇಘನಾ ಅವರ ಮಗನಿಗೆ ಹೆಸರಿಡಲಾಗಿದೆ ಎನ್ನುವ ಸುದ್ದಿಗಳು ಕೂಡಾ ಹರಿದಾಡಿತ್ತು. ಆದರೆ ನಟಿ ಮೇಘನರಾಜ್ ಅವರು ನಿನ್ನೆ ವಿಶೇಷ ವಿಡಿಯೋವನ್ನು ಶೇರ್ ಮಾಡಿಕೊಂಡು ಇಂದು ಮಗನಿಗೆ ನಾಮಕರಣ ಮಾಡುತ್ತಿರುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

ಕಳೆದ ವರ್ಷ ಅಕ್ಟೋಬರ್ 22ರಂದು ಜನಿಸಿದ ಜೂನಿಯರ್ ಚಿರುಗೆ ಇಂದು ಅಂದರೆ ಸೆಪ್ಟೆಂಬರ್ 3 ರಂದು ನಾಮಕರಣವನ್ನು ಮಾಡಲಾಗಿದೆ. ಮೇಘನಾ ರಾಜ್ ತಮ್ಮ ಮಗನಿಗೆ ‘ರಾಯನ್ ರಾಜ್ ಸರ್ಜಾ% ಎನ್ನುವ ಹೆಸರನ್ನಿಟ್ಟಿದ್ದಾರೆ. ಈ ಹೆಸರಿನಲ್ಲಿನ ವಿಶೇಷವೇನೆಂದರೆ ಇದರಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರ ಸರ್ ನೇಮ್ ಗಳು ಸೇರಿದೆ. ಮೇಘನಾ ರಾಜ್ ಅವರು ಮಗನ ಹೆಸರನ್ನು ಇಡುವ ಕುರಿತಾಗಿಯೂ ಒಂದು ವಿಶೇಷ ವಿಡಿಯೋದ ಮೂಲಕವೇ ಮಾಹಿತಿಯನ್ನು ಹಂಚಿಕೊಂಡಿದ್ದರು. ನಿನ್ನೆ ಅವರು ಹಂಚಿಕೊಂಡಿದ್ದ ಸುಂದರವಾದ ವೀಡಿಯೋದಲ್ಲಿ ಇಂದು ಮಗನಿಗೆ ಹೆಸರನ್ನು ಇಡುವ ವಿಷಯವನ್ನು ತಿಳಿಸಿದರು.

ಬಹಳಷ್ಟು ದಿನಗಳಿಂದ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದ ಪ್ರಶ್ನೆಗೆ ಉತ್ತರ ಇಂದು ಸಿಕ್ಕಿದೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಮಗನಿಗೆ ಯಾವ ಹೆಸರನ್ನು ಇಡುತ್ತಾರೆ ಎನ್ನುವ ಸುದ್ದಿಗಳಿಗೆ ಸ್ಪಷ್ಟವಾದ ಉತ್ತರ ಸಿಕ್ಕಿದೆ. ಅಲ್ಲದೇ ಕೆಲವು ಕಡೆಗಳಲ್ಲಿ ಈ ಹಿಂದೆ ಅರ್ಜುನ್ ಸರ್ಜಾ ಅವರು ಸೂಚಿಸಿದ ಹೆಸರು, ಧ್ರುವ ಸರ್ಜಾ ಅವರು ಇಟ್ಟ ಹೆಸರು ಎಂದೆಲ್ಲಾ ಸಾಕಷ್ಟು ಸುದ್ದಿಗಳಾಗಿದ್ದವು. ಈಗ ಆ ಸುದ್ದಿಗಳೆಲ್ಲ ಗಾಳಿಸುದ್ದಿಗಳಷ್ಟೇ ಎನ್ನುವುದು ಇಂದು ಮೇಘನಾ ರಾಜ್ ಅವರು ಮಗನಿಗೆ ನಾಮಕರಣವನ್ನು ಮುಗಿಸಿದ ನಂತರ ಸ್ಪಷ್ಟವಾಗಿದೆ ಎಂದು ಹೇಳಬಹುದಾಗಿದೆ.

Leave a Comment