ಚಿರು ಜೊತೆ ಸಲ್ಲು ಭಾಯ್: ಒಂದೊಳ್ಳೆ ಉದ್ದೇಶದಿಂದ ವಿದೇಶಿ ಗಾಯಕರನ್ನು ಕರೆಸೋದು ಬೇಡ ಎಂದ ಸಲ್ಮಾನ್

Written by Soma Shekar

Published on:

---Join Our Channel---

ಟಾಲಿವುಡ್ ನ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಅವರ 153 ನೇ ಸಿನಿಮಾ ಗಾಡ್ ಫಾದರ್ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ತೆಲುಗಿನ ಗಾಡ್ ಫಾದರ್ ಸಿನಿಮಾ ಮಲೆಯಾಳಂ ನಲ್ಲಿ ಅಲ್ಲಿನ ಸ್ಟಾರ್ ನಟ ಮೋಹನ್ ಲಾಲ್ ಅವರು ನಟಿಸಿ,‌‌ ದೊಡ್ಡ ಯಶಸ್ಸು ಪಡೆದುಕೊಂಡ ಸಿನಿಮಾ ಲೂಸಿಫರ್ ನ ರೀಮೇಕ್ ಆಗಿದೆ. ಲೂಸಿಫರ್ ಸಿನಿಮಾದಲ್ಲಿ ಮಲೆಯಾಳಂ ನ ಮತ್ತೊಬ್ಬ ಪ್ರಮುಖ ನಟ ಪೃಥ್ವಿ ಅವರು ಅತಿಥಿ ನಟನಾಗಿ ಕಾಣಿಸಿಕೊಂಡಿದ್ದಿ, ಅವರು ಈ ಸಿನಿಮಾದಲ್ಲಿನ ಒಂದು ಅತ್ಯಂತ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದರು. ಅದು ನಾಯಕನಿಗೆ ಸಹಾಯ ಮಾಡುವ ಡಾನ್ ಪಾತ್ರ.

ಪಾತ್ರದ ಅವಧಿ ಸಣ್ಣದ್ದೇ ಆದರೂ ಸಹಾ ಇಡೀ ಸಿನಿಮಾದಲ್ಲಿ ಇದು ಬಹಳ ಗಮನ ಸೆಳೆಯುವ ಹಾಗೂ ಪ್ರಮುಖವಾದ ಪಾತ್ರ. ಈಗ ತೆಲುಗಿನಲ್ಲಿ ಚಿರಂಜೀವಿ ಅವರು ನಾಯಕನಾಗಿರುವ ಸಿನಿಮಾದಲ್ಲಿ ಪೃಥ್ವಿ ಅವರು ನಟಿಸಿದ್ದ ಪಾತ್ರಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಎಂಟ್ರಿ ನೀಡುತ್ತಿದ್ದಾರೆ. ಮೊದಲು ಸಲ್ಮಾನ್ ಖಾನ್ ಈ ಪಾತ್ರವನ್ನು ಮಾಡುವುದಿಲ್ಲ ಎಂದಿದ್ದರು ಎನ್ನುವ ಸುದ್ದಿಗಳು ಕೂಡಾ ಹರಡಿತ್ತು. ಆದರೆ ಈಗ ಸಲ್ಮಾನ್ ಖಾನ್ ಅವರು ನಟಿಸುವುದು ಖಚಿತ ಎನ್ನಲಾಗಿದೆ.

ಬಾಲಿವುಡ್ ನಿಂದ ದಕ್ಷಿಣಕ್ಕೆ ಸಲ್ಮಾನ್ ಎಂಟ್ರಿ ನೀಡುತ್ತಿರುವುದರಿಂದ ಗಾಡ್ ಫಾದರ್ ಚಿತ್ರ ತಂಡ ಸಿನಿಮಾದಲ್ಲಿ ಸಲ್ಮಾನ್ ಮತ್ತು ಚಿರುಗಾಗಿ ಒಂದು ವಿಶೇಷ ಹಾಡನ್ನು ಮಾಡುವುದಕ್ಕೆ ಪ್ಲಾನ್ ಮಾಡಿದೆ ಎನ್ನಲಾಗಿದೆ. ಅಲ್ಲದೇ ಅದಕ್ಕಾಗಿ ವಿದೇಶದಿಂದ ಗಾಯಕರನ್ನು ಕರೆಯಿಸಿ ಹಾಡು ಹಾಡಿಸುವ ಆಲೋಚನೆಯೊಂದನ್ನು ಸಹಾ ಚಿತ್ರ ತಂಡ ಮಾಡಿದೆ ಎನ್ನಲಾಗಿದ್ದು, ಈ ಆಲೋಚನೆಯನ್ನು ಸಲ್ಮಾನ್ ತಿರಸ್ಕರಿಸಿದ್ದಾರೆ ಎನ್ನಲಾಗಿದ್ದು, ಸಲ್ಲು ಭಾಯ್ ಅದಕ್ಕೆ ಕಾರಣ ಕೂಡಾ ನೀಡಿದ್ದಾರೆ ಎನ್ನಲಾಗಿದೆ.

ಸಲ್ಮಾನ್ ಖಾನ್ ಅವರು ಬಾಲಿವುಡ್ ನ ಎಷ್ಟೋ ಜನ ಸಿಂಗರ್ ಗಳು ಈಗಾಗಲೇ ವಿಶ್ವ ಮಟ್ಟದಲ್ಲಿ ಹೆಸರನ್ನು ಮಾಡಿದ್ದಾರೆ. ಅವರಲ್ಲಿ ಕೆಲವರು ಇನ್ನೂ ದಕ್ಷಿಣಕ್ಕೆ ಬಂದಿಲ್ಲ ಆದ್ದರಿಂದ ಹೆಚ್ಚಿನ ಹಣವನ್ನು ನೀಡಿ ವಿದೇಶಿ ಗಾಯಕರನ್ನು ಕರೆಸುವ ಬದಲು ಬಾಲಿವುಡ್ ಮಂದಿಯನ್ನೇ ಕರೆಯಿಸಿ, ‌ಹಾಡಿಸಿ ಎನ್ನುವ ಸಲಹೆಯನ್ನು ಸಲ್ಮಾನ್ ನೀಡಿದ್ದಾರೆ ಎನ್ನಲಾಗಿದ್ದು, ‌ಚಿತ್ರತಂಡಕ್ಕೂ ಸಹಾ ಸಲ್ಮಾನ್ ನೀಡಿರುವ ಐಡಿಯಾ ಬಹಳ ಇಷ್ಟವಾಗಿದೆ ಎನ್ನಲಾಗಿದೆ.

ಮೋಹನ್ ರಾಜ್ ಚಿರು ಅಭಿನಯದ ಗಾಡ್ ಫಾದರ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಸಲ್ಮಾನ್ ಈ ಸಿನಿಮಾ ಮೂಲಕ ದಕ್ಷಿಣ‌ದ ಸಿನಿಮಾ ಒಂದಕ್ಕೆ ಮೊದಲ ಬಾರಿಗೆ ಎಂಟ್ರಿ ನೀಡುತ್ತಿದ್ದಾರೆ. ‌ಚಿರು ಮತ್ತು ಸಲ್ಮಾನ್ ಖಾನ್ ನಡುವೆ ಒಂದು ಉತ್ತಮವಾದ ಸ್ನೇಹ ಬಾಂಧವ್ಯ ಇದ್ದು, ಅದೇ ಈಗ ಅವರು ಈ ಸಿನಿಮಾ ಮಾಡಲು ಪ್ರಮುಖವಾದ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Leave a Comment