ಚಿರು ಜನ್ಮದಿನದಂದೇ ಮೇಘನಾ ಮಾಡಿದ ಮಹತ್ವದ ನಿರ್ಧಾರ: ಚಿರು ಕನಸು ನನಸು ಮಾಡಲು ಸಜ್ಜಾದ ಮೇಘನಾ ರಾಜ್

Written by Soma Shekar

Published on:

---Join Our Channel---

ಇಂದು ಸರ್ಜಾ ಕುಟುಂಬಕ್ಕೆ ಒಂದು ವಿಶೇಷವಾದ ದಿನ. ಏಕೆಂದರೆ ಇಂದು ದಿವಂಗತ ಚಿರಂಜೀವಿ ಸರ್ಜಾ ಅವರ ಜನ್ಮದಿನ. ಚಿರು ಇಲ್ಲದ ಎರಡನೇ ಜನ್ಮ ದಿನ ಇದು. ಅವರು ಇದ್ದಿದ್ದರೆ ಖಂಡಿತ ಇಂದು ಅವರ ಮನೆಯಲ್ಲಿ ಬಹಳ ದೊಡ್ಡ ಸಂಭ್ರಮ, ಸಡಗರ ಇರುತ್ತಿತ್ತು. ಈ ವಿಶೇಷ ದಿನದಂದ ಚಿರು ಅವರ ಧರ್ಮಪತ್ನಿ ಮೇಘನಾ ರಾಜ್ ವಿಶೇಷ ಫೋಟೋಗಳನ್ನು ಹಂಚಿಕೊಂಡು ತಮ್ಮ ಪತಿಯ ಸ್ಮರಣೆಯಲ್ಲಿ ಅವರಿಗೆ ಶುಭಾಶಯವನ್ನು ಹೇಳಿ ಕೆಲವು ಭಾವುಕವಾದ ಸಾಲುಗಳನ್ನು ಅವರು ಬರೆದುಕೊಂಡಿದ್ದಾರೆ.

ಮೇಘನಾ ಅವರು ತಮ್ಮ ಪತಿಯ ಜನ್ಮದಿನದಂದೇ ಚಿರು ಅವರ ಕನಸೊಂದನ್ನು ನನಸು ಮಾಡುವ ಪಣ ತೊಟ್ಟಿದ್ದಾರೆ. ಚಿರು ಅವರ ಕನಸನ್ನು ನನಸು ಮಾಡೋದೇ ನನಗೆ ಸಂಭ್ರಮ ಎಂದಿರುವ ಮೇಘನಾ ಅವರು ಮಾಡಿರುವ ಒಂದು ಮಹತ್ವದ ನಿರ್ಧಾರ ಈಗ ಅವರ ಅಭಿಮಾನಿಗಳಿಗೆ ಕೂಡಾ ಖುಷಿಯನ್ನು ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಮಹಾರಾಣಿ ಗೆಟಪ್ ನಲ್ಲಿ ಚಿರು ಚಿತ್ರ ಬಿಡಿಸುತ್ತಿರುವ ಫೋಟೋಗಳನ್ನು ಶೇರ್ ಮಾಡಿ ಎಲ್ಲರ ಗಮನವನ್ನು ಸೆಳೆಯುತ್ತಲೇ ಹೊಸ ವಿಚಾರವನ್ನು ಸಹಾ ಹಂಚಿಕೊಂಡಿದ್ದಾರೆ.

ಹೌದು ಮೇಘನಾ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದು, ಇದಕ್ಕೆ ಮೇಘನಾ ಹಾಗೂ ಚಿರು ಅವರ ಸ್ನೇಹಿತರು ಸಹಾ ಕೈ ಜೋಡಿಸಿದ್ದಾರೆ. ಚಿರು ಅವರ ಆಪ್ತ ಗೆಳೆಯ, ನಿರ್ದೇಶಕ ಪನ್ನಗಾಭರಣ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೇಘನಾ ಅವರು ಪ್ರಮುಖ ಪಾತ್ರ ನಿರ್ವಹಣೆ ಮಾಡಲಿರುವ ಸಿನಿಮಾ ಘೋಷಣೆ ಮಾಡಿದ್ದು, ಚಿರಂಜೀವಿ ಅವರ ಜನ್ಮದಿನಕ್ಕೆ ತನ್ನ ಉಡುಗೊರೆ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು ಮೇಘನಾ ಅವರು ಸಹಾ ತಮ್ಮ ಪತಿಯ ಆಸೆಯಾದ ಒಂದು ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿ, ಹೊಸ ಹೊಸ ಸಿನಿಮಾ ಮಾಡೋ ಅವರ ಕನಸನ್ನು ನನಸು ಮಾಡಲು ಸಜ್ಜಾಗಿದ್ದಾರೆ. ಮೇಘನಾ ಅವರ ಈ ಪ್ರಯತ್ನ ಯಶಸ್ಸು ಪಡೆಯಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ಅಲ್ಲದೇ ಮೇಘನಾ ಅವರು ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡಲಿರುವ ವಿಚಾರವನ್ನು ತಿಳಿದು ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.

Leave a Comment