ಚಿತ್ರ ಸಹಿತ ಯೋಗ ಪಾಠ ಹೇಳಿಕೊಟ್ಟ ಸ್ಯಾಂಡಲ್ವುಡ್ ನ ಮೋಹಕ ತಾರೆ ರಮ್ಯ

0 0

ಸ್ಯಾಂಡಲ್ ವುಡ್ ನಟಿ, ಮೋಹಕತಾರೆ ಎನ್ನುವ ಹೆಸರನ್ನು ಪಡೆದುಕೊಂಡಿರುವ ರಮ್ಯಾ ಚಿತ್ರರಂಗದಿಂದ ಹಾಗೂ ರಾಜಕೀಯ ಜೀವನದಿಂದ ಅಂತರವನ್ನು ಕಾಯ್ದುಕೊಂಡು ಬಹಳ ದಿನಗಳೇ ಕಳೆದುಹೋಗಿವೆ. ನಟಿ ರಮ್ಯಾ ಸಕ್ರಿಯ ರಾಜಕಾರಣದಿಂದ ದೂರ ಆದ ನಂತರ ಸಿನಿಮಾಗಳಿಗೆ ಬರಬಹುದು ಎಂದು ಕೊಂಡಿದ್ದ ಅಭಿಮಾನಿಗಳಿಗೆ ನಟಿ ಚಿತ್ರರಂಗದ ಕಡೆ ಬರದೇ ಇರುವುದು ಬೇಸರವನ್ನು ಮೂಡಿಸಿದೆ. ಆದರೆ ನಟಿ ರಮ್ಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದ ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ‌.

ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು, ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ ನಟಿ ರಮ್ಯಾ. ರಾಜಕೀಯದಿಂದ ದೂರವಿದ್ದರೂ ಸಹಾ ಬಿಜೆಪಿ ಸರ್ಕಾರದ ಕಾರ್ಯ ಚಟುವಟಿಕೆಗಳ ಕುರಿತಾಗಿ ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕವೇ ನಟಿಯು ಅಸಮಾಧಾನವನ್ನು ಹೊರ ಹಾಕುತ್ತಾರೆ.

ಕೆಲವೊಂದು ಪ್ರಮುಖ ವಿಚಾರಗಳ ಕುರಿತಾಗಿ ಚರ್ಚೆಯನ್ನು ಮಾಡುತ್ತಾರೆ. ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಸಿನಿಮಾರಂಗದ ಅಪ್ಡೇಟ್ ಗಳನ್ನು ಪಡೆದುಕೊಳ್ಳುತ್ತಲೇ ಇರುತ್ತಾರೆ. ಈಗ ಇವೆಲ್ಲವುಗಳ ಮಧ್ಯೆ ಒಂದು ಹೊಸ ವಿಷಯದಿಂದ ರಮ್ಯ ಸುದ್ದಿಯಾಗಿದ್ದಾರೆ. ಹೌದು, ನಟಿ ರಮ್ಯಾ ಅವರು ಯೋಗಾಸನದ ಪಾಠವನ್ನು ಮಾಡುವ ಮೂಲಕ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ.

ನಟಿ ರಮ್ಯಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸೂರ್ಯ ನಮಸ್ಕಾರದ ಕುರಿತಾಗಿ ಬರೆದುಕೊಂಡಿದ್ದಾರೆ. ಸೂರ್ಯನಮಸ್ಕಾರದ ಕುರಿತಾಗಿ ಬರೆಯಲು ಅವರು ಒಂದು ಚಿತ್ರವನ್ನು ಶೇರ್ ಮಾಡಿಕೊಂಡಿದ್ದು, ನನಗೆ ಚಿತ್ರ ಸರಿಯಾಗಿ ಬರೆಯಲು ಬರುವುದಿಲ್ಲ ಎಂಬ ಮಾತನ್ನು ಕೂಡ ಹೇಳಿದ್ದಾರೆ. ರಮ್ಯಾ ತಮ್ಮ ಪೋಸ್ಟಿನಲ್ಲಿ ಈ ಆಸನದಂತೆ ನಮ್ಮ ಜೀವನವು ಕೂಡಾ ಹಲವು ಏರಿಳಿತಗಳನ್ನು ಕಂಡಿದೆ.

ಜೀವನವು ನಿರಂತರವಾದ ಬದಲಾವಣೆಯ ಚಲನೆಯಾಗಿದ್ದು, ಯೋಗಾಸನವು ನಮಗೆ ನಮ್ಮ ಜೀವನವನ್ನು ಸಂಪೂರ್ಣವಾಗಿ ಬದುಕಲು, ಸಮತೋಲನವಾಗಿ ಇಡಲು ಹಾಗೂ ಸಮಚಿತ್ತತೆಯನ್ನು ಸಾಧಿಸಲು ಸಹಾಯವಾಗುತ್ತದೆ ಎಂದಿದ್ದಾರೆ. ಕೆಲವು ತಿಂಗಳುಗಳಿಂದ ನಾನು ಯೋಗಾಸನ ಪ್ರಾರಂಭಿಸಿದ್ದು ಅದನ್ನು ಬಹಳ ಇಷ್ಟಪಡುತ್ತೇನೆ ಎಂದಿದ್ದಾರೆ ನಟಿ ರಮ್ಯಾ.

ಯೋಗಾಸನವನ್ನು ನಾನು ಬಹಳ ಪ್ರೀತಿಸುತ್ತೇನೆ. ಯೋಗಾಸನಗಳು ನನಗೆ ನನ್ನ ಬಗ್ಗೆ ಆಲೋಚಿಸಲು, ನನ್ನನ್ನು ನಾನು ಅರ್ಥಮಾಡಿಕೊಳ್ಳಲು ಬಹಳ ಸಹಾಯಕವಾಗಿದೆ. ಇದು ನನಗೆ ಮತ್ತಷ್ಟು ಶಕ್ತಿಯನ್ನು ನೀಡಿದೆ. ನನ್ನ ಶಿಕ್ಷಕರಿಗೆ ನಾನು ಕೃತಜ್ಞಳಾಗಿದ್ದೇನೆ ಎಂದು ಹೇಳಿರುವ ರಮ್ಯಾ, ಯೋಗದಿಂದ ತಮ್ಮ ಅಭಿಮಾನಿಗಳ ಜೀವನದಲ್ಲಿ ಅವರೇನಾದರೂ ಪಾಠ ಕಲಿತಿದ್ದರೆ ಅದನ್ನು ಹಂಚಿಕೊಳ್ಳಿ ಎನ್ನುವ ಮನವಿಯನ್ನು ಮಾಡಿದ್ದಾರೆ.

Leave A Reply

Your email address will not be published.