ಚಿತ್ರರಂಗ ಮರೆಯಲಾಗದ ನಟಿ ಸೌಂದರ್ಯ ಅವರನ್ನು ಸ್ಮರಿಸಿ, ಅದ್ಭುತ ವಿಚಾರ ಹಂಚಿಕೊಂಡ ನಟಿ ಪ್ರಥಮಾ ಪ್ರಸಾದ್

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ನಟಿ ಪ್ರಥಮಾ ಪ್ರಸಾದ್. ಹಿರಿಯ ನಟಿ ವಿನಯ ಪ್ತಸಾದ್ ಅವರ ಮಗಳಾಗಿ ತಾಯಿಯಂತೆ ತಾವೂ ಕೂಡಾ ನಟನಾ ಕ್ಷೇತ್ರವನ್ನು ಆರಿಸಿಕೊಂಡಿರುವ ಈ ನಟಿ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ಅವರು ಈಗಾಗಲೇ ನಟಿಸಿ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಇತ್ತೀಚಿಗೆ ನಟಿ ಪ್ರಥಮಾ ಪ್ರಸಾದ್ ಅವರು ಭಾರತೀಯ ಸಿನಿಮಾ ರಂಗದ ಮೇರು ನಟಿ, ಕನ್ನಡತಿ, ದಕ್ಷಿಣ ಭಾರತ ಸಿನಿ ಸೀಮೆಯಲ್ಲಿ ಸ್ಟಾರ್ ನಟಿಯಾಗಿ ಮೆರೆದ ಸೌಂದರ್ಯ ಅವರನ್ನು ಸ್ಮರಿಸಿ, ಗೌರವವನ್ನು ಸಲ್ಲಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರಥಮಾ ಪ್ರಸಾದ್ ಅವರು ಅಭಿಮಾನಿಗಳೊಡನೆ ಪ್ರಶ್ನೆ, ಉತ್ತರ ನಡೆಸುವ ವೇಳೆ, ಅವರನ್ನು ಅವರ ಅಭಿಮಾನಿಯೊಬ್ಬರು ಸೌಂದರ್ಯ ಅವರನ್ನು ಕುರಿತು ಮಾತನಾಡುವಂತೆ ಹಾಗೂ ಅವರಿಗೆ ಸೌಂದರ್ಯ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತಾ?? ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಪ್ರಥಮಾ ಪ್ರಸಾದ್ ಅವರು ಕೂಡಲೇ ನಟಿ ಸೌಂದರ್ಯ ಅವರ ಕುರಿತಾಗಿ ತಮ್ಮ ಭಾವನೆಗಳನ್ನು, ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಪ್ರಥಮಾ ಅವರು ನಟಿ ಸೌಂದರ್ಯ ಅವರ ಫೋಟೋವನ್ನು ಶೇರ್ ಮಾಡಿಕೊಂಡು,”ನಟಿ ಸೌಂದರ್ಯ ಅಂದ, ವಿನಮ್ರತೆ, ತಾಳ್ಮೆ, ಹೊಳಪು, ಸಮರ್ಪಣೆ, ಲಾಲಿತ್ಯ ಮತ್ತ ಘನತೆವೆತ್ತ ವ್ಯಕ್ತಿತ್ವ” ಎಂದು ಬರೆದುಕೊಂಡಿದ್ದಾರೆ. ಇದಾದ ನಂತರ ಪ್ರಥಮಾ ಅವರು ದಿವಂಗತ ನಟಿ ಸೌಂದರ್ಯ ಅವರ ಕುರಿತಾದ ಬಹಳ ಅಚ್ಚುಮೆಚ್ಚಿನ ಒಂದು ಸ್ಮರಣೆಯನ್ನು ಸಹಾ ಶೇರ್ ಮಾಡಿಕೊಂಡಿದ್ದಾರೆ. ಸೌಂದರ್ಯ ಅವರನ್ನು ಭೇಟಿ ಮಾಡಿದ ಒಂದು ಸ್ಮರಣೆಯನ್ನು ಅವರು ಎಲ್ಲರೊಡನೆ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.

ಸಿಪಾಯಿ ಸಿನಿಮಾದ ಚಿತ್ರೀಕರಣದ ವೇಳೆ ಅವರನ್ನು ಭೇಟಿಯಾಗುವ ಅದೃಷ್ಟ ನನಗೆ ಸಿಕ್ಕಿತು. ನಾನಿನ್ನೂ ಆಗ ಚಿಕ್ಕ ಹುಡುಗಿ, ಆದರೆ ಅವರ ವ್ಯಕ್ತಿತ್ವವನ್ನು ಕಂಡು ಬೆರಗಾದೆ, ನಮ್ಮ ಉದ್ಯಮದ ಅಮೂಲ್ಯ ರತ್ನ ಅವರು ಎಂದು ಪ್ರಥಮಾ ಪ್ರಸಾದ್ ಅವರು ಸೌಂದರ್ಯ ಕುರಿತಾದ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ಅಲ್ಲದೇ ನಟಿ ಸೌಂದರ್ಯ ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎನ್ನುವ ಮಾತನ್ನು ಹೇಳಿದ್ದಾರೆ. ಪ್ರಥಮಾ ಅವರು ಪ್ರಸ್ತುತ ಕನ್ಯಾಕುಮಾರಿ ಧಾರಾವಾಹಿಯಲ್ಲೊಂದು ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ.

Leave a Comment