ಸ್ಟಾರ್ ನಟರ ಮಕ್ಕಳು ಸಿನಿಮಾ ರಂಗಕ್ಕೆ ಬರುವುದು ಹೊಸ ವಿಚಾರ ಖಂಡಿತ ಅಲ್ಲ. ಅಲ್ಲದೇ ಸ್ಟಾರ್ ನಟರ ಮಕ್ಕಳಿಗೆ ಚಿತ್ರರಂಗಕ್ಕೆ ಪ್ರವೇಶ ನೀಡುವುದು ಹಾಗೂ ಜನಪ್ರಿಯತೆಯನ್ನು ಪಡೆದುಕೊಳ್ಳುವುದು ಖಂಡಿತ ಕಷ್ಟ ಆಗಿರುವುದಿಲ್ಲ. ಆದರೆ ಚಿತ್ರರಂಗಕ್ಕೆ ಪ್ರವೇಶ ಪಡೆದ ನಂತರ ಅಭಿಮಾನಿಗಳ ಅಭಿಮಾನವನ್ನು ಸಂಪಾದಿಸಿ, ತಮ್ಮ ಹಿರಿಯರಂತೆ ತಾವು ಸಹಾ ಸ್ಟಾರ್ ನಟರಾಗಿ ಬೆಳೆಯುವುದು ಮಾತ್ರ ಸಂಪೂರ್ಣವಾಗಿ ಅವರ ಕೈಯಲ್ಲೇ ಇರುತ್ತದೆ. ಆದರೆ ಅವರ ತಂದೆ-ತಾಯಿ ಅಥವಾ ಇನ್ನಾರೋ ಹಿರಿಯರ ಸಿನಿಮಾ ವರ್ಚಸ್ಸು ಮಾತ್ರ ಸ್ಟಾರ್ ಕುಡಿಗಳ ಜನಪ್ರಿಯತೆಗೆ ಪೂರಕವಾಗಿರುತ್ತದೆ ಎನ್ನುವುದನ್ನು ಎಲ್ಲರೂ ಒಪ್ಪಲೇ ಬೇಕಾಗಿದೆ.
ದಕ್ಷಿಣ ಸಿನಿಮಾರಂಗದ ಜನಪ್ರಿಯ ನಟರಲ್ಲಿ, ತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್ ಬಾಬು ಸಹಾ ಒಬ್ಬರಾಗಿದ್ದಾರೆ. ಪಡೆದುಕೊಂಡಿರುವ ನಟ ಮಹೇಶ್ ಬಾಬು ಅವರು ಕೂಡ ಒಬ್ಬರಾಗಿದ್ದಾರೆ. ದಶಕಗಳಿಂದ ತಮ್ಮ ಸ್ಟಾರ್ ವರ್ಚಸ್ಸನ್ನು ಉಳಿಸಿಕೊಂಡಿರುವ ಅವರ ಬಗ್ಗೆ ತಿಳಿಯುವ ಉತ್ಸುಕತೆ ಅವರ ಅಭಿಮಾನಿಗಳಲ್ಲಿ ಸದಾ ಇದ್ದೇ ಇದೆ. ಇದೀಗ ಮಹೇಶ್ ಬಾಬು ಅವರ ಅಭಿಮಾನಿಗಳ ಮುಂದೆ ಹೊಸ ವಿಷಯವೊಂದು ಬಂದಿದ್ದು, ಅಭಿಮಾನಿಗಳಿಗೆ ಇದೊಂದು ಅಚ್ಚರಿಯನ್ನು ಉಂಟು ಮಾಡಿದೆ. ಹಾಗಾದರೆ ಏನು ಆ ವಿಷಯ?? ಬನ್ನಿ ತಿಳಿಯೋಣ.
ಖ್ಯಾತ ನಟ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ ಇದೀಗ ಸಿನಿರಂಗಕ್ಕೆ ಅಡಿಯಿಟ್ಟಿದ್ದಾರೆ. ಸಿತಾರಾ ಸಿನಿಮಾವೊಂದರಲ್ಲಿ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕುವ ಮೂಲಕ ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ. ಮಹೇಶ್ ಬಾಬು ಅವರ ಹೊಸ ಸಿನಿಮಾ ಸರ್ಕಾರು ವಾರಿ ಪಾಟ ದಲ್ಲಿ ಮಹೇಶ್ ಬಾಬು ಅವರ ಮಗಳ ಹೆಜ್ಜೆ ಹಾಕಿರುವ ಹಾಡನ್ನು ನಿರ್ಮಾಪಕರು ಪೇನಿ ಸಾಂಗ್ ಎನ್ನುವ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಿದ್ದಾರೆ. ನಟ ಮಹೇಶ್ ಬಾಬು ಅವರು ಸಹಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಸ್ಟೋರಿಯಲ್ಲಿ ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದರು.
ಮಹೇಶ್ ಬಾಬು ಅವರ ಮಗಳ ಸಿನಿ ರಂಗದ ಪ್ರವೇಶದ ವಿಚಾರವು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇನ್ನು ಸರ್ಕಾರುವಾರಿ ಪಾಟ ಸಿನಿಮಾದಲ್ಲಿ ನಟ ಮಹೇಶ್ ಬಾಬು ಅವರ ಜೊತೆಗೆ ಮಹಾನಟಿ ಸಿನಿಮಾ ಖ್ಯಾತಿಯ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸರ್ಕಾರು ವಾರಿ ಪಾಟ ಸಿನಿಮಾ ಹಲವು ವಿಶೇಷತೆಗಳಿಂದ ಎಲ್ಲರ ಗಮನವನ್ನು ಸೆಳೆದಿದೆ.