ಚಿತ್ರರಂಗಕ್ಕೆ ಅಡಿಯಿಟ್ಟ ಸಿಂಗಂ ಖ್ಯಾತಿಯ ಮಾಜಿ IPS ಅಧಿಕಾರಿ: ಪಡೆದ ಸಂಭಾವನೆ ಕೇವಲ 1 ರೂಪಾಯಿ

Entertainment Featured-Articles Movies News

ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಉದ್ಯೋಗಕ್ಕೆ ರಾಜೀನಾಮೆಯನ್ನು ನೀಡಿದ ನಂತರ ತಮ್ಮ ತವರಾದ ತಮಿಳುನಾಡಿಗೆ ಹಿಂತಿರುಗಿದರು. ಸ್ವಲ್ಪ ದಿನಗಳು ಕಳೆದ ನಂತರ ಅಣ್ಣಾಮಲೈ ಅವರು ರಾಜಕೀಯ ಪ್ರವೇಶ ಮಾಡಿದರು, ಚುನಾವಣೆಯ ಕಣಕ್ಕೆ ಇಳಿದರು. ಹೀಗೆ ರಾಜಕಾರಣದಲ್ಲಿ ತೊಡಗಿಕೊಂಡಿರುವ ಅವರು ಇದೀಗ ಸಕ್ರಿಯ ರಾಜಕಾರಣಿಯಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವೆಲ್ಲವುಗಳ ಬೆನ್ನಲ್ಲೇ ಹೊಸ ಸುದ್ದಿಯೊಂದು ಹೊರಗೆ ಬಂದಿದೆ.

ಪ್ರಸ್ತುತ ತಮಿಳುನಾಡಿನ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಅಣ್ಣಾಮಲೈ ಅವರು ರಾಜಕಾರಣದ ನಡುವೆಯೇ ಇದೀಗ ಸದ್ದಿಲ್ಲದೇ ಕನ್ನಡ ಸಿನಿಮಾವೊಂದರಲ್ಲೂ ಸಹಾ ನಟಿಸುತ್ತಿದ್ದಾರೆ.‌ ಇನ್ನೂ ವಿಶೇಷ ಏನೆಂದರೆ ಅಣ್ಣಾಮಲೈ ಅವರು ಈ ಹೊಸ ಸಿನಿಮಾದಲ್ಲಿ ನಟಿಸುವ ಸಲುವಾಗಿ ತೆಗೆದುಕೊಂಡಿರುವ ಸಂಭಾವನೆ ವಿಚಾರ ಇದೀಗ ಎಲ್ಲರ ಗಮನವನ್ನು ಸೆಳೆದಿದೆ. ಮೊದಲ ಸಿನಿಮಾಕ್ಕಾಗಿ ಅಣ್ಣಾ ಮಲೈ ಪಡೆದ ಸಂಭಾವನೆ ನಿಜಕ್ಕೂ ಅಚ್ಚರಿಯನ್ನು ಮೂಡಿಸಿದೆ.

ಅಣ್ಣಾಮಲೈ ಅವರು ಕನ್ನಡದ ಅರಬ್ಬಿ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಣ್ಣಾಮಲೈ ಅವರು ಸ್ವಿಮ್ಮಿಂಗ್ ಕೋಚ್ ಆಗಿ ತಮ್ಮ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಅಣ್ಣಾಮಲೈ ಅವರ ಭಾಗದ ಚಿತ್ರೀಕರಣ ಮುಗಿದಿದೆ ಎನ್ನಲಾಗಿದ್ದು, ಈ ಸಿನಿಮಾ ಕೈಗಳಿಲ್ಲದೇ ಹೋದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಜಿನಲ್ಲಿ ಸಾಧನೆ ಮಾಡಿರುವ ಕೆ.ಎಸ್. ವಿಶ್ವಾಸ್ ಅವರ ಜೀವನವನ್ನು ಆಧರಿಸಿದೆ. ಸಿನಿಮಾದಲ್ಲಿ ವಿಶ್ವಾಸ್ ಅವರೇ ತಮ್ಮ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ನಟಿಸಲು ಅಣ್ಣಾಮಲೈ ಅವರು ಕೇವಲ ಒಂದು ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಅಣ್ಣಾಮಲೈ ಅವರನ್ನು ಈ ಸಿನಿಮಾದಲ್ಲಿ ನಟಿಸುವಂತೆ ಕೇಳಿದಾಗಲೇ ಅವರು ಅದನ್ನು ಒಪ್ಪಿಕೊಂಡರು ಎನ್ನಲಾಗಿದೆ. ಅರಬ್ಬಿ ಸಿನಿಮಾ ಮೂಲಕ ಅಣ್ಣಾಮಲೈ ಅವರು ಸಿನಿಮಾ ರಂಗಕ್ಕೆ ಎಂಟ್ರಿ ನೀಡುತ್ತಿದ್ದು, ಇದು ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ.

Leave a Reply

Your email address will not be published. Required fields are marked *