ಚಿತ್ರದ ಶೂಟಿಂಗ್ ವೇಳೆ ಗರ್ಭಿಣಿಯಾಗಿದ್ದರು ಬಾಲಿವುಡ್ ನ ಈ ಸ್ಟಾರ್ ನಟಿಯರು!!

0 5

ತೆರೆಯ ಮೇಲೆ ಜನರ ಮುಂದೆ ಬರುವ ಸಿನಿಮಾ ಸ್ಟಾರ್ ಗಳ ವಾಸ್ತವ ಜೀವನ ಅವರ ಸಿನಿಮಾ ಜೀವನಕ್ಕಿಂತ ಬಹಳ ಭಿನ್ನವಾಗಿರುತ್ತದೆ. ಅದರಲ್ಲೂ ಸೂಪರ್ ಸ್ಟಾರ್ ಗಳಾದರೆ ಅವರ ಐಶಾರಾಮೀ ಜೀವನದ ಕುರಿತಾಗಿ ಹೇಳುವುದು ಕೂಡಾ ಸಾಧ್ಯ ಇಲ್ಲ. ಆದರೆ ಕೆಲವೊಂದು ವಿಷಯಗಳಲ್ಲಿ ಸಿನಿಮಾ ತಾರೆಯರು ತಮ್ಮ ವೈಯಕ್ತಿಕ ಜೀವನದಲ್ಲಿನ ಘಟನೆಗಳು, ವಿಷಯಗಳಿಂದಾಗಿ ಅವರ ವೃತ್ತಿ ಜೀವನದಲ್ಲಿ ಕೆಲವು ಬದಲಾವಣೆಗಳಿಗೆ, ಕೆಲವು ಅವಕಾಶಗಳನ್ನು ಬಿಟ್ಟು ಕೊಡಬೇಕಾದಂತಹ ಪರಿಸ್ಥಿತಿಗಳಿಗೂ ಸಹಾ ಕಾರಣವಾಗುತ್ತದೆ. ವೈಯಕ್ತಿಕ ಜೀವನಕ್ಕಾಗಿ ಕೆಲವು ಸಿನಿಮಾಗಳನ್ನು ಕೈ ಬಿಡಬೇಕಾಗುತ್ತದೆ.

ನಾವಿಂದು ನಿಮಗೆ ಬಾಲಿವುಡ್ ನ ಐದು ಜನ ಸ್ಟಾರ್ ನಟಿಯರ ಬಗ್ಗೆ ತಿಳಿಸಲು ಹೊರಟಿದ್ದೇವೆ. ಈ ನಟಿಯರು ಚಿತ್ರೀಕರಣದ ವೇಳೆಯಲ್ಲಿ ಗರ್ಭವತಿಯರಾಗಿದ್ದರು. ಅಲ್ಲದೇ ಗರ್ಭ ಧರಿಸಿದ ಕಾರಣದಿಂದಲೇ ಈ ನಟಿಯರು ಕೆಲವು ಸಿನಿಮಾಗಳನ್ನು ಸಹಾ ಕೈ ಬಿಡಲೇಬೇಕಾಯಿತು. ಏಕೆಂದರೆ ತಾಯ್ತನ ಎನ್ನುವುದು ಸಿನಿಮಾಕ್ಕಿಂತ ದೊಡ್ಡದು ಮತ್ತು ವೈಯಕ್ತಿಕ ಜೀವನದ ಕಡೆಗೂ ಸಹಾ ಅವರು ಗಮನ ನೀಡಬೇಕಾಗಿತ್ತು. ಬನ್ನಿ ಚಿತ್ರೀಕರಣದ ವೇಳೆ ಗರ್ಭವತಿಯರೆಂದು ತಿಳಿದು ಬಂದ ಆ ನಟಿಯರು ಯಾರೆಂದು ತಿಳಿಯೋಣ‌

ಜಯಾ ಬಚ್ಚನ್ : ಇಂದಿನ ಬಾಲಿವುಡ್‌ ನ ಹಿರಿಯ ನಟಿಯರಲ್ಲಿ ಒಬ್ಬರು ಜಯಾ ಬಚ್ಚನ್. ಬಾಲಿವುಡ್ ನ ದಿಗ್ಗಜ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಧರ್ಮ ಪತ್ನಿಯಾದ ಜಯಾ ಬಚ್ಚನ್‌ ಅವರು ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳ ಜನಪ್ರಿಯ ನಾಯಕಿಯಾಗಿದ್ದವರು. ಜಯಾ ಬಚ್ಚನ್ ಅವರು ಸಹಾ ವಿವಾಹದ ನಂತರ ಸಿನಿಮಾಗಳಲ್ಲಿ ನಟಿಸುವಾಗಲೇ, ಒಂದು ಸಿನಿಮಾ ಚಿತ್ರೀಕರಣದ ವೇಳೆ ಅವರು ಗರ್ಭ ಧರಿಸಿರುವ ವಿಚಾರ ತಿಳಿದು ಬಂದಿತ್ತು.

ಶ್ರೀದೇವಿ : ದಕ್ಷಿಣ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ದೊಡ್ಡ ಸ್ಟಾರ್ ಆಗಿ ಮೆರೆದು, ತನ್ನದೇ ಹೊಸ ಇತಿಹಾಸ ಬರೆದ ನಟಿ ಶ್ರೀದೇವಿ ಅವರು ಮದುವೆಯ ನಂತರ ಅನಿಲ್ ಕಪೂರ್ ಜೊತೆ ಒಂದು ಸಣ್ಣ ಗ್ಯಾಪ್ ನಂತರ ಜುದಾಯಿ ಸಿನಿಮಾದಲ್ಲಿ ನಟಿಸುವಾಗಲೇ ಗರ್ಭ ಧರಿಸಿದ್ದರು. ವಿಷಯ ತಿಳಿದ ಮೇಲೆ ಶ್ರೀದೇವಿ ಸಿನಿಮಾ ಪೂರ್ತಿ ಮಾಡಿದ ನಂತರ ಸಿನಿಮಾಗಳಿಂದ ಗ್ಯಾಪ್ ಪಡೆದಿದ್ದರು.

ಜೂಹಿ ಚಾವ್ಲಾ : ಕನ್ನಡ ಸಿನಿಮಾ ಪ್ರೇಮ ಲೋಕದ ಬೆಡಗಿ ಬಾಲಿವುಡ್ ಸುಂದರಿ ಜೂಹಿ ಚಾವ್ಲಾ ಬಾಲಿವುಡ್ ನ ಒಂದು ಕಾಲದ ಸ್ಟಾರ್ ನಟಿ. 2003 ರಲ್ಲಿ ಬಂದ ಝೇಂಕಾರ್ ಬೀಟ್ಸ್ ಸಿನಿಮಾದಲ್ಲಿ ಜೂಹಿ ಗರ್ಭಿಣಿ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾ ವೇಳೆ ಅವರಿಗೆ ತಾವು ನಿಜವಾಗಿಯೂ ಗರ್ಭ ಧರಿಸಿದ ವಿಚಾರ ತಿಳಿದು ಬಂದಿತ್ತು. ಆದರೆ ಅವರು ಸಿನಿಮಾ ಮುಗಿಸುವ ವರಗೆ ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ‌.

ಐಶ್ವರ್ಯ ರೈ ; 2013 ರಲ್ಲಿ ಮಧುರ್ ಭಂಡಾರ್ಕರ್ ನಿರ್ದೇಶದನ ಹೀರೋಯಿನ್ ಸಿನಿಮಾದಲ್ಲಿ ನಾಯಕಿಯಾಗಿದ್ದರು. ಆದರೆ ಐಶ್ವರ್ಯ ಗೆ ತಾವು ಗರ್ಭ ಧರಿಸಿದ ವಿಚಾರ ತಿಳಿದ ಕೂಡಲೇ ಸಿನಿಮಾದಿಂದ ಹೊರ ಬಂದಿದ್ದರು. ಅನಂತರ ಕರೀನಾ ಕಪೂರ್ ಈ ಸಿನಿಮಾಕ್ಕೆ ನಾಯಕಿಯಾದರು, ಸಿನಿಮಾ ದೊಡ್ಡ ಯಶಸ್ಸನ್ನು ಸಹಾ ಪಡೆದಿತ್ತು.

ಹೇಮಾ ಮಾಲಿನಿ : ಬಾಲಿವುಡ್ ಸಿನಿಮಾ ರಂಗದಲ್ಲಿ ಡ್ರೀಮ್ ಗರ್ಲ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಅಂದಿನ ಸ್ಟಾರ್ ನಟಿ ಹೇಮಾ ಮಾಲಿನಿ ಅವರಿಗೆ ಇಂದಿಗೂ ತಾರಾ ವರ್ಚಸ್ಸು ಕಡಿಮೆಯಾಗಿಲ್ಲ. 1983 ರಲ್ಲಿ ರಜಿಯಾ ಸುಲ್ತಾನ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ಹೇಮಾ ಮಾಲಿನಿ ಅವರು ಗರ್ಭಿಣಿಯಾಗಿದ್ದರು. ಅನಂತರ ಸಿನಿಮಾ ಮುಗಿಸಿ ಬ್ರೇಕ್ ಪಡೆದಿದ್ದರು.

Leave A Reply

Your email address will not be published.