ಚಿಕ್ಕಮ್ಮ ಕರೀನಾ, ಮಗಳು ಸಾರಾ ನಡುವೆ ಎಲ್ಲವೂ ಸರಿ ಇಲ್ವಂತೆ!! ಕೇವಲ ಮಾದ್ಯಮಗಳ ಮುಂದೆ ಪ್ರೀತೀನಾ?? ಅಂತಿದ್ದಾರೆ ನೆಟ್ಟಿಗರು

Written by Soma Shekar

Published on:

---Join Our Channel---

ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಕರೀನಾ ಕಪೂರ್ ಮತ್ತು ಸಾರಾ ಆಲಿ ಖಾನ್ ಅವರ ಹೆಸರು ಖಂಡಿತ ಇದೆ. ಈ ಇಬ್ಬರು ನಟಿಯರು ವೈಯಕ್ತಿಕ ಜೀವನದಲ್ಲಿ ಸಂಬಂಧದಲ್ಲಿ ಅಮ್ಮ ಮಗಳು ಎಂದರೆ ಅಚ್ಚರಿ ಪಡುವ ಅಗತ್ಯ ಖಂಡಿತ ಇಲ್ಲ. ಏಕೆಂದರೆ ಸಾರಾ ಆಲಿ ಖಾನ್ ತಂದೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಎರಡನೇ ಪತ್ನಿ ಕರೀನಾ ಕಪೂರ್ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಈ ಕಾರಣದಿಂದಾಗಿಯೇ ಕರೀನಾ ಕಪೂರ್ ಸಾರಾ ಗೆ ಚಿಕ್ಕಮ್ಮ ಆಗುತ್ತಾರೆ. ಇವರಿಬ್ಬರು ಕೂಡಾ ಒಂದು ವೃತ್ತಿಯಲ್ಲಿ ಇದ್ದಾರೆ. ಇಬ್ಬರೂ ಸಹಾ ಸ್ಟಾರ್ ನಟಿಯರು ಎನ್ನುವ ಹೆಗ್ಗಳಿಕೆ ಬೇರೆ ಇದೆ.

ಇನ್ನು ಈ ಹಿಂದೆ ಒಮ್ಮೆ ಸಾರಾ ಸಂದರ್ಶನವೊಂದರಲ್ಲಿ ತನ್ನ ಪೇವರಿಟ್ ನಟಿ ಕರೀನಾ, ಅವರನ್ನು ತನ್ನ ತಂದೆ ಮದುವೆಯಾಗಿರುವುದು ತನಗೆ ಬಹಳ ಖುಷಿಯ ವಿಚಾರ ಎನ್ನುವ ಮಾತನ್ನು ಸಹಾ ಹೇಳಿದ್ದುಂಟು. ಆದರೆ ಈ ಅಮ್ಮ, ಮಗಳ ನಡುವೆ ಎಲ್ಲವೂ ಸರಿಯಿಲ್ಲ ಎನ್ನುತ್ತಾರೆ ನೆಟ್ಟಿಗರು. ಹೌದು ಪ್ರಸ್ತುತ ದಿನಗಳಲ್ಲಿ ಸೆಲೆಬ್ರಿಟಿಗಳಿಗೆ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿ ಇರಲು, ತಮ್ಮ ಮಾತುಗಳನ್ನು ಹಂಚಿಕೊಳ್ಳುವ ಪ್ರಮುಖ ವೇದಿಕೆಯಾಗಿದೆ ಸಾಮಾಜಿಕ ಜಾಲರಾಣಗಳು.

ನಟಿ ಕರೀನಾ ಕಪೂರ್ ಸೋಶಿಯಲ್ ಮೀಡಿಯಾಗೆ ಎಂಟ್ರಿ ನೀಡಿದಾಗ ಆಕೆಗೆ ಕುಟುಂಬದ ಸದಸ್ಯರು, ಸಿನಿಮಾ ಸ್ನೇಹಿತರು ಹಾಗೂ ಅಭಿಮಾನಿಗಳು ಭರ್ಜರಿ ಸ್ವಾಗತವನ್ನು ನೀಡಿದ್ದರು. ಆದರೆ ತನ್ನ ಅಭಿಮಾನಿ ನಟಿ ಎಂದು ಹೇಳಿಕೊಂಡಿದ್ದ ಸಾರಾ ಆಲಿ ಖಾನ್ ಮಾತ್ರ ತನ್ನ ಚಿಕ್ಕಮ್ಮನಿಗೆ ಯಾವುದೇ ರೀತಿಯಲ್ಲಿ ಕೂಡಾ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಕರೀನಾ ಅವರನ್ನು ಈಗ ಲಕ್ಷಾಂತರ ಜನರು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುತ್ತಿದ್ದಾರೆ.

ವಿಷಯ ಇಷ್ಟಕ್ಕೇ ಮುಗಿದಿಲ್ಲ, ಕರೀನಾ ತಾನು ಕೆಲವೇ ಆಯ್ದ ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ಗಂಡನ ತಂಗಿ ಸೋಹಾ, ಆಕೆಯ ಪತಿ ಕುನಾಲ್ ಅನ್ನು ಕರೀನಾ ಫಾಲೋ ಮಾಡಿದ್ದಾರೆ. ಆದರೆ ಅವರ ಲಿಸ್ಟ್ ನಲ್ಲಿ ಸಾರಾ ಇಲ್ಲ ಎನ್ನುವುದು ವಿಶೇಷ. ಸರಿ ಇನ್ನು ನನ್ನ ಅಪ್ಪ ಕರೀನಾಳನ್ನು ಮದುವೆಯಾಗಿದ್ದು ನನಗೆ ಖುಷಿ ಖುಷಿ ಎಂದಿದ್ದ ಸಾರಾ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕಮ್ಮನನ್ನು ಫಾಲೋ ಮಾಡುತ್ತಿಲ್ಲ ಎನ್ನುವುದು ಸಹಾ ವಿಶೇಷ.

ಮಾದ್ಯಮಗಳ ಮುಂದೆ ಎಲ್ಲವೂ ಸರಿಯಿದೆ ಎಂದು ತೋರಿಸಿಕೊಳದಳು ಈ ಇಬ್ಬರ ಇಂತಹುದೊಂದು ವಿಚಿತ್ರ ವರ್ತನೆಯನ್ನು ಗಮನಿಸಿರುವ ನೆಟ್ಟಿಗರು ಚಿಕ್ಕಮ್ಮ ಮತ್ತು ಮಗಳ ನಡುವೆ ಎಲ್ಲವೂ ಸರಿಯಿಲ್ಲ, ಅವರ ನಡುವೆ ಏನೋ ಸಮಸ್ಯೆ ಇದೆ ಎಂದು ಅನುಮಾನ ಪಡುವುದು ಸಾಮಾನ್ಯವಾಗಿದೆ. ಒಟ್ಟಾರೆ ಸೆಲೆಬ್ರಿಟಿಗಳ ವೈಯುಕ್ತಿಕ ಜೀವನ, ಮಾದ್ಯಮಗಳ ಮುಂದಿನ ಜೀವನ ವಿಭಿನ್ನ ಎನ್ನುವ ಅನುಮಾನ ಖಂಡಿತ ಮೂಡಿಸುತ್ತದೆ.

Leave a Comment