ಚಾಣಾಕ್ಯ ನೀತಿ: ಈ 5 ಅಭ್ಯಾಸಗಳು ಇದ್ದವರಿಗೆ ಹಣಕ್ಕಾಗಿ ಪರದಾಡುವ ದಿನಗಳು ಎದುರಾಗುತ್ತವೆ

0 1

ಆಚಾರ್ಯ ಚಾಣಾಕ್ಯನು ಒಬ್ಬ ರಾಜಕೀಯ ತಜ್ಞ, ಆರ್ಥಿಕ ತಜ್ಞ ಮಾತ್ರವೇ ಅಲ್ಲದೇ ಸಾಮಾಜಿಕ ಬದಲಾಣೆಗೆ ಗಮನ ನೀಡಿದ ವ್ಯಕ್ತಿಯೂ ಹೌದು. ಬಹಳಷ್ಟು ವಿಷಯಗಳ ಬಗ್ಗೆ ಜ್ಞಾನವನ್ನು ಹೊಂದಿದ್ದ ಚಾಣಾಕ್ಯ ತಮ್ಮ ಅನುಭವಗಳನ್ನು ನೀತಿ ಶಾಸ್ತ್ರದ ರೂಪದಲ್ಲಿ ಬರೆದು ಸಂಗ್ರಹಿಸಿದ್ದು, ಅವರ ಈ ನೀತಿ ಶಾಸ್ತ್ರವು ಅನೇಕರಿಗೆ ಜೀವನ ವಿಧಾನವನ್ನು ತಿಳಿಸುತ್ತದೆ. ಅವುಗಳನ್ನು ಪಾಲಿಸಿದರೆ ಜೀವನದಲ್ಲಿ ಸುಖ, ಸಂತೋಷ ನೆಲೆಗೊಳ್ಳುತ್ತದೆ. ಚಾಣಾಕ್ಯನು ವ್ಯಕ್ತಿಯೊಬ್ಬನ ಅವನತಿಗೆ ಕಾರಣವಾಗುವ ಐದು ಅಭ್ಯಾಸಗಳ ಕುರಿತಾಗಿ ಹೇಳಿದ್ದು, ಸಮಸ್ಯೆಗಳನ್ನು ತಂದೊಡ್ಡುವ ಆ ಅಭ್ಯಾಸಗಳು ಯಾವುದು ತಿಳಿಯೋಣ ಬನ್ನಿ.

ಕೋಪ ಮತ್ತು ಆವೇಶ : ಕೋಪದಲ್ಲಿ ಇರುವಾಗ ವ್ಯಕ್ತಿಯು ಎಂದೂ ಕೂಡಾ ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವುದಿಲ್ಲ. ಕೆಲವರು ಹಾಗೆ ಆ ವೇ ಶ ದಿಂದ ಮಾಡಿದ ನಿರ್ಧಾರಗಳಿಂದ ಹಾಗೂ ಅವುಗಳನ್ನು ಬಿಡದೇ ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಬರುವುದರಿಂದ ತಮ್ಮ ಬಳಿ ಎಷ್ಟೇ ಇದ್ದರೂ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಅಂತಹವರ ಬಳಿ ದೇವಿ ಲಕ್ಷ್ಮಿ ಇರಲು ಸಹಾ ಬಯಸುವುದಿಲ್ಲ. ಆ ವ್ಯಕ್ತಿಯು ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಅಹಂಕಾರ: ದೇವಿ ಲಕ್ಷ್ಮಿಯ ಅನುಗ್ರಹದಿಂದ ಹಣ, ಆಸ್ತಿ ಹಾಗೂ ಸಂಪತ್ತು ಲಭಿಸಿದರೆ ಅವುಗಳ ಸದ್ವಿನಿಯೋಗ ವನ್ನು ಮಾಡಿಕೊಳ್ಳಬೇಕು. ಅದರ ಬದಲಾಗಿ ಹಣ ಇದೆ ಎನ್ನುವ ಕಾರಣಕ್ಕೆ ಬೇರೆಯವರನ್ನು ಕೀಳಾಗಿ ಕಾಣುವ ಹಾಗೆ ಅಹಂಕಾರವನ್ನು ಮೆರೆಯಬಾರದು. ಹೀಗೆ ಅಹಂಕಾರ ಮೆರೆಯುವವರ ಬಳಿ ಹಣ ಹೆಚ್ಚು ದಿನ ನಿಲ್ಲುವುದಿಲ್ಲ. ಮುಂದೊಂದು ದಿನ ಹಣಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಅತಿಯಾಸೆ : ಅತಿಯಾಸೆ ಇರುವಂತಹ ವ್ಯಕ್ತಿಗಳು ಸದಾ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಣದ ಮೇಲಿನ ಅತಿಯಾದ ಆಸೆ, ವ್ಯಾಮೋಹ ಅವರನ್ನು ತಪ್ಪು ಮಾರ್ಗವನ್ನು ಹಿಡಿಯುವಂತೆ ಮಾಡುತ್ತದೆ. ಬೇರೆಯವರ ಸಂಪತ್ತಿನ ಮೇಲೆ ಕಣ್ಣನ್ನು ಹಾಕುತ್ತಾರೆ. ಇಂತಹ ವ್ಯಕ್ತಿಗಳು ಜೀವನದಲ್ಲಿ ಏಳಿಗೆಯನ್ನು ಸಾಧಿಸುವುದು ಕಷ್ಟವಾಗಿರುತ್ತದೆ. ಸನ್ಮಾರ್ಗದಲ್ಲಿ ನಡೆಯುವವರಿಗೆ ದೇವಿ ಲಕ್ಷ್ಮಿಯು ಒಂದಲ್ಲಾ ಒಂದು ಮಾರ್ಗದಲ್ಲಿ ತನ್ನ ಕೃಪಾಕಟಾಕ್ಷವನ್ನು ತೋರಿಸುವಳು.

ಸೋಮಾರಿತನ: ಇದು ಮನುಷ್ಯನ ಏಳಿಗೆಯ ಹಾದಿಯಲ್ಲಿ ದೊಡ್ಡ ಅಡ್ಡಗಾಲಾಗಿರುತ್ತದೆ. ಸೋಮಾರಿಯಾದವನು ಯಾವುದೇ ಕೆಲಸವನ್ನು ಮಾಡುವ ಕಡೆಗೆ ತನ್ನ ಆಸಕ್ತಿ ತೋರಿಸುವುದಿಲ್ಲ. ಅಲ್ಲದೇ ತನ್ನ ಬಳಿ ಇರುವಂತಹ ಹಣವನ್ನು ಕೂಡಾ ಖರ್ಚು ಮಾಡಿ ಅದನ್ನು ಕಳೆದುಕೊಳ್ಳುತ್ತಾನೆ. ದೇವಿ ಲಕ್ಷ್ಮಿಯು ಸೋಮಾರಿಗಳಿಗೆ ಎಂದೂ ತನ್ನ ಆಶೀರ್ವಾದವನ್ನು ನೀಡುವುದಿಲ್ಲ ಎಂದು ಹೇಳಲಾಗಿದೆ.

ಹಣದ ಮೇಲೆ ಅಗೌರವ : ಇರುವ ಹಣವನ್ನು ದುರುಪಯೋಗ ಮಾಡಬಾರದು, ಅದರ ಬದಲಾಗಿ ಸಮಸ್ಯೆಗಳು ಹಾಗೂ ಸಂಕಷ್ಟಗಳಲ್ಲಿ ಇರುವವರಿಗೆ ಕೈಲಾದ ನೆರವನ್ನು ನೀಡುವ ಮೂಲಕ ಹಣವನ್ನು ಸದುಪಯೋಗ ಮಾಡಿಕೊಳ್ಳಬೇಕು. ಯಾರು ಹಣವನ್ನು ಬೇಕಾಬಿಟ್ಟಿಯಾಗಿ, ಅದರ ಮೇಲೆ ಗೌರವ ಇಲ್ಲದೇ ನೀರಿನಂತೆ ಖರ್ಚು ಮಾಡುವರೋ ದೇವಿ ಲಕ್ಷ್ಮಿಯು ಅವರಿಂದ ದೂರವಾಗುವಳು.

Leave A Reply

Your email address will not be published.