ಚಾಣಾಕ್ಯ ನೀತಿ: ಈ ಲಕ್ಷಣಗಳುಳ್ಳ ವ್ಯಕ್ತಿ ಶತೃಗಳಿಂದಲೂ ಪ್ರಶಂಸೆ ಪಡೆಯುವುದು ಖಚಿತ

Entertainment Featured-Articles News
66 Views

ಆಚಾರ್ಯ ಚಾಣಾಕ್ಯನ ಮಾತುಗಳು, ಉಪದೇಶಗಳು ವ್ಯಕ್ತಿಯ ವ್ಯಕ್ತಿತ್ವವನ್ನು ವೃದ್ಧಿಪಡಿಸಲು ಹಾಗೂ ಅಭಿವೃದ್ಧಿಯನ್ನು ಸಾಧಿಸಲು ಪೂರಕವಾಗಿದೆ. ಆದ್ದರಿಂದಲೇ ಅನೇಕರು ಚಾಣಾಕ್ಯನು ತಿಳಿಸಿರುವಂತಹ ವಿಚಾರಗಳನ್ನು, ನೀತಿಗಳನ್ನು ತಮ್ಮ ಜೀವನದಲ್ಲಿ ಅನುಸರಿಸುತ್ತಾರೆ. ಆಚಾರ್ಯ ಚಾಣಾಕ್ಯನು ಒಬ್ಬ ವ್ಯಕ್ತಿಗೆ ಇರಬೇಕಾದ ವಿಶೇಷ ಗುಣಗಳ ಬಗ್ಗೆ ತಿಳಿಸಿದ್ದಾನೆ. ಹಾಗಾದರೆ ಚಾಣಾಕ್ಯನು ತನ್ನ ನೀತಿ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಒಬ್ಬ ವ್ಯಕ್ತಿಯಲ್ಲಿ ಇರಬೇಕಾದಂತಹ ವಿಶೇಷವಾದ ಲಕ್ಷಣಗಳು ಯಾವುವೆಂದು ತಿಳಿಯೋಣ ಬನ್ನಿ.

ಆಚಾರ್ಯ ಚಾಣಾಕ್ಯನು ಪ್ರತಿಕೂಲ ಪರಿಸ್ಥಿತಿ ಗಳು ಎನ್ನುವುದು ಮಾನವನ ಜೀವನದಲ್ಲಿ ಆತನಿಗೆ ತನ್ನ ಸ್ವಂತ ಶಕ್ತಿಗಳೇನು ಎನ್ನುವುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾನೆ. ಯಾರಿಗೂ ಭಯಪಡುವ ಅಗತ್ಯ ಇಲ್ಲ. ವ್ಯಕ್ತಿಯೊಬ್ಬನಲ್ಲಿ ಈ ವಿಶೇಷ ಗುಣಗಳು ಇದ್ದರೆ ಆತನನ್ನು ಎಲ್ಲರೂ ಮೆಚ್ಚುತ್ತಾರೆ, ಆತನ ವಿ ರೋ ಧಿ ಗಳು ಸಹಾ ಇಂತಹ ಗುಣಗಳಿಗೆ ಮಾರು ಹೋಗುತ್ತಾರೆ ಎನ್ನುವುದು ಆಚಾರ್ಯ ಚಾಣಾಕ್ಯನ ಮಾತಾಗಿದೆ.

ಆಚಾರ್ಯ ಚಾಣಾಕ್ಯನು ಜೀವನದಲ್ಲಿ ಸುಖ ಮತ್ತು ದುಃಖ ಎನ್ನುವುದು ಬಂದು ಹೋಗುತ್ತವೆ. ಸುಖದಲ್ಲೇ ಆಗಲೀ ಅಥವಾ ದುಃಖದಲ್ಲೇ ಆಗಲೀ ಯಾವ ವ್ಯಕ್ತಿಯು ತನ್ನ ಕರ್ತವ್ಯಗಳನ್ನು ನಿರ್ವಹಣೆ ಮಾಡುವನೋ, ತನ್ನ ಕರ್ತವ್ಯಗಳನ್ನು ಸಕ್ರಮವಾಗಿ ಜವಾಬ್ದಾರಿಯಿಂದ ನಡೆಸಿಕೊಂಡು ಹೋಗುವನೋ ಅಂತಹ ವ್ಯಕ್ತಿಯನ್ನು ಸಮಾಜದಲ್ಲಿ ಎಲ್ಲರೂ ಸಹಾ ಗೌರವಿಸುವರು ಹಾಗೂ ಅಂತಹವರು ಸಮಾಜದಲ್ಲಿ ಪ್ರತಿಷ್ಠೆಯನ್ನು ಪಡೆದ ವ್ಯಕ್ತಿಯಾಗಿ ಅನೇಕರಿಗೆ ಮಾದರಿಯಾಗುವರು.

ಜೀವನದಲ್ಲಿ ಎಷ್ಟೇ ಪ್ರತಿರೋಧಗಳು ಎದುರಾದರೂ ಕೂಡಾ ಅವೆಲ್ಲವುಗಳನ್ನು ಎದುರಿಸುತ್ತಾ ತನ್ನ ಗುರಿಯ ಕಡೆಗೆ ಸಾಗುವ ವ್ಯಕ್ತಿಯು ಇತಿಹಾಸದಲ್ಲಿ ಸ್ಥಾನವನ್ನು ಪಡೆದುಕೊಳ್ಳುವರು. ಅಂತಹ ವ್ಯಕ್ತಿಯು ಸಮಾಜದಲ್ಲಿ ಗೌರವವನ್ನು ಪಡೆಯುವುದು ಮಾತ್ರವೇ ಅಲ್ಲದೇ ಶತೃಗಳು ಸಹಾ ಅವರನ್ನು ಹೊಗಳುತ್ತಾರೆ. ಅಂತಹ ವ್ಯಕ್ತಿಗಳು ತಮಗಾಗಿ ಒಂದು ವಿಶೇಷ ಸ್ಥಾನವನ್ನು ಸಹಾ ಗಳಿಸಿಕೊಳ್ಳುವರು, ಬಹಳಷ್ಟು ಜನರಿಗೆ ಅವರು ಸ್ಪೂರ್ತಿಯಾಗುವರು.

ಜೀವನದಲ್ಲಿ ವಿಜಯವನ್ನು ಸಾಧಿಸಲು ಬಯಸುವ ವ್ಯಕ್ತಿಯು ಕಲಿಕೆಯನ್ನು ಎಂದಿಗೂ ನಿಲ್ಲಿಸುವುದಿಲ್ಲ. ಜ್ಞಾನವನ್ನು ಪಡೆದುಕೊಳ್ಳಲು ಅವರು ಸದಾ ಸಿದ್ಧರಾಗಿರುತ್ತಾರೆ. ಅಂತಹ ವ್ಯಕ್ತಿ ಇತರರಿಗೆ ಪ್ರೇರಣೆಯಾಗಿರುತ್ತಾರೆ. ಅಂತಹವರ ಮೇಲೆ ಸರಸ್ವತಿ ದೇವಿಯ ಅನುಗ್ರಹ ಮತ್ತು ಕೃಪೆ ಸದಾ ಇರುತ್ತದೆ ಎಂಬುದು ಚಾಣಾಕ್ಯನ ಮಾತಾಗಿದೆ.

Leave a Reply

Your email address will not be published. Required fields are marked *