ಚಮಚದಲ್ಲಿ ತಿನ್ನಿಸೋದು ಸಾಧ್ಯ ಇಲ್ಲ: ಜಡೇಜಾ ನಾಯಕತ್ವ ಬಿಟ್ಟ ಮೇಲೆ ಧೋನಿ ಮುಕ್ತ ಮಾತು!!

Written by Soma Shekar

Published on:

---Join Our Channel---

ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಜಯವನ್ನು ಪಡೆದುಕೊಂಡ ನಂತರ ಮಹೇಂದ್ರ ಸಿಂಗ್ ಧೋನಿ ಯವರು ರವೀಂದ್ರ ಜಡೇಜಾ ತಂಡದ ಕ್ಯಾಪ್ಟನ್ ಶಿಪ್ ತೊರೆದ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರು ಮಾತನಾಡುತ್ತಾ ಜಡ್ಡು ಗೆ ನಾನು ಮಾತಿನಲ್ಲಿ ಹೇಳಬಲ್ಲೇ, ಆದರೆ ಚಮಚವನ್ನು ಹಿಡಿದುಕೊಂಡು ತಿನ್ನಿಸಲಾಗದು ಎನ್ನುವ ಮಾತನ್ನು ಹೇಳಿದ್ದಾರೆ. ಅವರಿಗೆ ತಮ್ಮ ನಿರ್ಣಯದ ಬಗ್ಗೆ ಸ್ವಂತ ಜವಾಬ್ದಾರಿ ಇರಬೇಕಿತ್ತು ಎಂದಿದ್ದಾರೆ.

ನಾಯಕತ್ವದ ಜೊತೆಗೆ ಅವರ ವೈಯಕ್ತಿಕ ಪ್ರದರ್ಶನವು ಕೂಡ ಪ್ರಭಾವ ಬೀರತೊಡಗಿತು ಹಾಗೂ ಅದನ್ನು ನೋಡುವುದಕ್ಕೆ ಯಾವ ಅಭಿಮಾನಿಯೂ ಬಯಸುವುದಿಲ್ಲ ಎಂದಿದ್ದಾರೆ ಧೋನಿ. ಪಂದ್ಯ ಮುಗಿದ ನಂತರ ಮಾಧ್ಯಮವೊಂದರ ಜೊತೆ ಮಾತನಾಡಿದ ಧೋನಿ ಅವರು ಕಳೆದ ಸೀರಿಸ್ ನಲ್ಲೇ ರವೀಂದ್ರ ಜಡೇಜಾ ಅವರಿಗೆ ಈ ಸೀಸನ್ ನಲ್ಲಿ ಕ್ಯಾಪ್ಟನ್ ಶಿಪ್ ನೀಡಲಾಗುವುದು ಎನ್ನುವ ವಿಚಾರ ತಿಳಿದಿತ್ತು ಎಂದು ಹೇಳಿದ್ದಾರೆ.

ನಾಯಕತ್ವದ ಭೂಮಿಕೆಯನ್ನು ನಿಭಾಯಿಸಲು ಸೂಕ್ತ ತಯಾರಿಯನ್ನು ನಡೆಸಲು ಅವರಿಗೆ ಸಮಯವನ್ನು ನೀಡಲಾಯಿತು. ಪ್ರಮುಖ ವಿಚಾರ ಏನೆಂದರೆ ತಂಡವನ್ನು ಮುನ್ನಡೆಸಲು ಜಡೇಜಾ ಅವರಿಗೆ ಅವಕಾಶವನ್ನು ನೀಡಲಾಯಿತು. ತಂಡದಲ್ಲಿ ಇಂತಹದೊಂದು ಬದಲಾವಣೆಯನ್ನು ನಾನು ಬಯಸಿದ್ದೆ. ಮೊದಲ ಎರಡು ಪಂದ್ಯಗಳ ವೇಳೆಯಲ್ಲಿ ನಾನು ಅವರಿಗೆ ಸಹಾಯವನ್ನು ಮಾಡಿದೆ, ನಂತರ ನಾಯಕತ್ವದ ಸಂಪೂರ್ಣ ಜವಾಬ್ದಾರಿಯನ್ನು ಅವರ ಮೇಲೆ ಬಿಟ್ಟಿದ್ದೆ.

ಈ ವೇಳೆಯಲ್ಲಿ ಯಾವ ಬೌಲರನ್ನು ಬಳಸಿಕೊಳ್ಳಬೇಕು, ಯಾವ ರೀತಿ ಫೀಲ್ಡಿಂಗ್ ಮಾಡಿಸಬೇಕು ಎನ್ನುವುದು ಅವರ ಜವಾಬ್ದಾರಿಯಾಗಿತ್ತು. ಈ ಸೀಸನ್ ನ ಪೂರ್ತಿ ಟೂರ್ನಮೆಂಟ್ ನಲ್ಲಿ ಯಾರು ಕ್ಯಾಪ್ಟನ್ ಶಿಪ್ ಮಾಡಿದ್ದರೆ ಎನ್ನುವ ಅನುಭೂತಿಯನ್ನು ಜಡೇಜಾಗೆ ನೀಡಲು ನಾನು ಬಯಸಿರಲಿಲ್ಲ. ಅವರು ಕೇವಲ ಟಾಸ್ಕ್ ಆಗೆ ಮಾತ್ರವೇ ಹೋಗುತ್ತಿದ್ದರು. ನಾನು ಚಮಚದಲ್ಲಿ ತಿನ್ನಿಸುವ ಮೂಲಕ ಕ್ಯಾಪ್ಟನ್ ಗೆ ಸಹಾಯ ಮಾಡುವುದು ಸಾಧ್ಯವಿಲ್ಲ.

ಪ್ರಮುಖ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳಬೇಕು ಹಾಗೂ ಅವರ ನಿರ್ಧಾರದ ಹೊಣೆಗಾರಿಕೆಯನ್ನು ಸಹ ಅವರೇ ಹೊರಬೇಕು. ಕ್ಯಾಪ್ಟನ್ ಆದ ನಂತರ ಹಲವು ಕೆಲಸಗಳನ್ನು ನೋಡಿಕೊಳ್ಳಬೇಕು ಎನ್ನುವ ಮಾತನ್ನು ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರ ಮಾತುಗಳನ್ನು ಕೇಳಿ ಅವರ ಅಭಿಮಾನಿಗಳು ಸಹಾ ಧೋನಿ ಹೇಳಿರುವ ಮಾತು ಸರಿಯಾಗಿಯೇ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Leave a Comment