ಚಕ್ರವರ್ತಿ ಚಂದ್ರಚೂಡ್ ನಾಯಕನಾಗಿರುವ ಸಿನಿಮಾಕ್ಕೆ ಕಿಚ್ಚ ಸುದೀಪ್ ಸಾಥ್: ಬಿಗ್ ಬಾಸ್ ನಂತರ ಬ್ಯುಸಿಯಾದ ಚಂದ್ರಚೂಡ್

Written by Soma Shekar

Published on:

---Join Our Channel---

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸೀಸನ್ ಎಂಟರಲ್ಲಿ ಪ್ರವೇಶ ಪಡೆದ ಚಕ್ರವರ್ತಿ ಚಂದ್ರ ಚೂಡ್ ಅವರು ದೊಡ್ಡ ಮನೆಯೊಳಗೆ ಆಡಿದ ಮಾತುಗಳು, ಮಾಡಿಕೊಂಡ ಗ ಲಾಟೆಗಳು, ಗದ್ದಲಗಳು ಸಾಕಷ್ಟು ದೊಡ್ಡ ಸದ್ದು-ಸುದ್ದಿ ಮಾಡಿದ್ದವು. ಬಿಗ್ ಬಾಸ್ ನಿಂದ ಹೊರಗಡೆ ಬಂದ ಮೇಲೂ ಸಹ ಚಕ್ರವರ್ತಿ ಚಂದ್ರಚೂಡ್ ಅವರು ಒಂದಲ್ಲಾ ಒಂದು ವಿಷಯವಾಗಿ ಮಾಧ್ಯಮಗಳ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಇನ್ನು ಬಿಗ್ ಬಾಸ್ ನಿಂದ ಅವರು ಬಂದ ಮೇಲೆ, ಅವರನ್ನು ಅರಸಿಕೊಂಡು ಸಾಲು ಸಾಲು ಅವಕಾಶಗಳು ಬರುತ್ತಿವೆ. ಅಂತಹದೇ ಒಂದು ಅವಕಾಶದಲ್ಲಿ ಇದೀಗ ಚಕ್ರವರ್ತಿ ಚಂದ್ರಚೂಡ್ ಅವರು ಸಿನಿಮಾವೊಂದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಈ ಹೊಸ ಸಿನಿಮಾಕ್ಕೆ ನಟ ಕಿಚ್ಚ ಸುದೀಪ್ ಅವರು ಶುಭವನ್ನು ಹಾರೈಸಿದ್ದಾರೆ.

ಚಕ್ರವರ್ತಿ ಚಂದ್ರಚೂಡ್ ‘ಮಧ್ಯಂತರ’ ಎನ್ನುವ ಶೀರ್ಷಿಕೆಯ ಸಿನಿಮಾದಲ್ಲಿ ನಾಯಕನಟನಾಗಿ ಮಿಂಚಲು ಸಜ್ಜಾಗುತ್ತಿದ್ದಾರೆ. ಈ ಸಿನಿಮಾದ ಪೋಸ್ಟರನ್ನು ನೆನ್ನೆಯಷ್ಟೇ ಸ್ಯಾಂಡಲ್ ವುಡ್ ನ ಸ್ಟಾರ್ ನಟನಾದ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ಬಿಡುಗಡೆ ಮಾಡಿದ ವೇಳೆಯಲ್ಲಿ ನಟ ಸುದೀಪ್ ಅವರು, “ಚಕ್ರವರ್ತಿ ಚಂದ್ರಚೂಡ್ ಬಹಳ ಸ್ವತಂತ್ರವಾಗಿ ಮಾತನಾಡುತ್ತಾರೆ. ಅವರಲ್ಲಿನ ಪ್ರತಿಭೆಯನ್ನು ಯಾರಾದರೂ ಚೆನ್ನಾಗಿ ಬಳಸಿಕೊಳ್ಳಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಈಗ ಅದರಂತೆಯೇ ಅವರು ಬಿಗ್ ಬಾಸ್ ನಿಂದ ಬಂದ ಮೇಲೆ ಅವರಿಗೆ ಅವಕಾಶಗಳು ಸಿಗುತ್ತಿವೆ. ಅವರಿಗೆ ಒಳ್ಳೆಯದಾಗಲಿ, ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದ್ದಾರೆ.

ಮಧ್ಯಂತರ ಸಿನಿಮಾವೊಂದು ಕ್ರೈಂ ಥ್ರಿಲ್ಲರ್ ಆಗಿದ್ದು, ಈ ಸಿನಿಮಾವನ್ನು ನಿರ್ದೇಶಕ ವಸಿಷ್ಟ ನಿರ್ದೇಶನ ಮಾಡುತ್ತಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಮೇಲೆ ಈ ಸಿನಿಮಾದ ಕಥೆ ಆಧಾರಿತವಾಗಿದೆ ಎನ್ನಲಾಗಿದೆ. ಈ ಸಿನಿಮಾದ ಪೋಸ್ಟರ್ ಬಿಡುಗಡೆ ವೇಳೆಯಲ್ಲೇ ಚಕ್ರವರ್ತಿ ಚಂದ್ರಚೂಡ್ ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾ ಭೀಮಿ ಸಿನಿಮಾದ ಪೋಸ್ಟರನ್ನು ಸಹ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ. ಬಿಹಾರದ ಕೆಲವು ಹಳ್ಳಿಗಳಲ್ಲಿ ಗಂಡಸರಿಗೆ ಪ್ರವೇಶ ಇಲ್ಲ ಎನ್ನಲಾಗಿದ್ದು, ಮಹಿಳೆಯರು ಮಾತ್ರ ಇರುವಂತಹ ಅಂತಹ ಗ್ರಾಮ ಕರ್ನಾಟಕದಲ್ಲೂ ಇದ್ದರೆ ಹೇಗಿರುತ್ತದೆ ಎನ್ನುವುದನ್ನು ಆಲೋಚಿಸಿ ಈ ಕಥೆಯನ್ನು ಬರೆದಿರುವುದಾಗಿ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.

Leave a Comment