ಚಂದು ಅಣ್ಣನ ಹವಾ!! ಅರ್ಜುನ್ ಜನ್ಯಾರನ್ನೇ ಹಿಂದಿಕ್ಕಿದ ಕಾಫಿ ನಾಡು ಚಂದು: ಹೆಚ್ಚಾಗ್ತಿದೆ ಫ್ಯಾನ್ ಫಾಲೋಯಿಂಗ್

Entertainment Featured-Articles Movies News

ಸಾಮಾಜಿಕ ಜಾಲತಾಣಗಳು ಇಂದು ಪ್ರಬಲ ಮಾದ್ಯಮಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಯಾರು, ಯಾವಾಗ ಸ್ಟಾರ್ ಗಳಾಗಿ ಬಿಡುತ್ತಾರೆ ಎನ್ನುವುದನ್ನು ನಾವು ಊಹೆ ಸಹಾ ಮಾಡುವುದಕ್ಕೆ ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಕೆಲವರು ಸ್ಟಾರ್ ಗಳಾದರೆ ಇನ್ನೂ ಕೆಲವರು ತಮ್ಮ ಜೀವನವನ್ನು ಸಹಾ ಹಾಳು ಮಾಡಿಕೊಂಡಿರುವ ಉದಾಹರಣೆಗಳು ಇಲ್ಲಿವೆ. ಆದರೆ ಕೆಲವರ ಅದೃಷ್ಟ ಹೇಗಿರುತ್ತದೆ ಎಂದರೆ ಇವರು ಸೋಶಿಯಲ್ ಮೀಡಿಯಾಗಳಲ್ಲಿ ಗಳಿಸುವ ಖ್ಯಾತಿಯನ್ನು ನಟ ನಟಿಹರು ಸಹಾ ಪಡೆದಿರುವುದಿಲ್ಲ ಎಂದರೆ ಅತಿಶಯೋಕ್ತಿ ಖಂಡಿತ ಅಲ್ಲ.

ಹೀಗೆ ಸೋಶಿಯಲ್ ಮೀಡಿಯಾ ಮೂಲಕವೇ ಸ್ಟಾರ್ ಆಗಿರುವವರು ಕಾಫಿ ನಾಡು ಚಂದು. ಪ್ರಸ್ತುತ ಇವರ ಬಗ್ಗೆ ಎಲ್ಲೆಲ್ಲೂ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಕಾಫಿನಾಡು ಚಂದು ಅವರ ಬಗ್ಗೆ ಖಂಡಿತ ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ ಎನ್ನುವಷ್ಟು ಅವರು ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಈಗ ಹೊಸ ಸುದ್ದಿ ಏನೆಂದರೆ ಕಾಫಿ ನಾಡು ಚಂದು ಅವರು ಸ್ಯಾಂಡಲ್ವುಡ್ ನ‌ ಸಂಗೀತ ಜಾದೂಗಾರ ಎನಿಸಿಕೊಂಡಿರುವ ಅರ್ಜುನ್ ಜನ್ಯಾ ಅವರನ್ನು ಹಿಂದಿಕ್ಕಿರುವುದು. ವಿಷಯ ಕೇಳಿ ಶಾ ಕ್ ಆಯ್ತಾ?? ಬನ್ನಿ ಏನೀ ವಿಷಯ ತಿಳಿಯೋಣ.

ಹೌದು , ಸೋಶಿಯಲ್ ಮೀಡಿಯಾಗಳ ಮೀಮ್ಸ್ ಪೇಜ್ ಗಳಲ್ಲಿ, ಟ್ರೋಲ್ ಪೇಜ್ ಗಳಲ್ಲಿ ಸದ್ಯಕ್ಕಂತೂ ಕಾಫಿನಾಡು ಚಂದು ಅವರದ್ದೇ ಹವಾ. ಎಲ್ಲೆಲ್ಲೂ ಅವರ ಫೋಟೋಗಳು ಮತ್ತು ವೀಡಿಯೋಗಳು ಹರಿದಾಡುತ್ತಿದೆ. ಕಾಫಿನಾಡು ಚಂದು ಇನ್ಸ್ಟಾಗ್ರಾಂ ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಲ್ಲಿ ಸಹಾ ತಮ್ಮ ಹವಾ ಮೂಡಿಸಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಇವರನ್ನು ಫಾಲೋ ಮಾಡುವವರ ಸಂಖ್ಯೆ ಬರೋಬ್ಬರಿ 224 ಸಾವಿರ ಇದೆ. ಇದು ಖಂಡಿತ ಕಡಿಮೆ ಅಲ್ಲ, ಸೆಲೆಬ್ರಿಟಿಗಳ ಹಾಗೆ ಕಾಫಿ ನಾಡ ಚಂದು ಫಾಲೋಯರ್ಸ್ ಗಳನ್ನು ಪಡೆದಿದ್ದಾರೆ.

ಕಾಫಿ ನಾಡು ಚಂದು ಅವರು ಇನ್ಸ್ಟಾಗ್ರಾಂ ನಲ್ಲಿ ಹೊಂದಿರುವ ಫಾಲೋಯರ್ಸ್ ವಿಚಾರದಲ್ಲಿ ಸ್ಯಾಂಡಲ್ವುಡ್ ನ ಜನಪ್ರಿಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರನ್ನು ಸಹಾ ಮೀರಿಸಿದ್ದಾರೆ. ಅರ್ಜುನ್ ಜನ್ಯಾ ಅವರಿಗೆ ಇನ್ಸ್ಟಾಗ್ರಾಂ ನಲ್ಲಿ 194 ಸಾವಿರ ಫಾಲೋಯರ್ಸ್ ಇದ್ದಾರೆ. ಹೀಗೆ ಕಾಫಿ ನಾಡು ಚಂದು ಅರ್ಜುನ್ ಜನ್ಯಾ ಅವರನ್ನು ಹಿಂದಿಕ್ಕಿದ್ದಾರೆ. ಕಾಫಿ ನಾಡು ಚಂದು ಆಟೋ ಡ್ರೈವರ್ ಆಗಿದ್ದು, ಇವರ ಊರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆಯವರು. ಹಾಡುಗಳಿಂದಲೇ ಫೇಮಸ್ ಆಗಿರುವ ಇವರ ಹಾಡುಗಾರಿಕೆಯಲ್ಲಿ ಯಾವುದೇ ರಾಗ ತಾಳಗಳು ಇರುವುದಿಲ್ಲವಾದರೂ ಅವರ ವಿಭಿನ್ನ ಶೈಲಿಯನ್ನು ಜನ ಮೆಚ್ಚಿದ್ದಾರೆ.

Leave a Reply

Your email address will not be published.