ಗ್ರಹಗಳ ರಾಶಿ ಬದಲಾವಣೆ: ಆಗಸ್ಟ್‌ನಲ್ಲಿ ಈ 3 ರಾಶಿಗಳವರ ಜೀವನದಲ್ಲಿ ಆಗಲಿದೆ ದೊಡ್ಡ ಬದಲಾವಣೆ

Astrology tips Entertainment Featured-Articles News

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ಗ್ರಹಗಳು ಪ್ರತಿ ತಿಂಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಅವುಗಳ ಈ ರಾಶಿಚಕ್ರದ ಬದಲಾವಣೆಯಿಂದಾಗಿ ಅದು ಉಳಿದೆಲ್ಲಾ 12 ರಾಶಿ ಚಕ್ರ ಚಿಹ್ನೆಗಳ ಮೇಲೆ ಉತ್ತಮ ಮತ್ತು ಅ ಶು ಭ ಪರಿಣಾಮಗಳನ್ನು ಹೊಂದಿವೆ. ಆಗಸ್ಟ್ 2022 ರಲ್ಲಿ, 3 ದೊಡ್ಡ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಈ ಗ್ರಹಗಳ ರಾಶಿಚಕ್ರದ ಬದಲಾವಣೆಯ ಪರಿಣಾಮವು ವಿಶೇಷವಾಗಿ 3 ರಾಶಿಚಕ್ರದವರ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಆಗಸ್ಟ್ ತಿಂಗಳಲ್ಲಿ ಯಾವ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಿವೆ ಹಾಗೂ ಯಾವ ರಾಶಿಗಳ ಮೇಲೆ ಅವುಗಳ ಪ್ರಭಾವ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ.

ಆಗಸ್ಟ್ ನಲ್ಲಿ ಮೂರು ಗ್ರಹಗಳು ರಾಶಿಚಕ್ರ ಬದಲಾವಣೆ : ಆಗಸ್ಟ್ ತಿಂಗಳ ಮೊದಲ ರಾಶಿಚಕ್ರ ಬದಲಾವಣೆಯು ಬುಧ ಗ್ರಹದ್ದಾಗಿದೆ. ಅದು 9 ಆಗಸ್ಟ್ 2022 ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಅದರ ನಂತರ ಆಗಸ್ಟ್ 11 ರಂದು ಶುಕ್ರ ಗ್ರಹವು ಕನ್ಯಾರಾಶಿಗೆ ಪ್ರವೇಶಿಸುತ್ತದೆ. ಆಗಸ್ಟ್ 11 ರಂದು ರಕ್ಷಾಬಂಧನ ಹಬ್ಬವನ್ನು ಸಹ ಆಚರಿಸಲಾಗುತ್ತದೆ. ಆಗಸ್ಟ್ 17 ರಂದು ಸೂರ್ಯ ದೇವನ ಮೂರನೇ ರಾಶಿಚಕ್ರ ಬದಲಾವಣೆಯಾಗಲಿದೆ. ಅದು ಆಗಸ್ಟ್ 17 ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಈ ಅವಧಿಯಲ್ಲಿ ಈ 3 ಗ್ರಹಗಳ ರಾಶಿ ಬದಲಾವಣೆಯ ಪರಿಣಾಮ ಯಾವ ರಾಶಿಯವರ ಜೀವನದ ಮೇಲೆ ಆಗಲಿದೆ ಎಂದು ತಿಳಿಯೋಣ.

ಮಿಥುನ ರಾಶಿ ಭವಿಷ್ಯ: ಆಗಸ್ಟ್‌ನಲ್ಲಿ ಗ್ರಹದ ಸಂಕ್ರಮಣದ ಪರಿಣಾಮವು ಮಿಥುನ ರಾಶಿಯವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅವರು ಇದ್ದಕ್ಕಿದ್ದಂತೆ ಹಣ ಗಳಿಸುತ್ತಾರೆ. ಶತ್ರುಗಳನ್ನು ಸೋಲಿಸುವರು. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಕೆಲಸದ ಸ್ಥಳದಲ್ಲಿ ಯಾವ ಸಮಸ್ಯೆ ಬಾಧಿಸುವುದಿಲ್ಲ ಹಾಗೂ ಕುಟುಂಬದವರೊಂದಿಗೆ ಹೊಂದಾಣಿಕೆ ಉತ್ತಮವಾಗಿರುತ್ತದೆ.

ತುಲಾ ರಾಶಿ ಭವಿಷ್ಯ: ಆಗಸ್ಟ್ ತಿಂಗಳಿನಲ್ಲಿ ಗ್ರಹದ ಸಂಕ್ರಮಣದಿಂದಾಗಿ ಈ ರಾಶಿಯವರಿಗೆ ಜೀವನದಲ್ಲಿ ಏಳಿಗೆಯಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಉದ್ಯೋಗಕ್ಕೆ ಸಂಬಂಧಿಸಿದ ಜನರಿಗೆ ತಮ್ಮ ಉದ್ಯೋಗದ ವಿಚಾರದಲ್ಲಿ ಉನ್ನತ ಅಧಿಕಾರಿಗಳಿಂದ ಪ್ರಶಂಸಿಸಲ್ಪಡುತ್ತಾರೆ. ತುಲಾ ರಾಶಿಯವರಿಗೆ ಈ ಗ್ರಹ ಸಂಕ್ರಮಣವು ಉತ್ತಮ ಫಲವನ್ನು ನೀಡಲಿದೆ ಎಂದು ಜ್ಯೋತಿಷ್ಯ ಹೇಳುತ್ತಿದೆ.

ಸಿಂಹ ರಾಶಿ : ಆಗಸ್ಟ್ ತಿಂಗಳಲ್ಲಿ ಸಿಂಹ ರಾಶಿಯವರಲ್ಲಿ ಉತ್ಸಾಹ ಹೆಚ್ಚಾಗಲಿದೆ. ಅವರ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಈ ಸಂಚಾರವು ಸಿಂಹ ರಾಶಿಯವರಿಗೆ ಆತ್ಮತೃಪ್ತಿಯನ್ನು ನೀಡುತ್ತದೆ. ಅವರ ಅದೃಷ್ಟ ಸಹಾ ಹೆಚ್ಚಾಗುತ್ತದೆ.

Leave a Reply

Your email address will not be published.