ಗೌರಿ ಹಬ್ಬಕ್ಕೆ ಸಾಕ್ಷಾತ್ತು ದೇವಿ ರೂಪದಲ್ಲಿ ಬಂದ ಟಿಕ್ ಟಾಕ್ ಬೆಡಗಿ, ಬಿಗ್ ಬಾಸ್ ಖ್ಯಾತಿಯ ಸುಂದರಿ ಧನುಶ್ರೀ

Written by Soma Shekar

Published on:

---Join Our Channel---

ಕನ್ನಡ ಬಿಗ್ ಬಾಸ್ ಸೀಸನ್ 8 ರಲ್ಲಿ ಒಂದು ವಿಶೇಷತೆ ಖಂಡಿತ ಇತ್ತು, ಅದೇನೆಂದರೆ ಈ ಬಾರಿ ಸಿನಿಮಾ, ಕಿರುತೆರೆ, ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಮಾತ್ರವಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿ ಸೆಲೆಬ್ರಿಟಿಗಳಂತೆ ಮಿಂಚಿದ್ದ ಜನಪ್ರಿಯ ಸೋಶಿಯಲ್ ಮೀಡಿಯಾ ಫೇಸ್ ಗಳನ್ನು ಬಿಗ್ ಬಾಸ್ ಮನೆಗೆ ಸ್ಪರ್ಧಿಗಳನ್ನಾಗಿ ಎಂಟ್ರಿ ನೀಡಲಾಗಿತ್ತು. ಆ ಕ್ಯಾಟಗರಿಯಲ್ಲಿ ಮನೆಯೊಳಗೆ ಬಂದವರು ಟಿಕ್ ಟಾಕ್ ಮೂಲಕ ಸಖತ್ ಸದ್ದು ಮಾಡಿ, ಜನಪ್ರಿಯತೆ ತನ್ನದಾಗಿಸಿಕೊಂಡಿದ್ದ ಧನುಶ್ರೀ ಅವರು. ಟಿಕ್ ಟಾಕ್ ಬೆಡಗಿಗೆ ಬಿಗ್ ಬಾಸ್ ವೇದಿಕೆ ಇನ್ನಷ್ಟು ಹೆಸರನ್ನು ತಂದು ಕೊಟ್ಟಿತು.

ಹಾಸನ ಜಿಲ್ಲೆಯ ಹಳೇಬೀಡಿನವರಾದ ಧನುಶ್ರೀ ಅವರ ಜರ್ನಿ ಬಿಗ್ ಬಾಸ್ ವರೆಗೆ ಆಗಿದ್ದು ಸುಲಭದ ಹಾದಿಯಾಗಿರಲಿಲ್ಲ. ಶಿಕ್ಷಣದ ನಂತರ ಟಿಕ್ ಟಾಕ್ ವೀಡಿಯೋ ಮಾಡುತ್ತಾ ಒಂದಷ್ಟು ಜನಪ್ರಿಯತೆ ಪಡೆದುಕೊಂಡ ಅವರಿಗೆ ಅನಂತರದ ದಿನಗಳಲ್ಲಿ ಹಿಂಬಾಲಕರ ಸಂಖ್ಯೆ ಬೆಳೆಯುತ್ತಾ ಹೋಯಿತು. ಹಾಗೆ ಟಿಕ್ ಟಾಕ್ ಮೂಲಕ ಧನುಶ್ರೀ ಬಹಳ ಹೆಸರನ್ನು ಮಾಡಿದರು‌. ಅದರ ಮೂಲಕ ಬಿಗ್ ಬಾಸ್ ಗೆ ಅವರ ಹಾದಿ ತೆರೆದು ಕೊಂಡಿತು.

ಧನುಶ್ರೀ ಅವರ ಬಿಗ್ ಬಾಸ್ ಜರ್ನಿ ಒಂದೇ ವಾರದಲ್ಲಿ ಮುಗಿದರೂ ಸಹಾ, ಅವರಿಗೆ ಜನಪ್ರಿಯತೆ ದೊರೆತಿದ್ದು ಮಾತ್ರ ವಾಸ್ತವ‌. ಪ್ರಸ್ತುತ ಧನುಶ್ರೀ ಅವರು ಸಿನಿಮಾಗಳಲ್ಲಿ ಕೂಡಾ ನಟಿಸುತ್ತಿದ್ದಾರೆ. ಇನ್ನು ಆಗಾಗ ಫೋಟೋ ಶೂಟ್ ಗಳ ಅಂದವಾದ ಫೋಟೋ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಅವರಿಗೆ ಮೆಚ್ಚುಗೆಗಳು ಹರಿದು ಬರುತ್ತದೆ.

ಕೆಲವು ದಿನಗಳ ಹಿಂದೆಯಷ್ಟೇ ಧನುಶ್ರೀ ಹೊಸ ಕಾರನ್ನು ಕೊಂಡು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಆ ಫೋಟೋಗಳು ವೈರಲ್ ಆಗಿ ಅಭಿಮಾನಿಗಳಿಂದ ಮೆಚ್ಚುಗೆ ಗಳು ಹರಿದು ಬಂದಿದ್ದವು. ಈಗ ಅವುಗಳ ಬೆನ್ನಲ್ಲೇ ಗೌರಿ ಹಬ್ಬಕ್ಕೆ ಧನುಶ್ರೀ ಅವರು ಮತ್ತೊಂದು ವಿಶೇಷ ಫೋಟೋ ಶೂಟ್ ಮಾಡಿಸಿ, ಆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು ಅವು ವೈರಲ್ ಆಗುತ್ತಿವೆ.

ಹೌದು ಗೌರಿ ಹಬ್ಬದ ಹಿನ್ನೆಲೆಯಲ್ಲಿ ಧನುಶ್ರೀ ಅವರು ಆದಿಶಕ್ತಿ ಅಮ್ಮನವರ ರೂಪದಲ್ಲಿ ಅಲಂಕರಿಸಿಕೊಂಡು ಫೋಟೋ ಶೂಟ್ ಮಾಡಿಸಿದ್ದು, ಅವರ ಈ ಹೊಸ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಅಪಾರವಾದ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ದೇವಿ ರೂಪದಲ್ಲಿ ಧನುಶ್ರೀ ಬಹಳ ವಿಶೇಷವಾಗಿ ಕಾಣುತ್ತಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಧನುಶ್ರೀ ಅವರು ಗುಡಿಯಲ್ಲಿ ಇರುವ ಅಮ್ಮನವರ ಮೂರ್ತಿಯ ಹಾಗೆ ಅಲಂಕಾರವನ್ನು ಮಾಡಿಕೊಂಡು ಕುಳಿತಿದ್ದು, ದೇವಿಯ ಮುಂದೆ ದೇಗುಲದಲ್ಲಿ ಇರಿಸುವಂತೆ ಫಲ, ಪುಷ್ಪಗಳನ್ನು ಇರಿಸಲಾಗಿದೆ. ಈಗಾಗಲೇ ಅವರ ಫೋಟೋಗಳಿಗೆ ಐವತ್ತು ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬಂದಿವೆ. ಗುಡಿಯಲ್ಲಿರುವ ದೇವಿಯ ಹಾಗೆ ಕಂಡಿರುವ ಧನುಶ್ರೀ ಅವರ ಈ ಫೋಟೋಗಳು ಹೇಗಿವೆ, ತಿಳಿಸಿ.

Leave a Comment