ಈ ನಿರ್ಣಯ ಎಲ್ಲಾ ಗೋ ಪ್ರೇಮಿಗಳಲ್ಲಿ ಪ್ರತಿಧ್ವನಿಸಲಿದೆ: ಗೋವುಗಳಿಗಾಗಿ ದನಿ ಎತ್ತಿದ ಬಾಬಾ ರಾಮ್‌ದೇವ್
ಭಾರತದಲ್ಲಿ ಮಾತ್ರವೇ ಅಲ್ಲದೇ ಹಿಂದೂ ಧರ್ಮದ ಅನೇಕ ಸಂಪ್ರದಾಯಗಳಲ್ಲಿ ಗೋವು ಅಥವಾ ಗೋಮಾತೆಗೆ ನೀಡಿರುವ ಪ್ರಾಧಾನ್ಯತೆ ಹಾಗೂ ಪವಿತ್ರ ಸ್ಥಾನದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. ಏಕೆಂದರೆ ಗೋವನ್ನು ಕಾಮಧೇನು ಎಂದೇ ತಿಳಿದು ದೇಶದ ನಾನಾ ಭಾಗಗಳಲ್ಲಿ ಗೋವನ್ನು ಆರಾಧನೆ ಮಾಡಲಾಗುತ್ತದೆ. ಇಂತಹ ಗೋ ಮಾತೆಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆ ಮಾಡಬೇಕು ಎನ್ನುವುದು ಅನೇಕರ ಅಭಿಪ್ರಾಯ ಕೂಡಾ ಆಗಿದೆ. ಈಗ ಇದೇ ಮಾತನ್ನು ಯೋಗ ಗುರು ಬಾಬಾ ರಾಮ್ ದೇವ್ ಅವರು ಹೇಳಿದ್ದಾರೆ.
ಟಿಟಿಡಿ ವತಿಯಿಂದ ತಿರುಪತಿಯಲ್ಲಿ ಏರ್ಪಡಿಸಲಾಗಿದ್ದ ಗೋ ಮಹಾ ಸಮ್ಮೇಳನದಲ್ಲಿ ಭಾಗವಹಿಸಿದ್ದ ಯೋಗ ಗುರು ಬಾಬಾ ರಾಮ್ ದೇವ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಗೋವನ್ನು ರಾಷ್ಟ್ರೀಯ ಪ್ರಾಣಿ ಯನ್ನಾಗಿ ಘೋಷಣೆ ಮಾಡುವ ಮಸೂದೆಯನ್ನು ಜಾರಿಗೆ ತರಲು ಎಂದು ಎನ್ನುವ ಮಾತನ್ನು ಹೇಳಿದ್ದಾರೆ. ಈ ವಿಚಾರವಾಗಿ ಟಿಟಿಡಿ ಬೋರ್ಡ್ ಪ್ರಸ್ತಾಪವೊಂದನ್ನು ಹೊರಡಿಸಿದೆ ಎನ್ನುವ ವಿಚಾರವನ್ನು ಸಹಾ ಈ ವೇಳೆ ಅವರು ಹೇಳಿದ್ದಾರೆ.
ಪತಂಜಲಿ ಯೋಗ ಪೀಠವು ಈಗಾಗಲೇ ಗೋ ಸಂರಕ್ಷಣಾ ಅಭಿಯಾನವನ್ನು ಆರಂಭಿಸಿದೆ. ಗೋವು ಮಹಾ ಸಮ್ಮೇಳನದಲ್ಲಿನ ನಿರ್ಣಯಗಳು ಎಲ್ಲಾ ಗೋ ಪ್ರೇಮಿಗಳಲ್ಲಿ ಪ್ರತಿಧ್ವನಿಸಲಿದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ. ಗೋ ಮಹಾ ಸಮ್ಮೇಳನದ ಕುರಿತು ಟಿಟಿಡಿ ಹಾಗೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ತನಗೆ ಮಾಹಿತಿ ನೀಡಿದ್ದರು ಎಂದಿರುವ. ಬಾಬಾ ರಾಮ್ ದೇವ್ ಟಿಟಿಡಿ ಧಾರ್ಮಿಕ ಪ್ರಚಾರಕ್ಕಾಗಿ ಮಾಡಿರುವ ಇತರೆ ಕಾರ್ಯಗಳನ್ನು ಸಹಾ ಈ ವೇಳಿ ಶ್ಲಾಘನೀಯ ಎಂದಿದ್ದಾರೆ.