ಗೋವಾ ಪ್ರವಾಸಕ್ಕೆ ತೆರಳಿದ್ದ ನಟ ದಿಗಂತ್ ಅವರಿಗೆ ಅಪಘಾತ: ಬೆಂಗಳೂರಿಗೆ ಏರ್ ಲಿಫ್ಟ್ !!

Entertainment Featured-Articles Movies News

ಕನ್ನಡ ಸಿನಿಮಾ ರಂಗದ ಸ್ಟಾರ್ ಜೋಡಿ ದೂದ್ ಪೇಡಾ ಖ್ಯಾತಿಯ ದಿಗಂತ್ ಮತ್ತು ನಟಿ ಐಂದ್ರಿತಾ ರೇ ದಂಪತಿ ಕೆಲವೇ ದಿನಗಳ ಹಿಂದೆಯಷ್ಟೇ ಗೋವಾಕ್ಕೆ ಪ್ರವಾಸ ಹೋಗಿದ್ದರು. ಅವರು ತಮ್ಮ ಸ್ನೇಹಿತರ ಜೊತೆಗೂಡಿ ಗೋವಾದಲ್ಲಿ ರಜೆಯನ್ನು ಎಂಜಾಯ್ ಮಾಡುವ ಪ್ಲಾನ್ ನಿಂದ ಅಲ್ಲಿಗೆ ಹೋಗಿದ್ದರು. ಆದರೆ ಈಗ ಅಲ್ಲಿಂದ ಶಾ ಕಿಂ ಗ್ ಸುದ್ದಿಯೊಂದು ವರದಿಯಾಗಿದೆ. ನಟ ದಿಗಂತ್ ಅವರ ಬೆನ್ನು, ಕುತ್ತಿಗೆ ಮತ್ತು ಕಾಲಿನ ಭಾಗದಲ್ಲಿ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆ ತರಲಾಗುತ್ತಿದೆ ಎನ್ನಲಾಗಿದೆ.

ದಿಗಂತ್ ಅವರು ಗೋವಾದ ಬೀಚ್ ಒಂದರಲ್ಲಿ ಸಮ್ಮರ್ ಶಾಟ್ ಜಂಪ್ ಮಾಡುವ ಸಂದರ್ಭದಲ್ಲಿ ನಡೆದ ಒಂದು ಅವಘಡದಿಂದಾಗಿ ಅವರ ಬೆನ್ನು, ಕುತ್ತಿಗೆ ಮತ್ತು ಕಾಲಿನ ಭಾಗದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಮಾದ್ಯಮವೊಂದು ವರದಿಯನ್ನು ಮಾಡಿದೆ. ದಿಗಂತ್ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಗೋವಾದಲ್ಲಿ ಅವರಿಗೆ ಈಗಾಗಲೇ‌ ಪ್ರಥಮ ಚಿಕಿತ್ಸೆ‌‌‌‌ ನೀಡಲಾಗಿದ್ದು, ಈಗ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆ ತರಲಾಗುತ್ತಿದೆ.

ಗಂಭೀರವಾಗಿ ಗಾಯಗೊಂಡಿರುವ ನಟನ ಸೂಕ್ತ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮೂಲಕ ಅವರನ್ನು ಬೆಂಗಳೂರಿಗೆ ಕರೆ ತರಲಾಗುತ್ತಿದ್ದು, ಇನ್ನು ಸ್ವಲ್ಪ ಸಮಯದಲ್ಲೇ ಅವರು ಬೆಂಗಳೂರು ತಲುಪಲಿದ್ದಾರೆ. ಪ್ರಥಮ ಚಿಕಿತ್ಸೆ ನಂತರ ವರದಿಗಳನ್ನು ಈಗಾಗಲೇ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎನ್ನಲಾಗಿದ್ದು, ದಿಗಂತ್ ಅವರ ಕುತ್ತಿಗೆ, ಬೆನ್ನು ಮತ್ತು ಕಾಲಿನ ಭಾಗದಲ್ಲಿ ಗಾಯಗಳಾಗಿವೆ ಎನ್ನಲಾಗಿದೆ. ‌ಆದರೆ ಪರಿಸ್ಥಿತಿಯ ಕುರಿತಾಗಿ ಇನ್ನೂ ನಿಖರವಾದ ಮಾಹಿತಿಗಳು ಲಭ್ಯವಾಗಿಲ್ಲ ಎನ್ನಲಾಗಿದೆ.

Leave a Reply

Your email address will not be published.