ಗೋಮಾಂಸ ಬಲು ಇಷ್ಟ ಎಂದ ನಟ, ಬಾಯ್ಕಾಟ್ ಬಹ್ರ್ಮಾಸ್ತ್ರ ಎಂದ ನೆಟ್ಟಿಗರು: ರಣಬೀರ್ ಗೆ ತಾನು ಹೇಳಿದ್ದೇ ಕುತ್ತಾಯ್ತು

Entertainment Featured-Articles Movies News

ಬಾಲಿವುಡ್ ಮಂದಿಯನ್ನು ಸದ್ಯಕ್ಕೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ ಏನು ಎನ್ನುವುದಾದರೆ ಬಾಲಿವುಡ್ ಸಿನಿಮಾಗಳನ್ನು ಹಾಗೂ ನಟರನ್ನು ಬಹಿಷ್ಕಾರ ಮಾಡಿ ಎನ್ನುವ ಕೂಗು. ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ ಕಾಟ್ ಬಾಲಿವುಡ್ ಎನ್ನುವ ಹ್ಯಾಷ್ ಟ್ಯಾಗ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಬಾಲಿವುಡ್ ನಲ್ಲಿ ಒಂದು ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ ಎಂದರೆ ಅದರ ಬೆನ್ನಲ್ಲೇ ಬಹಿಷ್ಕಾರದ ಕೂಗು ಕೇಳಿ ಬರುತ್ತಿದೆ. ಈಗಾಗಲೇ ಸ್ಟಾರ್ ನಟರ ಸಿನಿಮಾಗಳು ನೆಲಕಚ್ಚಿವೆ. ಇನ್ನು ಕೆಲವೇ ದಿನಗಳಲ್ಲಿ ಬಾಲಿವುಡ್‌ ನ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೊತೆಯಾಗಿ ಕಾಣಿಸಿಕೊಂಡಿರುವ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈಗ ಈ ಸಿನಿಮಾಕ್ಕೂ ಸಹಾ ಬಾಯ್ಕಾಟ್ ಭೀತಿ ಕಾಡುತ್ತಿದೆ.

ಕೆಲವೇ ದಿನಗಳ ಹಿಂದೆಯಷ್ಟೇ ನೇಪೋಟಿಸಂ ಬಗ್ಗೆ ಮಾತನಾಡುತ್ತಾ ನಟಿ ಆಲಿಯಾ ಭಟ್, ನನ್ನನ್ನು ನೋಡಲು ಇಷ್ಟ ಇಲ್ಲದಿದ್ದರೆ ನನ್ನ ಸಿನಿಮಾಗಳನ್ನು ನೋಡಬೇಡಿ, ಅದಕ್ಕೆ ನಾನೇನು ಮಾಡಲಾಗುವುದಿಲ್ಲ ಎನ್ನುವ ಮಾತನ್ನು ಹೇಳಿದ್ದರಿಂದ ಅದನ್ನು ಸವಾಲಾಗಿ ಸ್ವೀಕರಿಸಿದ ನೆಟ್ಟಿಗರು, ಆಲಿಯಾ ಭಟ್ ಅವರ ಮುಂಬರುವ ಸಿನಿಮಾ ಬ್ರಹ್ಮಾಸ್ತ್ರವನ್ನು ಬಹಿಷ್ಕಾರ ಮಾಡುವ ಎಂದು ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದರು. ಆದರೆ ಇದೀಗ ಮತ್ತೊಂದು ಹೊಸ ಕಾರಣಕ್ಕೆ ಬ್ರಹ್ಮಾಸ್ತ್ರ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕೆಂದು ನೆಟ್ಟಿಗರು ಮತ್ತೊಮ್ಮೆ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ.

ನಟ ರಣಬೀರ್ ಕಪೂರ್ ಸುಮಾರು ಹತ್ತು ವರ್ಷಗಳ ಹಿಂದೆ ನೀಡಿದ್ದ ಒಂದು ಹೇಳಿಕೆಯ ಕಾರಣವಾಗಿ ಈಗ ಬ್ರಹ್ಮಾಸ್ತ್ರ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ನಟ ಆಡಿದ ಮಾತು ಈಗ ಸಿನಿಮಾಗೆ ಕುತ್ತನ್ನು ತಂದಿದೆ. ಅಂದು ನಟನು ಆಡಿದ ಮಾತಿನ ವಿಡಿಯೋ ಈಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಹಾಗಾದರೆ ಹತ್ತು ವರ್ಷಗಳ ಹಿಂದೆ ರಣಬೀರ್ ಕಪೂರ್ ಹೇಳಿದ್ದಾದರೂ ಏನು ? ಎನ್ನುವ ವಿಷಯಕ್ಕೆ ಬರುವುದಾದರೆ ಅಂದು ರಣಬೀರ್ ಕಪೂರ್ ಗೋಮಾಂಸದ ಬಗ್ಗೆ ಮಾತನಾಡಿದ್ದರು ಎನ್ನುವುದೇ ಈಗ ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ.

2012 ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ರಣಬೀರ್ ಕಪೂರ್, ನಮ್ಮ ಮನೆಯಲ್ಲಿ ಬೆಳಗಿನ ಉಪಹಾರಕ್ಕೆ ಹೆಚ್ಚು ಮಾಂಸಹಾರವನ್ನು ಬಳಸುತ್ತೇವೆ. ಅದು ಬಹಳ ಇಷ್ಟ. ನಮ್ಮ ಕುಟುಂಬ ಪೇಶಾವರದಿಂದ ಬಂದಿದ್ದು ಪೇಷಾವರಿಗಳು ಆಹಾರ ಪ್ರಿಯರು. ನಾನು ಕೂಡ ಮಟನ್, ಗೋಮಾಂಸ ಮತ್ತು ರೆಡ್ ಮೀಟ್ ಪ್ರಿಯ ಎಂದು ಹೇಳಿದ್ದರು. ನಾನು ಗೋಮಾಂಸವನ್ನು ಹೆಚ್ಚು ಇಷ್ಟಪಡುತ್ತೇನೆ ಎನ್ನುವ ಮಾತನ್ನು ಸಹಾ ಅವರು ಹೇಳಿದ್ದರು. ಈಗ ಅದೇ ಮಾತನ್ನು ಮುನ್ನೆಲೆಗೆ ತಂದಿರುವ ನೆಟ್ಟಿಗರು ನಟನ ಮೇಲೆ ಆ ಕ್ರೋ ಶವನ್ನು ಹೊರಹಾಕುತ್ತಿದ್ದಾರೆ.

ಹಿಂದೂಗಳಿಗೆ ಗೋವು ಪವಿತ್ರ ಮತ್ತು ಪೂಜನೀಯ ಆದ ಕಾರಣ ರಣಬೀರ್ ಕಪೂರ್ ನೀಡಿರುವ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿದೆ ಎಂದು ಹೇಳುತ್ತಾ ಬ್ರಹ್ಮಾಸ್ತ್ರ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದಿದ್ದಾರೆ.‌ ಅದು ಅಲ್ಲದೇ ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಶಿವನ ಪಾತ್ರವನ್ನು ನಿರ್ವಹಿಸಿದ್ದು, ಗೋ ಮಾಂಸ ತಿನ್ನುವವನು ವಿಶ್ವನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಸಾಧ್ಯ. ಆತ ಹೇಗೆ ತಾನೇ ದೇವರಾಗಲು ಸಾಧ್ಯ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ

Leave a Reply

Your email address will not be published.