ಗೋಡ್ಸೆ ದೇಶಪ್ರೇಮಕ್ಕೆ ಜೈ : ಬಿಗ್ ಬಾಸ್ ಖ್ಯಾತಿಯ ನಟಿಯ ಮಾತು ಸೃಷ್ಟಿಸಿದೆ ಸಂಚಲನ

Written by Soma Shekar

Published on:

---Join Our Channel---

ನಾಥೂರಾಮ್ ಗೋಡ್ಸೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಗಳು ಆಗುತ್ತಲೇ ಇರುತ್ತವೆ. ಪರ ವಿ ರೋ‌ ಧ ವಿಚಾರಗಳು ಕೇಳಿ ಬರುವುದು ಕೂಡಾ ಸಹಜವೇ. ಈಗ ಇದೇ ವಿಚಾರದಲ್ಲಿ ಚಂದನವನದ ನಟಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಡಿರುವ ಟ್ವೀಟ್ ಒಂದು ಸಖತ್ ಸದ್ದು ಮಾಡಿದೆ. ಹೌದು ಚಂದನವನದ ನಟಿಯಾದ ಅನಿತಾ ಭಟ್ ಅವರು ಒಂದು ಟ್ವೀಟ್ ಮಾಡಿದ್ದಾರೆ. ನಟಿ ಮಾಡಿರುವ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು. ನಟಿಯು ನಾಥೂರಾಮ್ ಗೋಡ್ಸೇ ಮತ್ತು ಬ್ರಾಹ್ಮಣರ ಕುರಿತಾಗಿ ಮಾಡಿರುವ ಈ ಟ್ವೀಟ್ ಈಗ ಚರ್ಚೆಯ ವಿಷಯವಾಗಿ ಮಾರ್ಪಡಲೂ ಬಹುದು ಎಂದು ನಾವು ಹೇಳಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ ಅಮಿತಾ ಭಟ್ ಅವರು ಇತ್ತೀಚಿಗೆ ಬ್ರಾಹ್ಮಣ್ಯ, ಗಾಂಧೀಜಿ ಮತ್ತು ಅವರನ್ನು ಕೊಂ ದಂತಹ ಗೋಡ್ಸೆ ಗೆ ಜೈ ಎನ್ನುವ ಒಂದು ಟ್ವೀಟ್ ಮಾಡುವ ಮೂಲಕ ಒಂದು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ನಟಿಯು ಮಾಡಿರುವ ಟ್ವೀಟ್ ಪರ ಹಾಗೂ ವಿ ರೋ ಧ ಚರ್ಚೆಯನ್ನು ಹುಟ್ಟು ಹಾಕಿರುವುದು ಸತ್ಯ. ಇಷ್ಟಕ್ಕೂ ನಟಿ ಮಾಡಿದ ಟ್ವೀಟ್ ನಲ್ಲಿ ಏನಿದೆ? ಎನ್ನುವುದಾದರೆ, “ಗಾಂಧಿಯನ್ನು ಕೊಂ ದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಅಂತ ಗೊತ್ತಿದ್ರೂ, ಅದನ್ನ ಮಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ” ಎಂದಿದ್ದಾರೆ.

ಅವರು ಮತ್ತೊಂದು ಟ್ವೀಟ್ ನಲ್ಲಿ, “ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಯವರು ದೇಶಭಕ್ತನೇ. ಅವರನ್ನ ಟೆ ರ ರಿ ಸ್ಟ್ ಅಂತ ಕರಿಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿನಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು” ಎಂದು ಬರೆದುಕೊಂಡಿದ್ದಾರೆ. ನಟಿಯು ಮಾಡಿದ ಟ್ವೀಟ್ ನೋಡಿ ಕೆಲವರು ಅವರ ಮಾತಿಗೆ ಸರಿ ಎನ್ನುವ ಹಾಗೆ ಜೈ ಹೇಳಿದರೆ ಇನ್ನೂ ಕೆಲವರು ಇದನ್ನು ಟೀಕೆ ಮಾಡಿದ್ದಾರೆ.

Leave a Comment