ಗೆಳತಿಯ ಜೊತೆಗೆ ಹಾಸಿಗೆ ಏರಿದ 28 ರ ಯುವಕನ ಸಾವು: ವೈದ್ಯರು ಹೇಳಿದ್ದೇನು?

Featured-Articles Health News

ಇತ್ತೀಚಿನ ದಿನಗಳಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳು, ಒತ್ತಡದ ಜೀವನ, ಬದಲಾದ ವಾತಾವರಣ ಹಾಗೂ ಜೀವನ ವಿಧಾನ ಹೀಗೆ ಹತ್ತು ಹಲವು ಕಾರಣಗಳಿಂದ ಅನೇಕರು ಚಿಕ್ಕ ವಯಸ್ಸಿನಲ್ಲೇ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಘಟನೆಗಳು ಮಾದ್ಯಮಗಳಲ್ಲಿ ವರದಿಯಾಗುತ್ತಿರುವುದು ಮಾತ್ರವೇ ಅಲ್ಲದೇ, ನಮ್ಮ ಸುತ್ತ ಮುತ್ತಲಲ್ಲೂ ಇಂತಹ ಘಟನೆಗಳು ನಡೆಯುವುದು ನೋಡಿದಾಗ ಒಂದು ರೀತಿಯಲ್ಲಿ ಇದು ಆ ತಂ ಕವನ್ನು ಹುಟ್ಟು ಹಾಕುವ ಜೊತೆಗೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಲು ನಮ್ಮಲ್ಲಿ ಒಂದು ಎಚ್ಚರಿಕೆಯ ಕರಗಂಟೆ ಬಾರಿಸುವಂತಾಗಿದೆ.

ನಾಗ್ಪುರದಿಂದ ವರದಿಯಾಗಿರುವ ಘಟನೆಯೊಂದು ಇದೀಗ ದೊಡ್ಡ ಸುದ್ದಿಯಾಗಿದೆ. ಇಲ್ಲಿನ 28 ವರ್ಷದ ಯುವಕನೊಬ್ಬ ತನ್ನ ಗೆಳತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದು, ಲಾಡ್ಜ್ ನಲ್ಲಿ ಆತ ನಿಗೂಢವಾಗಿ ಸಾ ವ ನ್ನಪ್ಪಿರುವ ಘಟನೆಯು ವರದಿಯಾಗಿದೆ. ಹೌದು ನಾಗ್ಪುರದಲ್ಲಿ 28 ವರ್ಷ ವಯಸ್ಸಿನ ಯುವಕ ಅಜಯ್ ಪರ್ಟೆಕಿ ಎನ್ನುವ ಯುವಕ ಸಾ ವನ್ನಪ್ಪಿದ್ದು, ಪ್ರಾಥಮಿಕ ವರದಿಯಲ್ಲಿ ಆತನಿಗೆ ಹೃದಯಾಘಾತವಾಗಿ ಮೃ ತನಾಗಿದ್ದಾನೆ ಎಂದು ಹೇಳಲಾಗಿದೆ.

ಅಜಯ್ ಪರ್ಟೆಕಿ, ಕಳೆದ ಮೂರು ವರ್ಷದಿಂದ ಮಧ್ಯಪ್ರದೇಶದ ಛಿಂದ್ವಾಡಕ್ಕೆ ಸೇರಿದ 23 ವರ್ಷದ ಯುವತಿ, ವೃತ್ತಿಯಿಂದ ನರ್ಸ್ ಆಗಿರುವ ಯುವತಿಯ ಜೊತೆ ಸಂಬಂಧದಲ್ಲಿ ಇದ್ದನು ಎನ್ನಲಾಗಿದೆ. ಈ ವಿಷಯ ಅವರ ಎರಡು ಕುಟುಂಬಗಳಿಗೂ ತಿಳಿದಿತ್ತು. ಈ ಜೋಡಿ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದರು ಎನ್ನಲಾಗಿದೆ. ಅಜಯ್ ತಾನು ಪ್ರೀತಿಸುತ್ತಿರುವ ಯುವತಿಯನ್ನು ಮದುವೆಯಾಗುವ ವಿಚಾರವನ್ನು ಮಾತನಾಡಲು ಯುವತಿಯ ತಾಯಿಯನ್ನು ಭೇಟಿ ಮಾಡಿ, ಅವರನ್ನು ಮದುವೆಗೆ ಒಪ್ಪಿಸಿದ್ದ ಎನ್ನಲಾಗಿದೆ.

ಸಂಜೆ ನಾಲ್ಕು ಗಂಟೆಯ ವೇಳೆಯಲ್ಲಿ ಅಜಯ್ ತನ್ನ ಗೆಳತಿಯೊಂದಿಗೆ ಲಾಡ್ಜ್ ಒಂದಕ್ಕೆ ಬಂದಿದ್ದಾನೆ. ಅಲ್ಲಿ ಕೋಣೆ ಪಡೆದ ನಂತರ ಈ ಜೋಡಿ ಅರ್ಧ ಗಂಟೆಯ ನಂತರ ಲೈಂ ಗಿ ಕ ಕ್ರಿಯೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಅಜಯ್ ಹಾಸಿಗೆಯ ಮೇಲೆ ಕುಸಿದಿದ್ದು, ಯುವತಿ ಲಾಡ್ಜ್ ಸಿಬ್ಬಂದಿಗ ಸಹಾಯದಿಂದ ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಳೆ. ಆದರೆ ಆಸ್ಪತ್ರೆ ತಲುಪಿದಾಗ ವೈದ್ಯರು ಯುವಕ ಮೃ ತ ನಾಗಿದ್ದಾನೆ ಎಂದು ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.

ಸಾವೊನೆರ್ ಪೋಲಿಸ್ ಠಾಣೆಯ ಸಹಾಯಕ ಪೋಲಿಸ್ ಇನ್ಸ್ಪೆಕ್ಟರ್ ಸತೀಶ್ ಪಾಟೀಲ್ ಅವರು, ಅವರು ಸಂ ಭೋ ಗ ನಡೆಸುವಾಗ ಅಜಯ್ ಕುಸಿದು ಬಿದ್ದ ಎಂದು ಯುವತಿ ಹೇಳಿದ್ದು, ಸಂತ್ರಸ್ತ ಯಾವುದೇ ಔಷಧಿ ಅಥವಾ ಮಾ ದ ಕ ವಸ್ತು ಸೇವನೆ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ವೈದ್ಯರು ಸಾವಿಗೆ ಪ್ರಾಥಮಿಕ ಕಾರಣ ಹೃದಯಾಘಾತ ಎಂದು ಹೇಳಿದ್ದು, ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published.