ಗುರೂಜಿ ಲೆಕ್ಕಾಚಾರ ಉಲ್ಟಾ ಪಲ್ಟಾ!! ಆರ್ಯವರ್ಧನ್ ಬಿಡೋದೆಲ್ಲಾ ಬೊಗಳೆ: ಬಿಗ್ ಬಾಸ್ ಮನೆಯಲ್ಲಿ ಗುರೂಜಿ ಬಗ್ಗೆ ಟೀಕೆ

Entertainment Featured-Articles Movies News
28 Views

ಸಂಖ್ಯಾ ಶಾಸ್ತ್ರದ ಮೂಲಕ ಗಮನ ಸೆಳೆದಿರುವ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್ ಬಾಸ್ ಓಟಿಟಿ ಕನ್ನಡದ ಮೊದಲನೇ ಸೀಸನ್ ಆರಂಭವಾದಾಗ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಕ್ಕೆ ಕಾಲಿಟ್ಟಿದ್ದರು. ಹೊರ ಜಗತ್ತಿನಲ್ಲಿ ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎಂದು ಪ್ರಸಿದ್ಧ ಆಗಿರುವ ಆರ್ಯವರ್ಧನ್ ಗುರೂಜಿ ಸಂಖ್ಯಾ ಶಾಸ್ತ್ರದ ವಿಚಾರವಾಗಿ ತಾನು ಹೇಳಿದ್ದೆಲ್ಲಾ ನಡೆಯುತ್ತದೆ ಎಂದೇ ಹೇಳುತ್ತಾರೆ. ಆದರೆ ಐಪಿಎಲ್ ಸಮಯದಲ್ಲಿ ಅವರ ಬಹುತೇಕ ಲೆಕ್ಕಾಚಾರಗಳು ತಲೆಕೆಳಗಾದಾಗ ಸೋಶಿಯಲ್ ಮೀಡಿಯಾಗಳಲ್ಲಿ ಅವರನ್ನು ಭರ್ಜರಿಯಾಗಿ ಟ್ರೋಲ್ ಸಹಾ ಮಾಡಲಾಯಿತು ಎನ್ನುವುದು ವಾಸ್ತವ.

ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ಶೈಲಿಯಲ್ಲಿ ಆಟವನ್ನು ಆಡುತ್ತಾ ಎಲ್ಲರ ಗಮನವನ್ನು ಸೆಳೆಯುತ್ತಿರುವ ಆರ್ಯವರ್ಧನ್ ಗುರೂಜಿ ಅವರು ಮನೆಯ ಎಲ್ಲಾ ಸದಸ್ಯರಲ್ಲಿ ಕೆಲವರಿಗೆ ಇಷ್ಟವಾಗುತ್ತಿಲ್ಲ. ಗುರೂಜಿ ಅವರ ಬಗ್ಗೆ ಸ್ಪರ್ಧಿಗಳು ಹಿಂಬದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಬಗ್ಗೆ ಟೀಕೆ, ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ಇನ್ನು ಮನೆಯಲ್ಲಿ ಸಹಾ ಆರ್ಯವರ್ಧನ್ ಗುರೂಜಿ ತಮ್ಮ ಸಂಖ್ಯಾ ಶಾಸ್ತ್ರದ ಬಲದಿಂದ ಕೆಲವೊಂದು ವಿಚಾರಗಳನ್ನು ಪ್ರೆಡಿಕ್ಟ್ ಮಾಡಿದ್ದರು. ಈಗ ಆ ವಿಚಾರವಾಗಿಯೂ ಸಹಾ ಮನೆಯ ಸದಸ್ಯರು ಟೀಕೆಗಳನ್ನು ಮಾಡಿದ್ದಾರೆ. ಹಾಗಾದರೆ ಆರ್ಯವರ್ಧನ್ ಗುರೂಜಿ ಹೇಳಿದ್ದೇನು ಅಂತೀರಾ?

ಟಾಸ್ಕ್ ಒಂದರ ವಿಚಾರವಾಗಿ ಪ್ರೆಡಿಕ್ಟ್ ಮಾಡಿದ ಆರ್ಯವರ್ಧನ್ ಗುರೂಜಿ ಅವರು, ಆ ಟಾಸ್ಕ್ ನಲ್ಲಿ ಸೋನು ಗೌಡ ಗೆಲ್ಲುತ್ತಾರೆ ಎಂದು ಹೇಳಿದ್ದರು. ಆದರೆ ಸೋನು ಆ ಟಾಸ್ಕ್ ನಲ್ಲಿ ಗೆಲ್ಲುವುದು ಸಾಧ್ಯವಾಗಲಿಲ್ಲ. ಇಲ್ಲಿ ಆರ್ಯವರ್ಧನ್ ಗುರೂಜಿ ಅವರ ಪ್ರೆಡಿಕ್ಷನ್ ತಲೆಕೆಳಗಾಯಿತು. ಇದೇ ಕಾರಣಕ್ಕೆ ಮನೆಯ ಇನ್ನೊಬ್ಬ ಸ್ಪರ್ಧಿಯಾಗಿರುವ ಸೋಮಣ್ಣ ಮಾಚಿಮಾಡ ಆರ್ಯವರ್ಧನ್ ಗುರೂಜಿ ಅವರ ಪ್ರೆಡಿಕ್ಷನ್ ಬಗ್ಗೆ ಗುರೂಜಿ ಅವರನ್ನು ಟೀಕೆ ಮಾಡಿದರು. ವಿಷಯ ಅಷ್ಟಕ್ಕೇ ಮುಗಿಯಲಿಲ್ಲ. ಮತ್ತೊಂದು ಸಮಯದಲ್ಲೂ ಆರ್ಯವರ್ಧನ್ ಗುರೂಜಿ ಅವರನ್ನು ನೋಡಿ ಮನೆಯ ಸದಸ್ಯರು ನಕ್ಕಿದ್ದಾರೆ.

ಹೌದು, ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ವಿಚಾರವಾಗಿ ಗುರೂಜಿ ಅವರು ಕ್ಯಾಮರಾ ಕಡೆ ನೋಡಿಕೊಂಡು ಮಾತನಾಡುತ್ತಿದ್ದರು. ಅದನ್ನು ನೋಡಿ ನಕ್ಕ ಸೋಮಣ್ಣ, ಈ ವಿಚಾರವಾಗಿ ಅನ್ಯ ಸದಸ್ಯರ ಬಳಿ ಹೇಳಿಕೊಂಡು ತಮಾಷೆ ಮಾಡಿದ್ದಾರೆ. ಗುರೂಜಿ ಅವರ ಲೆಕ್ಕಾಚಾರದಲ್ಲಿ ಸದಾ ತಪ್ಪುತ್ತಿದ್ದಾರೆ. ಅವರ ಭವಿಷ್ಯ ನಿಜವಾಗಲ್ಲ. ವ್ಯಕ್ತಿಯಾಗಿ ಅವರು ಇಷ್ಟವಾಗುತ್ತಾರೆ ಅಷ್ಟೇ. ಸಂಖ್ಯಾ ಶಾಸ್ತ್ರಜ್ಞನಾಗಿ ಅವರು ಫ್ಲಾಪ್, ಅವರು ಬಿಡೋದೆಲ್ಲಾ ಬೊಗಳೆ ಎಂದು ಸೋಮಣ್ಣ ಮಾಚಿಮಾಡ ಹೇಳಿದಾಗ, ಇತರೆ ಸ್ಪರ್ಧಿಗಳು ಅದನ್ನು ಕೇಳಿ ನಕ್ಕಿದ್ದಾರೆ.

Leave a Reply

Your email address will not be published. Required fields are marked *