ಗುರುವಾರದ ದಿನ ಎಂದರೆ ಅದು ಸಾಯಿನಾಥನಿಗೆ ಅತ್ಯಂತ ಪ್ರಿಯವಾದ ದಿನ. ಆದ್ದರಿಂದಲೇ ಈ ದಿನ ಭಕ್ತಿಯಿಂದ ಬಾಬಾನನ್ನು ಪ್ರಾರ್ಥಿಸಿದರೆ ಎಂತಹ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹತ್ತಿರದ ಬಾಬಾ ಮಂದಿರಕ್ಕೆ ಭಕ್ತರು ಭೇಟಿ ನೀಡುತ್ತಾರೆ. ಧೂಪ ದೀಪಗಳಿಂದ ಆರಾಧನೆ ಮಾಡಿ, ಸಾಯಿಬಾಬಾನಿಗೆ ನೈವೇದ್ಯವನ್ನು ಅರ್ಪಣೆ ಮಾಡು ಅವರ ಕೃಪಾ ಕಟಾಕ್ಷವನ್ನು ಬಯಸುತ್ತಾರೆ ಭಕ್ತರು. ಆದರೆ ಗುರುವಾರ ಬಾಬಾ ನ ಆರಾಧನೆಯನ್ನು ಮಾಡುವ ವಿಚಾರದಲ್ಲಿ ನೀವು ಅನುಸರಿಸಬೇಕಾದ ನಿಯಮಗಳ ಬಗ್ಗೆ ಸ್ವಲ್ಪ ಗಮನವನ್ನು ನೀಡಿ.
ಗುರುವಾರದ ದಿನ ಸಾಯಿಬಾಬಾರವರ ಆರಾಧನೆ ಮಾಡುವುದಕ್ಕೆ ಅತ್ಯಂತ ಮಂಗಳಕರ ದಿನ. ಆದ್ದರಿಂ ಈ ದಿನ ಸಾಯಿಬಾಬಾಗೆ ವಿಶೇಷ ಪ್ರಾರ್ಥನೆ ಮಾಡಿ. ಪೂಜೆಯ ನಂತರ ಮಕ್ಕಳನ್ನು ಮನೆಗೆ ಕರೆಸಿ ಅವರಿಗೆ ಪ್ರಸಾದವನ್ನು ನೀಡಿ. ಮಕ್ಕಳ ಜೊತೆಗೆ ಸ್ವಲ್ಪ ಸಮಯ ಸಂತೋಷದಿಂದ ಕಳೆದರೆ ಬಾಬಾನ ಕೃಪೆಗೆ ಪಾತ್ರರಾಗಬಹುದು ಎನ್ನುತ್ತಾರೆ ಹಿರಿಯರು. ಏಕೆಂದರೆ ಸಾಯಿಬಾಬಾ ಅವರಿಗೆ ಮಕ್ಕಳೆಂದರೆ ತುಂಬಾ ಇಷ್ಟ. ಬಾಬಾ ಮಕ್ಕಳ ಜೊತೆ ಸಾಕಷ್ಟು ಸಮಯ ಕಳೆಯುತ್ತಿದ್ದರು ಎಂದು ಪುರಾಣಗಳು ಹೇಳುತ್ತವೆ.
ಮಕ್ಕಳಿಗೆ ಬಾಬಾ ಪ್ರಸಾದ ನೀಡುವುದು ಜಗತ್ತಿಗೆ ಒಂದು ಪ್ರೇರಣೆ ಎನ್ನುತ್ತಾರೆ ವಿದ್ವಾಂಸರು. ಈ ವಿಶೇಷ ದಿನದಂದು ಬಾಬಾರ ಹೆಸರಿನಲ್ಲಿ ಅನ್ನ ನೀಡಿದರೆ ಅದರಿಂದ ಪುಣ್ಯ ಫಲವು ಪ್ರಾಪ್ತಿಯಾಗುತ್ತದೆ. ಗುರುವಾರ ಸಾಯಿನಾಥನ ವಿಗ್ರಹಕ್ಕೆ ಹಾಲಿನಿಂದ ಅಭಿಷೇಕವನ್ನು ಮಾಡುವುದು ಬಹಳ ಶ್ರೇಯಸ್ಕರ ಮತ್ತು ತುಂಬಾ ಒಳ್ಳೆಯದು ಎನ್ನಲಾಗಿದ್ದು, ಇದರಿಂದ ಶುಭ ಫಲಗಳು ಸಿಗುತ್ತವೆ ಎಂದು ಹೇಳಲಾಗಿದೆ. ಬಾಬಾರಿಗೆ ನೈವೇದ್ಯದ ವಿಚಾರ ಬಂದಾಗ, ಅವರ ಪ್ರಿಯವಾದ ಹಾಲುಕೋವಾ ಅರ್ಪಿಸುವುದು ಇನ್ನೂ ಉತ್ತಮ ಎನ್ನಲಾಗಿದೆ.
ಗುರುವಾರದಂದು ಮನೆಯಲ್ಲಿ ಪೂಜೆಯ ಕೋಣೆಯನ್ನು ವಿಶೇಷವಾಗಿ ಅಲಂಕಾರವನ್ನು ಮಾಡಿ. ಸಾಯಿಬಾಬಾನಿಗೆ ದೀಪಾರಾಧನೆ ಮಾಡುವುದು ಒಳ್ಳೆಯದು ಮತ್ತು ಶುಭ ಎನ್ನಲಾಗಿದೆ. ಬಾಬಾರಿಗೆ ಪ್ರಾಣಿ ಹಿಂ ಸೆ ಮಾಡುವುದು ಇಷ್ಟವಿರಲಿಲ್ಲ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಬಾಬಾರನ್ನು ಸ್ಮರಿಸಿ, ಯಾವುದೇ ಪ್ರಾಣಿಗಳಿಗೂ ಅನಾವಶ್ಯಕವಾಗಿ ಹಿಂ ಸೆ ಮಾಡುವ, ತೊಂದರೆ ನೀಡುವ ಕೆಲಸ ಗಳನ್ನು ಮಾಡಬೇಡಿ. ಈ ಎಲ್ಲಾ ಅಂಶ ನೆನಪಿನಲ್ಲಿಟ್ಟುಕೊಂಡು ಬಾಬಾ ನ ಆರಾಧನೆ ಮಾಡಿದರೆ ನಮ್ಮ ದೋಷಗಳೆಲ್ಲವೂ ದೂರವಾಗುತ್ತದೆ.