ಗುಡ್ಡಗಾಡಿನಲ್ಲಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಈ ಶಿಕ್ಷಕರು ಮಾಡುವ ಕೆಲಸ ನೋಡಿದ್ರೆ ಕೈ ಎತ್ತಿ ಮುಗಿಯುವಿರಿ

Entertainment Featured-Articles News
79 Views

ಶಿಕ್ಷಕ ವೃತ್ತಿ ಎನ್ನುವುದು ಬಹಳ ಶ್ರೇಷ್ಠವಾದ ವೃತ್ತಿಯೆಂದೇ ಪರಿಗಣಿಸಲಾಗುವುದು. ಶಿಕ್ಷಕರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುವರು, ಜ್ಞಾನವನ್ನು ಹರಡಲು ಅವರು ಶ್ರಮ ಪಡುವರು. ಗುಡ್ಡ ಗಾಡು ಪ್ರದೇಶಗಳಲ್ಲಿ ಶಿಕ್ಷಕರಾಗಿ ಕೆಲಸವನ್ನು ನಿರ್ವಹಿಸುವವರಿಗೆ ಅದೊಂದು ಸಾಹಸದ ಕಥೆಯೇ ಎಂದು ಹೇಳಬಹುದು. ಇಂತಹುದೇ ಒಂದು ಪ್ರದೇಶದಲ್ಲಿ ಮಕ್ಕಳ ಬಿಸಿಯೂಟಕ್ಕಾಗಿ, ಅವರ ಬಿಸಿಯೂಟ್ ತಪ್ಪಬಾರದೆಂದು ಪ್ರತಿದಿನ ಎಂಟು ಕಿಮೀ ನಡೆದ ಹೋಗುವ ಶಿಕ್ಷಕರನ್ನು ನೋಡಿದಾಗ ಗೌರವ ನೀಡದೇ ಇರಲಾಗದು.

ಇಂತಹುದೊಂದ ಅತ್ಯುತ್ತಮ ಎನ್ನುವ ಕೆಲಸ ನಡೆಯುತ್ತಿರುವ ಘಟನೆ ಛತ್ತೀಸ್ಗಡದ ಬಲರಾಮ್ ಪುರ ಜಿಲ್ಲೆಯಲ್ಲಿ ಕಂಡು ಬಂದಿದೆ. ಇಲ್ಲಿ ಶಿಕ್ಷಕರಾದ ಸುನೀಲ್ ಯಾದವ್ ಮತ್ತು ಪಂಕಜ್ ಎನ್ನುವ ಇಬ್ಬರು ಶಿಕ್ಷಕರು ಮಕ್ಕಳ ಬಿಸಿಯೂಟಕ್ಕಾಗಿ ಅಗತ್ಯ ಇರುವ ದಿನಸಿಯನ್ನು ಪಡಿತರ ಅಂಗಡಿಯಿಂದ ಪಡೆದು, ಅದನ್ನು ಹೊತ್ತುಕೊಂಡು ಪ್ರತಿದಿನ 8 ಕಿಮೀ ಬೆಟ್ಟ ಗುಡ್ಡದ ಹಾದಿಯಲ್ಲಿ ನಡೆದು ಹೋಗುತ್ತಾರೆ. ಅವರ ಬದ್ಧತೆ ಹಾಗೂ ಕರ್ತವ್ಯ ನಿಷ್ಠೆಯ ಬಗ್ಗೆ ಗೌರವವಿದೆ ಎಂದು ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿ ಹೇಳಿದ್ದಾರೆ.

ಖಂಡಿಯಾ ದಾಮರ್ ಗ್ರಾಮ ಪಂಚಾಯಿತಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕೆಲಸವನ್ನು ಮಾಡುತ್ತಿದ್ದಾರೆ. ಶಾಲೆಯ ರಸ್ತೆಯಲ್ಲಿ ನಡೆದು ಬರುವುದು ಬಹಳ ಕಷ್ಟವಾದ ಕೆಲಸವಾಗಿದೆ. ಮಳೆ ಬಿದ್ದರೆ ಈ ರಸ್ತೆಗಳಲ್ಲಿ ನಡೆಯುವುದು ಅಸಹನೀಯವಾಗಿ ಬಿಡುತ್ತದೆ. ಆದರೂ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ವಂಚಿತರಾಗಬಾರದು ಎಂದು ನಾವು ನಡೆದುಕೊಂಡೇ ಬರುತ್ತೇವೆ ಎಂದು ಶಿಕ್ಷಕರು ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಗುಡ್ಡದ ಮೇಲೆ ಇರುವ ಶಾಲೆಗೆ ರಸ್ತೆಯನ್ನು ಸಂಪರ್ಕಿಸಿ ಕೊಡುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿಯನ್ನು ಮಾಡಿದ್ದರೂ, ಈಗಲೂ ಮಾಡುತ್ತಿದ್ದರೂ ಸಹಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಶಿಕ್ಷಕರ ಫೋಟೋ ಗಳು ವೈರಲ್ ಆಗಿದ್ದು, ನೆಟ್ಟಿಗರು ಸಹಾ ಅವರಿಗೆ ಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಕರ ಶ್ರಮವನ್ನು ನೆಟ್ಟಿಗರು ಗೌರವಿಸುತ್ತಿದ್ದಾರೆ.

Leave a Reply

Your email address will not be published. Required fields are marked *