ಗುಡಿಯಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ ತ್ರಿಶಾ: ಕೂಡಲೇ ಬಂಧಿಸುವಂತೆ ಹಿಂದೂ ಪರ ಸಂಘಟನೆಗಳ ಆಗ್ರಹ

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಎನಿಸಿಕೊಂಡಿರುವ ನಟಿ ತ್ರಿಶಾ ಕೃಷ್ಣನ್ ಅವರು ಸಿನಿ ರಂಗದಲ್ಲಿ ದೀರ್ಘಕಾಲದಿಂದಲೂ ತಮ್ಮ ಸ್ಟಾರ್ ಡಂ ಉಳಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಈ ನಟಿಯ ಅಭಿಮಾನಿಗಳ ಬಳಗ ಕೂಡಾ ದೊಡ್ಡದಾಗಿದೆ. ತ್ರಿಶಾ ಕೃಷ್ಣನ್ ಅವರು ಕನ್ನಡದಲ್ಲಿ ಸಹಾ ಒಂದು ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡದ ಸಿನಿ ಪ್ರೇಕ್ಷಕರನ್ನು ಸಹಾ ರಂಜಿಸಿದ್ದಾರೆ ಎನ್ನುವುದು ವಾಸ್ತವ. ಅಲ್ಲದೇ ಮತ್ತೊಮ್ಮೆ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಈಗಾಗಲೇ ಸುದ್ದಿಯಾಗಿದೆ.

ಇದೀಗ ನಟಿ ತ್ರಿಶಾ ಕೃಷ್ಣನ್ ಅವರು ವಿವಾದವೊಂದಕ್ಕೆ ಗುರಿಯಾಗಿದ್ದು, ನಟಿಯನ್ನು ಕೂಡಲೇ ಬಂಧಿಸಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಕಾಲಿವುಡ್ ನ ಪ್ರಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರು ಪ್ರಸ್ತುತ ಭಾರೀ ಬಜೆಟ್ ನೊಂದಿಗೆ ಸಿದ್ಧವಾಗುತ್ತಿರುವ, ಬಹು ನಿರೀಕ್ಷೆಗಳನ್ನು ಹುಟ್ಟು ಹಾಕಿರುವಂತಹ, ಮಣಿರತ್ನಂ ನಿರ್ದೇಶನ ಸಾರಥ್ಯದ ಪೊನ್ನಿಯನ್ ಸೆಲ್ವಂ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ನಟಿ ಐಶ್ವರ್ಯ ರೈ ಕೂಡಾ ಈ ಸಿನಿಮಾದ ಪ್ರಮುಖ ಭಾಗವಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಇಂತಹುದೊಂದು ಅದ್ಭುತ ಐತಿಹಾಸಿಕ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ತ್ರಿಶಾ ಕೃಷ್ಣನ್ ಅವರು ನಟಿಸುತ್ತಿದ್ದು, ಪ್ರಸ್ತುತ ಸಿನಿಮಾದ ಚಿತ್ರೀಕರಣವು ಇಂದೋರ್ ನ ಒಂದು ದೇವಾಲಯದಲ್ಲಿ ನಡೆಯುತ್ತಿದೆ. ಈ ಐತಿಹಾಸಿಕ ದೇವಾಲಯ ದಲ್ಲಿ ತ್ರಿಶಾ ಕೃಷ್ಣನ್ ಅವರ ಭಾಗದ ದೃಶ್ಯಗಳ ಚಿತ್ರೀಕರಣವನ್ನು ಮಾಡಲಾಗುತ್ತಿದೆ.

ಸಿ‌ನಿಮಾ ಚಿತ್ರೀಕರಣದ ವೇಳೆ ಮಧ್ಯೆ ದೊರೆಯುವ ವಿರಾಮದ ವೇಳೆಯಲ್ಲಿ ನಟಿ ತ್ರಿಶಾ ಕೃಷ್ಣನ್ ಅವರು ದೇಗುಲದ ಒಳಗೆ ಚಪ್ಪಲಿಯನ್ನು ಧರಿಸಿ ಓಡಾಡುತ್ತಿದ್ದರು ಎನ್ನಲಾಗಿದೆ.ದೇಗುಲದಲ್ಲಿ ಇರುವ ಶಿವಲಿಂಗ ಮತ್ತು ನಂದಿಯ ನಡುವಿನ ಜಾಗದಲ್ಲಿ ನಟಿ ಚಪ್ಪಲಿ ಧರಿಸಿ ಓಡಾಡುವುದನ್ನು ಅಲ್ಲಿನ ಜನರು ಫೋಟೋಗಳ ಮೂಲಕ ಕ್ಲಿಕ್ಕಿಸಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಪ್ಪಲಿ ಧರಿಸಿ ದೇಗುಲದಲ್ಲಿ ಓಡಾಡಿದ ನಟಿಯ ಫೋಟೋಗಳು ವೈರಲ್ ಆದ ಮೇಲೆ ನೆಟ್ಟಿಗರು ನಟಿಯ ಈ ವರ್ತನೆಗೆ ಬಹಳ ಅಸಮಾಧಾನಗೊಂಡಿದ್ದಾರೆ. ತ್ರಿಶಾ ಅವರ ಈ ವರ್ತನೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿದೆ ಎಂದು ಸಿಟ್ಟನ್ನು ಹೊರ ಹಾಕಿದ್ದಾರೆ. ನಟಿಯ ವಿ ರು ದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದ್ದು, ಅವರನ್ನು ಕೂಡಲೇ ಬಂಧಿಸಿ ಎಂದು ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.

ಕೆಲವೇ ದಿನಗಳ ಹಿಂದೆ ಇದೇ ಸಿನಿಮಾದ ಚಿತ್ರೀಕರಣದ ವೇಳೆ ಕುದುರೆಯೊಂದು ಸಾವಿಗೀಡಾದ ಹಿನ್ನೆಲೆಯಲ್ಲಿ ಪೇಟಾ ಸಂಘಟನೆಯು ಸಿನಿಮಾ ತಂಡದ ವಿ ರುದ್ಧ ದೂರು ದಾಖಲು ಮಾಡಿತ್ತು. ಮದ್ರಾಸ್ ಟಾಕೀಸ್ ಮತ್ತು ಕುದುರೆ ಮಾಲೀಕನ ವಿರುದ್ಧ ಪ್ರಾಣಿಗಳ ಮೇಲಿನ ದೌ ರ್ಜ ನ್ಯ ದ ವಿರುದ್ಧದ ಕಾಯ್ದೆಯ ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪೊನ್ನಿಯನ್ ಸೆಲ್ವಂ ಸುಮಾರು 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಆಗಿದೆ

Leave a Comment