HomeEntertainmentಗುಟ್ಟಾಗಿ ನಡೀತಾ ಸ್ಟಾರ್ ನಿರೂಪಕಿಯ ಮದುವೆ? ಹಾಗಾದ್ರೆ ಹಾಸ್ಯ ನಟನೊಂದಿಗಿನ ಲವ್ ಟ್ರ್ಯಾಕ್ ಕಥೆ ಏನು?

ಗುಟ್ಟಾಗಿ ನಡೀತಾ ಸ್ಟಾರ್ ನಿರೂಪಕಿಯ ಮದುವೆ? ಹಾಗಾದ್ರೆ ಹಾಸ್ಯ ನಟನೊಂದಿಗಿನ ಲವ್ ಟ್ರ್ಯಾಕ್ ಕಥೆ ಏನು?

ತೆಲುಗಿನಲ್ಲಿ ಕಿರುತೆರೆಯಲ್ಲಿ ನಿರೂಪಣೆ ಮಾಡುವ ನಿರೂಪಕಿಯರಿಗೆ ಸಿನಿಮಾ ನಾಯಕಿರಿಗೆ ಇರುವಷ್ಟೇ ಕ್ರೇಜ್ ಹಾಗೂ ಜನಪ್ರಿಯತೆ ಇದೆ ಎಂದರೆ ಸುಳ್ಳಲ್ಲ. ನಿರೂಪಕಿ ಸುಮ, ಅನಸೂಯ, ರಶ್ಮಿ ಗೌತಮ್ ಪ್ರಸ್ತುತ ಸ್ಟಾರ್ ನಿರೂಪಕಿಯರಾಗಿದ್ದಾರೆ. ಅದರಲ್ಲೂ ಸುಮ ಅವರಿಗೆ ಇರುವ ಬೇಡಿಕೆ ಸಿಕ್ಕಾಪಟ್ಟೆ, ಸಿನಿಮಾ ಕಾರ್ಯಕ್ರಮಗಳು ಎಂದರೆ ಸುಮ ನಿರೂಪಣೆ ಇರಲೇಬೇಕು ಎನ್ನುವ ಹಾಗಿದೆ. ಇನ್ನು ಅನಸೂಯ ತಮ್ಮ ನಿರೂಪಣೆ, ಗ್ಲಾಮರ್, ಡ್ರೆಸ್ ಗಳು ಹಾಗೂ ಸಿನಿಮಾಗಳಲ್ಲಿ ನಟನೆ ಹೀಗೆ ಹಲವು ವಿಚಾರಗಳಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ.

ಇವರಿಬ್ಬರನ್ನು ಬಿಟ್ಟ ಮೇಲೆ ನಂತರದ ಸ್ಥಾನದಲ್ಲಿ ಇರುವುದು ನಿರೂಪಕಿ ರಶ್ಮಿ ಗೌತಮ್. ರಶ್ಮಿ ಕೂಡಾ ತನ್ನ ಸ್ಟೈಲ್ ಹಾಗೂ ವಿಭಿನ್ನ ಶೈಲಿಯ ಭಾಷಾ ಬಳಕೆಯಿಂದ ಜನಪ್ರಿಯತೆ ಪಡೆದಿರುವಷ್ಟೇ ಮಟ್ಟದಲ್ಲಿ, ಜಬರ್ದಸ್ತ್ ನ ಸುಡಿಗಾಲಿ ಸುಧೀರ್ ಜೊತೆಗಿನ ಲವ್ ಟ್ರ್ಯಾಕ್ ನಿಂದಲೂ ಸದ್ದು ಮಾಡಿದ್ದಾರೆ. ಈ ಜೋಡಿ ಡೀ ಡಾನ್ಸ್ ಶೋ ನಲ್ಲೂ ನಿರೂಪಣೆ ಮಾಡಿದ್ದರು, ಅಲ್ಲದೇ ಹಿಂದೊಮ್ಮೆ ಒಂದು ವಿಶೇಷ ಹಬ್ಬದ ಎಪಿಸೋಡ್ ನಲ್ಲಿ ಇವರ ಮದುವೆಯ ರೀತಿಯ ಈವೆಂಟ್ ಸಹಾ ಮಾಡಲಾಗಿತ್ತು.

ಆಗಾಗ ಇವರ ಲವ್ ಟ್ರ್ಯಾಕ್ ಕುರಿತಾಗಿ ಹಲವು ವಿಚಾರಗಳು, ಸುಧೀರ್ ರಶ್ಮಿ ಬಗ್ಗೆ ಹೇಳುವ ಭಾವನಾತ್ಮಕ ಮಾತುಗಳು ಎಲ್ಲವೂ ಪ್ರೇಕ್ಷಕರ ಗಮನವನ್ನು ಸೆಳೆಯುತ್ತದೆ. ಅಲ್ಲದೇ ರಶ್ಮಿ ಸುಧೀರ್ ಸದ್ದಿಲ್ಲದೇ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಸಹಾ ಸುದ್ದಿ ಹರಡಿತ್ತು. ಆದರೆ ಅನಂತರ ಆ ವಿಷಯ ತಣ್ಣಗಾಗಿತ್ತು. ಆದರೆ ಇದೀಗ ಮತ್ತೊಮ್ಮೆ ರಶ್ಮಿ ಮದುವೆಯ ವಿಚಾರ ಮುನ್ನೆಲೆಗೆ ಬಂದಿದೆ. ಅಲ್ಲದೇ ಈ ಬಾರಿ ಎದ್ದಿರುವ ಸುದ್ದಿ ಕುತೂಹಲಕ್ಕೂ ಎಡೆ ಮಾಡಿಕೊಟ್ಟಿದೆ.

ಹೌದು, ರಶ್ಮಿ ಕಳೆದ ವರ್ಷ ಲಾಕ್ ಡೌನ್ ಅವಧಿಯಲ್ಲಿ ಗುಟ್ಟಾಗಿ ಮದುವೆಯನ್ನು ಆಗಿದ್ದಾರೆ ಎನ್ನಲಾಗಿದೆ. ಆದರೆ ಮುಖ್ಯ ವಿಚಾರ ಏನೆಂದರೆ ರಶ್ಮಿ ಮದುವೆಯಾಗಿರುವ ವ್ಯಕ್ತಿಗೂ ಹಾಗೂ ಸಿನಿಮಾ ಅಥವಾ ಟಿವಿ ಉದ್ಯಮಕ್ಕೂ ಯಾವುದೇ ಸಂಬಂಧವಿಲ್ಲ ಎನ್ನಲಾಗುತ್ತಿದೆ. ರಶ್ಮಿ ಮದುವೆ ಆಗಿರುವ ವ್ಯಕ್ತಿ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ರಶ್ಮಿ ತಮ್ಮ ವೃತ್ತಿ ಜೀವನಕ್ಕೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕೆ ಬಹಿರಂಗ ಮಾಡಿಲ್ಲ ಎನ್ನಲಾಗುತ್ತಿದೆ.

ಹಾಗಾದರೆ ರಶ್ಮಿ ಹಾಗೂ ಸುಧೀರ್ ನಡುವಿನ ಪ್ರೇಮದ ಕಥೆಯೇನು?? ಅಂದ್ರೆ ಅದೆಲ್ಲಾ ಕೂಡಾ ಟಿ ಆರ್ ಪಿ ಸ್ಟಂಟ್ ಅಂತ ಹೇಳಲಾಗಿದೆ. ಇನ್ನೂ ಕೆಲವರಾದರೆ ರಶ್ಮಿ ಮದುವೆ ಮಾತ್ರವೇ ಅಲ್ಲದೇ, ಆಕೆಗೂ ಆಕೆಯ ಪತಿ ಗೂ ನಡುವೆ ಈಗಾಗಲೇ ವಿಚ್ಛೇದನ ಕೂಡಾ ಆಗಿದೆ ಎಂದು ಸಹಾ ಸುದ್ದಿಗಳು ಹರಡಿದೆ. ಈ ವಿಚಾರದಲ್ಲಿ ರಶ್ಮಿ ಮಾತ್ರ ಇನ್ನೂ ಯಾವುದೇ ರೀತಿಯಲ್ಲೂ ಸಹಾ ಪ್ರತಿಕ್ರಿಯೆಯನ್ನು ನೀಡಿಲ್ಲ.

- Advertisment -