ಗುಂಡಮ್ಮ ಖ್ಯಾತಿಯ ನಟಿ ಗೀತಾ ಅವರ ಶ್ರಮ: ವರ್ಕೌಟ್ ಮಾಡಿ ತೂಕ ಇಳಿಸಿಕೊಂಡ ನಟಿ ಈಗ ಅನೇಕರಿಗೆ ಸ್ಪೂರ್ತಿ

Entertainment Featured-Articles News

ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಬ್ರಹ್ಮಗಂಟು ಸೀರಿಯಲ್ ನ ಗುಂಡಮ್ಮ ಅಲಿಯಾಸ್ ಗೀತಾ ಪಾತ್ರಧಾರಿಯಾಗಿ ನಾಡಿನ ಜನರ ಮನಸ್ಸನ್ನು ಗೆದ್ದಿದ್ದ ನಟಿ ಗೀತಾ ಭಾರತಿ ಭಟ್ ಅವರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಕಿರುತೆರೆಯಲ್ಲಿ ಒಂದು ವಿಭಿನ್ನವಾದ ಕಥೆ, ಕಥಾನಕದ ಮೂಲಕ ಮೂಡಿ ಬಂದ ಈ ಸೀರಿಯಲ್ ನಲ್ಲಿ ಒಬ್ಬ ದೇಹ ಗಾತ್ರ ಹೆಚ್ಚಾಗಿರುವ, ಜನರಿಂದ ಹೀ ಯಾ ಳಿ ಲ್ಪಟ್ಟರೂ ಒಂದು ಯಶಸ್ಸಿನ ಜೀವನ ಕಟ್ಟಿಕೊಂಡು ಸಾಧನೆ ಮಾಡುವ ಮಹಿಳೆಯ ಪಾತ್ರದ ಮೂಲಕ ಗೀತಾ ಭಾರತಿ ಭಟ್ ಅವರು ಅನೇಕರಿಗೆ ಸ್ಪೂರ್ತಿಯನ್ನು ನೀಡಿದ್ದರು. ಗೀತಾ ಅವರು ಬ್ರಹ್ಮಗಂಟು ಮೂಲಕ ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಬ್ರಹ್ಮ ಗಂಟು ಸೀರಿಯಲ್ ನಂತರ ಗೀತಾ ಅವರು ಬಿಗ್ ಬಾಸ್ ನಲ್ಲೂ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿ, ಜನರಿಗೆ ಇನ್ನಷ್ಟು ಹತ್ತಿರವಾಗಿದ್ದರು. ನಟಿ ಗೀತಾ ಭಾರತಿ ಭಟ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಾಕಷ್ಟು ಸಕ್ರಿಯವಾಗಿದ್ದಾರೆ. ಅವರು ಶೇರ್ ಮಾಡುವ ಅಂದವಾದ ಫೋಟೋಗಳಿಗೆ ದೊಡ್ಡ ಮಟ್ಟದ ಮೆಚ್ಚುಗೆಗಳು ಸಹಾ ಹರಿದು ಬರುತ್ತವೆ. ಗೀತಾ ಅವರು ಲವ್ ಮಾಕ್ಟೇಲ್ ಮೊದಲ ಸಿನಿಮಾದಲ್ಲಿ ಒಂದು ಪಾತ್ರದಲ್ಲಿ ಸಹಾ ಕಾಣಿಸಿಕೊಂಡಿದ್ದರ. ಅನಂತರ ಒಂದು ಮ್ಯೂಸಿಕ್ ಆಲ್ಬಂ ನಲ್ಲೂ ಸಹಾ ನಟಿಸಿದ್ದರು.

ಇದಲ್ಲದೇ ಲವ್ ಮಾಕ್ಟೇಲ್ ಸಿನಿಮಾದ ತೆಲುಗು ರೀಮೇಕ್ ನಲ್ಲೂ ಸಹಾ ಗೀತಾ ಭಾರತಿ ಭಟ್ ಅವರು ನಟಿಸಿದ್ದಾರೆ. ಇನ್ನು ಇತ್ತೀಚಿಗೆ ಗೀತಾ ಅವರು ಒಂದು ಹೊಸ ವಿಷಯ ಅಥವಾ ವಿಚಾರದಿಂದಾಗಿ ಸಖತ್ ಸುದ್ದಿಯಾಗಿದ್ದಾರೆ. ಹೌದು ಗೀತಾ ಅವರು ಜಿಮ್ ಗೆ ಸೇರಿದ್ದು, ವರ್ಕೌಟ್ ಮಾಡುತ್ತಾ ಇರುವ ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು. ಟ್ರೈನರ್ ಒಬ್ಬರ ನೆರವಿನೊಂದಿಗೆ ದೇಹದ ತೂಕ ಇಳಿಸಲು, ನಿಯಮಿತವಾಗಿ ಚಾಚೂ ತಪ್ಪದೇ ವರ್ಕ್ ಔಟ್ ಮಾಡುತ್ತಾ ಗೀತಾ ಭಾರತಿ ಭಟ್ ಅವರು ಬರೋಬ್ಬರಿ 17 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

ಇತ್ತೀಚಿನ ಫೋಟೋ ಶೂಟ ನಲ್ಲಿನ ಗೀತಾ ಅವರನ್ನು ಗಮನಿಸಿದರೆ ಅವರಲ್ಲಿನ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು ಯೂಟ್ಯೂಬ್ ನಲ್ಲಿ ಗೀತಾ ಅವರು ನಾನು ಎಲ್ಲಿ ಬಟ್ಟೆಗಳನ್ನು ಖರೀದಿ ಮಾಡುತ್ತೇನೆ ಎನ್ನುವುದು, ನನ್ನ ತೂಕದ ಬಗ್ಗೆ ನನಗಿಂತ ಜನರಿಗೆ ಹೆಚ್ಚು ಆಸಕ್ತಿ ಇದೆ. ಅದಕ್ಕೆ ಗುಂಡಮ್ಮ ಸಣ್ಣಮ್ಮ ಆದರೆ ಹೇಗಿರುತ್ತದೆ ಎನ್ನುವ ಮಾತನ್ನು ಸಹಾ ಹೇಳಿಕೊಂಡಿದ್ದರು. ಇನ್ನು ಯೂಟ್ಯೂಬ್ ನಲ್ಲಿ ಸಕ್ರಿಯವಾಗಿರುವ ಅವರು ಕೆಲವು ಡಯಟ್ ಟಿಪ್ಸ್, ವ್ಯಾಯಾಮದ ಟಿಪ್ಸ್ ಗಳನ್ನು ಗೀತಾ ಅವರು ಆಗಾಗ ನೀಡುತ್ತಲೇ ಇರುತ್ತಾರೆ.

Leave a Reply

Your email address will not be published.