ಗಾಯದ ಮೇಲೆ ಬರೆ ಎಳೆದ ವಿಧಿ: ನಾಗ ಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರ ತಾಯಿ ವಿಧಿವಶ

0 0

ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರು ಕಳೆದ ಕೆಲವು ತಿಂಗಳುಗಳಿಂದ ಕೂಡಾ ವೀಡಿಯೋಗಳನ್ನು ಮಾಡುವ ಮೂಲಕ ಅದನ್ನು ಶೇರ್ ಮಾಡಿಕೊಂಡು, ತಮ್ಮ ಪರಿಸ್ಥಿತಿಯ ಬಗ್ಗೆ, ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತಾಗಿ ಹೇಳಿಕೊಳ್ಳುತ್ತಿದ್ದರು. ಅದು ಮಾತ್ರವೇ ಅಲ್ಲದೇ ತನಗೆ ಯಾರಿಂದಲೂ ಸಹಾಯ ಕೂಡಾ ಸಿಗುತ್ತಿಲ್ಲವೆಂದು ಅಲವತ್ತುಕೊಂಡು, ದಯವಿಟ್ಟು ಸಹಾಯವನ್ನು ನೀಡಿರೆಂದು ಮನವಿಗಳನ್ನು ಮಾಡಿಕೊಳ್ಳುತ್ತಿದ್ದರು. ಎಲ್ಲೆಲ್ಲೂ ನಟಿ ವಿಜಯಲಕ್ಷ್ಮಿ ಅವರ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು.

ವಿಜಯಲಕ್ಷ್ಮಿ ಅವರ ವೀಡಿಯೋ ನೋಡಿ ಕೆಲವರು ಮರುಕ ಪಟ್ಟರೆ, ಇನ್ನೂ ಕೆಲವರು ಅಸಮಾಧಾನ ಹೊರ ಹಾಕುತ್ತಿದ್ದರು. ಈಗಾಗಲೇ ಸಾಕಷ್ಟು ಸಮಸ್ಯೆಗಳಿಂದ ಜರ್ಜರಿತನಾಗಿದ್ದೇನೆ ಎಂದು ನೋವನ್ನು ಹೇಳಿಕೊಳ್ಳುತ್ತಿದ್ದ ವಿಜಯಲಕ್ಷ್ಮಿ ಅವರಿಗೆ ಇಂದು ಮತ್ತೊಂದು ನೋವು ಎದುರಾಗಿದೆ‌. ಈ ಅನಿರೀಕ್ಷಿತವಾದ ಆ ಘಾ ತವು ವಿಜಯಲಕ್ಷ್ಮಿ ಅವರಿಗೆ ಶಾಕ್ ನೀಡಿದೆ‌.

ಹೌದು ನಟಿ ವಿಜಯಲಕ್ಷ್ಮಿ ಅವರ ತಾಯಿ ವಿಜಯ ಸುಂದರಂ ಅವರು ಇಂದು ನಿಧನರಾಗಿದ್ದಾರೆ. ಕಾರವಾರದಲ್ಲಿ ಅಭಿಮಾನಿಯೊಬ್ಬರು ನೀಡಿದ್ದ ಮನೆಯಿಂದ ಬೆಂಗಳೂರಿಗೆ ಬಂದಿದ್ದ ವಿಜಯಲಕ್ಷ್ಮಿ ಅವರು ಬೆಂಗಳೂರಿನ ಗಾಂಧಿ ನಗರದಲ್ಲಿರುವ ಸಂತೃಪ್ತಿ ರೆಸೆಡೆನ್ಸಿಯಲ್ಲಿ ಅಕ್ಕ, ಮತ್ತು ತಾಯಿಯೊಡನೆ ತಂಗಿದ್ದರು. ಆದರೆ ತಾಯಿಯ ದಿಢೀರ್ ಅಗಲಿಕೆ ಅವರಲ್ಲಿ ಒಂದು ಆ ತಂ ಕವನ್ನು ಮೂಡಿಸಿದೆ.

ಇಂದು ನಟಿ ಚೆನ್ನೈ ಗೆ ವಾಪಸಾಗಲು ನಿರ್ಧಾರ ಮಾಡಿದ್ದರು ಎನ್ನಲಾಗಿತ್ತು. ಆದರೆ ತಾಯಿಯ ಅನಿರೀಕ್ಷಿತ ಅಗಲಿಕೆ ಈಗ ವಿಜಯಲಕ್ಷ್ಮಿ ಅವರಿಗೆ ದಿಕ್ಕು ತೋಚದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ವಿಷಯ ತಿಳಿದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ಅವರಾದ ಭಾ.ಮಾ.ಹರೀಶ್ ಅವರು ಹೋಟೇಲ್ ಗೆ ತೆರಳಿ ವಿಜಯಲಕ್ಷ್ಮಿ ಅವರಿಗೆ ಸಾಂತ್ವನ ಹೇಳಿದ್ದಾರೆ.

ತಾಯಿಯ ಅಗಲಿಕೆ ನೋಡಿ ಶಾ ಕ್ ಆಯಿತು. ಕೂಡಲೇ ಭಾ.ಮಾ.ಹರೀಶ್ ಅವರಿಗೆ ತಿಳಿಸಿದೆ. ಅವರು ಕೂಡಲೇ ಬಂದು ಸಹಾಯವನ್ನು ಮಾಡ್ತಾ ಇದ್ದಾರೆ. ನೀವೆಲ್ಲಾ ಇದ್ದೀರಿ , ನಾನು ಧೈರ್ಯವಾಗಿ ಇರುತ್ತೇನೆ, ಮಾದ್ಯಮದವರ ಸಹಾಯ ಬೇಕು ಎಂದು ವಿಜಯಲಕ್ಷ್ಮಿ ಅವರು ಮಾದ್ಯಮವೊಂದಕ್ಕೆ ತಿಳಿಸಿದ್ದಾರೆ. ವಿಜಯಲಕ್ಷ್ಮಿ ಅವರಿಗೆ ಅವರ ತಾಯಿಯನ್ನು ಕಳೆದುಕೊಂಡ ಈ ಸಂದರ್ಭದಲ್ಲಿ ಪರಿಸ್ಥಿತಿ ಎದುರಿಸುವ ಧೈರ್ಯವನ್ನು ನೀಡಲೆಂದು ಪ್ರಾರ್ಥಿಸೋಣ.

Leave A Reply

Your email address will not be published.