ಗಾಯದ ಮೇಲೆ ಬರೆ ಎಳೆದ ವಿಧಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಪಿತೃ ವಿಯೋಗ

Entertainment Featured-Articles News

ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಎನ್ನುವುದು ನಾಡಿನ ಜನರಿಗೆ ಇಂದಿಗೂ ಕಾಡುವ ಒಂದು ಕಹಿ ನೆನಪು, ಆ ನೆನಪಿನಿಂದ ಅವರ ಅಭಿಮಾನಿಗಳಿಗೆ ಇನ್ನೂ ಹೊರ ಬರುವುದು ಸಾಧ್ಯವಾಗಿಲ್ಲ. ಅಂತಹುದರಲ್ಲಿ ಅವರ ಮನೆಯವರ ಪರಿಸ್ಥಿತಿ ಹೇಗೆ ಇರಬಹುದು ಎನ್ನುವುದನ್ನು ನಾವು ಊಹಿಸಬಹುದು. ಅಪ್ಪು ಅವರ ಅಗಲಿಕೆಯ ನಂತರ ಅವರು ಮಾಡಿದ ಒಂದೊಂದು ಸಮಾಜ ಮುಖಿ ಕೆಲಸವು ಬಹಿರಂಗವಾದಾಗ ಸಹಜವಾಗಿಯೇ ಅವರ ಬಗ್ಗೆ ಪ್ರತಿಯೊಬ್ಬರಿಗೂ ಗೌರವ, ಅಭಿಮಾನ ಮೂಡಿತ್ತು. ಅವರ ಬಗ್ಗೆ ಭಾವುಕಾದವರು ಅಸಂಖ್ಯಾತ ಮಂದಿ.

ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪತಿಯು ಹೀಗೆ ತಮ್ಮನ್ನು ಬಿಟ್ಟು ಹೋಗಿದ್ದರಿಂದ ತೀವ್ರ ಆ ಘಾ ತ ಕ್ಕೆ ಒಳಗಾಗಿದ್ದರು. ಪುನೀತ್ ಅವರ ಅಗಲಿಕೆ ಎನ್ನುವುದು ಅವರ ಜೀವನದಲ್ಲಿ ಅನಿರೀಕ್ಷಿತವಾಗಿ ಬಂದೆರಗಿದ ಸಿಡಿಲಾಗಿತ್ತು. ಹೀಗೆ ಕೆಲವೇ ತಿಂಗಳುಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಅಶ್ವಿನಿ ಅವರು ಇನ್ನೂ ಆ ನೋವಿನಿಂದ ಹೊರಗೆ ಬರದ ಸ್ಥಿತಿಯಲ್ಲಿ ಇರುವಾಗಲೇ ಅವರ ಜೀವನದಲ್ಲಿ ಈಗ ಮತ್ತೊಂದು ನೋವು ಎದುರಾಗಿದೆ. ಹೌದು, ಪತಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ಅಶ್ವಿನಿ ಅವರಿಗೆ ಈಗ ಪಿತೃವಿಯೋಗ ಉಂಟಾಗಿದೆ.

ಅಶ್ವಿನಿ ಅವರ ತಂದೆ 78 ವರ್ಷ ವಯಸ್ಸಿನ ಭಾಗಮನೆ ರೇವನಾಥ್ ಅವರು ಭಾನುವಾರ ನಿಧನರಾಗಿದ್ದು, ಅಶ್ವಿನಿ ಅವರಿಗೆ ಮತ್ತೊಂದು ವೇದನೆ ಮೂಡಿಸಿದೆ. ರೇವನಾಥ್ ಅವರಿಗೆ ಹೃದಯಾಘಾತವಾಗಿತ್ತು ಎಂದು ತಿಳಿದುಬಂದಿದೆ. ಅವರಿಗೆ ಹೃದಯಾಘಾತವಾದ ಕೂಡಲೇ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ರೇವನಾಥ್ ಅವರು ಕಣ್ಮುಚ್ಚಿದ್ದಾರೆ. ಅವರು ಮೂಲತಃ ಚಿಕ್ಕಮಗಳೂರಿನವರು.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 20 ವರ್ಷಗಳ ಹಿಂದೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು ಎನ್ನಲಾಗಿದೆ. ಅಲ್ಲದೇ ಅಪ್ಪು ಅವರ ಅಗಲಿಕೆಯ ನಂತರ ಮಗಳ ಜೊತೆಯಲ್ಲೇ ಸದಾಶಿವ ನಗರದ ಮನೆಯಲ್ಲಿದ್ದರು. ರೇವನಾಥ್ ಅವರು ಪುನೀತ್ ರಾಜಕುಮಾರ್ ಅವರ ನಿಧನದ ನಂತರ ಬಹಳ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದ್ದಿ ಆರೋಗ್ಯದಲ್ಲಿ ದಿಢೀರ್ ವ್ಯತ್ಯಾಸ ವಾದ ಕಾರಣ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ನಿಧನರಾಗಿದ್ದಾರೆ.‌

Leave a Reply

Your email address will not be published. Required fields are marked *