ಗಾಯಗೊಂಡ ನಿರೂಪ್ ಭಂಡಾರಿ ಫೋಟೋ ಶೇರ್ ಮಾಡಿ ಜನ್ಮದಿನಕ್ಕೆ ಭಾವನಾತ್ಮಕ ವಿಶ್ ಮಾಡಿದ ಅನೂಪ್ ಭಂಡಾರಿ

Entertainment Featured-Articles Movies News
32 Views

ಕನ್ನಡ ಚಿತ್ರರಂಗದಲ್ಲಿ ರಂಗಿ ತರಂಗ ಸಿನಿಮಾದ ಮೂಲಕ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದ ನಟ ನಿರೂಪ್ ಭಂಡಾರಿಯವರು. ಮೊದಲ ಸಿನಿಮಾದ ಮೂಲಕವೇ ಸಾಕಷ್ಟು ಹೆಸರನ್ನು ಹಾಗೂ ಪ್ರತಿಭಾವಂತ ನಟ ಎನ್ನುವ ಮೆಚ್ಚುಗೆಯನ್ನು ಅವರು ಪಡೆದುಕೊಂಡರು. ನಟ ನಿರೂಪ್ ಭಂಡಾರಿಯವರು ಇಂದು ತಮ್ಮ 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಹೌದು ಇಂದು ನಿರೂಪ್ ಭಂಡಾರಿಯವರ ಜನ್ಮದಿನ. ಈ ವಿಶೇಷ ದಿನದಂದು ನಟನಿಗೆ ಅವರ ಅಭಿಮಾನಿಗಳು, ಸ್ನೇಹಿತರು ಹಾಗೂ ಸಿನಿಮಾ ರಂಗದವರು ಶುಭಾಶಯವನ್ನು ಕೋರಿದ್ದಾರೆ. ಈ ವೇಳೆ ನಿರೂಪ್ ಭಂಡಾರಿ ಅವರ ಸಹೋದರ ನಿರ್ದೇಶಕ ಅನೂಪ್ ಭಂಡಾರಿ ಬಹಳ ವಿಭಿನ್ನವಾಗಿ ಶುಭಾಶಯ ತಿಳಿಸಿದ್ದಾರೆ.

ನಟ ನಿರೂಪ್ ಭಂಡಾರಿ ಅವರಿಗೆ ಅನುಪ್ ಭಂಡಾರಿ ಅವರು ಸಹೋದರ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಇಬ್ಬರೂ ಸಹೋದರರು ಸಹಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇನ್ನು ಇಂದು ಸಹೋದರನ ಜನ್ನದಿನದ ಹಿನ್ನೆಲೆಯಲ್ಲಿ ಅನೂಪ್ ಭಂಡಾರಿ ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅನೂಪ್ ಅವರ ಮೈ ಎಲ್ಲಾ ಗಾಯಗಳಾಗಿರುವಂತಹ ಫೋಟೋಗಳನ್ನು ಹಂಚಿಕೊಂಡು ತಮ್ಮ ಸಹೋದರನ ಕುರಿತಾಗಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡು ಜನ್ನದಿನದ ಶುಭಾಶಯವನ್ನು ಕೋರಿದ್ದಾರೆ.

ಅನೂಪ್ ಅವರು ನಿರೂಪ್ ಅವರು ಗಾಯಗೊಂಡಿರುವ ಫೋಟೋಗಳನ್ನು ಶೇರ್ ಮಾಡಿ, ರಂಗಿತರಂಗದಲ್ಲಿ ಬಹುತೇಕ ಒಡೆದ ತಲೆಬುರುಡೆ, ರಾಜರಥದಲ್ಲಿ ಮುರಿದ ಕೈ ಮತ್ತು ವಿಕ್ರಾಂತ್‌ರೋಣದಲ್ಲಿ ಅನೇಕ ಗಾಯಗಳಾಗಿವೆ. ಅವರು ಯಾವಾಗಲೂ ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾಗಳಿಗೆ ಒತ್ತು ನೀಡುತ್ತಾನೆ. ಜನ್ಮದಿನದ ಶುಭಾಶಯಗಳು. ನಿನ್ನ ಸಮರ್ಪಣಾಭಾವ ನಿನ್ನನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಬರೆದು ಕೊಂಡು ಸಹೋದರನ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯವನ್ನು ಕೋರಿದ್ದಾರೆ.

Leave a Reply

Your email address will not be published. Required fields are marked *