ಗಾನ ಪ್ರತಿಭೆ ಸೂರ್ಯಕಾಂತ್ ಗೆ ಮರೆಯಲಾರದ ಉಡುಗೊರೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ: ಏನು ಆ ಉಡುಗೊರೆ??

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಗಳಿದ್ದರೂ ಸಹಾ ಆರು ವರ್ಷಗಳ ಹಿಂದೆ ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸಾರಥ್ಯದಲ್ಲಿ ಪ್ರಸಾರವಾಗುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಸಂಗೀತ ಪ್ರಿಯರು ಮರೆತಿಲ್ಲ. ಎಸ್ ಪಿ ಬಿ ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಮಾನಸಿಕವಾಗಿ ಅವರು ಸಂಗೀತಪ್ರಿಯರ ಮನಸ್ಸು ಗಳಲ್ಲಿ ನೆಲೆಸಿದ್ದಾರೆ. ಆರು ವರ್ಷಗಳ ನಂತರ ಕಿರುತೆರೆಯಲ್ಲಿ ಮತ್ತೊಮ್ಮೆ ಮೂವರು ಸಂಗೀತ ದಿಗ್ಗಜರ ಸಾರಥ್ಯದಲ್ಲಿ ಮೂಡಿ ಬರುತ್ತಿದೆ.

ಇನ್ನು ಈ ಬಾರಿ ಈ ಶೋನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ ಕಲ್ಬುರ್ಗಿ ಜಿಲ್ಲೆಯಿಂದ ಬಂದಿರುವ ಸೂರ್ಯಕಾಂತ್ ಅವರು. ಹೌದು ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡ್ಡದಲಿಂಗನ ಹಳ್ಳಿಯ ಒಂದು ಕಡು ಬಡತನದ ಕುಟುಂಬದಿಂದ ಬಂದಿರುವ ಪ್ರತಿಭಾವಂತ ಗಾಯಕ ಸೂರ್ಯಕಾಂತ್. ಸೂರ್ಯಕಾಂತ್ ಅವರಿಗೆ ಮಾತನಾಡಲು ತೊದಲಿನ ಸಮಸ್ಯೆ ಇದೆ. ಆದರೆ ಇದು ಅವರ ಹಾಡಿಗೆ ಅಡ್ಡಿಯಾಗಿಲ್ಲ.

ಮಾತು ಸೂರ್ಯಕಾಂತ್ ಅವರ ಕೈ ಹಿಡಿದಿಲ್ಲವಾದರೂ, ಹಾಡು, ಸಂಗೀತ ಎನ್ನುವುದರಲ್ಲಿ ಅಡಗಿರುವ ಶಕ್ತಿ ಇಂದು ಅವರ ಕೈ ಹಿಡಿದಿದ್ದು, ನಾಡಿನ ಜನರ ಅಪಾರ ಮೆಚ್ಚುಗೆಯನ್ನು ಪಡೆಯುವಂತಾಗಿದೆ‌. ಅಲ್ಲದೇ ಸೂರ್ಯಕಾಂತ್ ಅವರ ಗಾಯನ ಪ್ರತಿಭೆಯನ್ನು ನೋಡಿ ಶೋ ನ ಜಡ್ಜ್ ಗಳು ಹಾಗೂ ಪ್ರೇಕ್ಷಕರು ಕೂಡಾ ಭಾವುಕರಾಗುವುದುಂಟು. ಇಂತಹ ಗಾಯಕ ಇತ್ತೀಚಿಗೆ ತಮ್ಮ ಗ್ರಾಮದ ಸಮಸ್ಯೆ ಒಂದರ ಕುರಿತು ವೇದಿಕೆ ಮೇಲೆ ಮಾಹಿತಿ ಹಂಚಿಕೊಂಡಿದ್ದರು.

ಸೂರ್ಯಕಾಂತ್ ಅವರ ಗ್ರಾಮವಾದ ಗಡ್ಡಲಿಂಗದ ಹಳ್ಳಿಗೆ ಕಳೆದ 29 ವರ್ಷಗಳಿಂದ ಸರ್ಕಾರಿ ಬಸ್ ನ ಸೌಲಭ್ಯ ಇಲ್ಲ, ಅಲ್ಲದೇ ಎಷ್ಟೇ ಮನವಿಗಳು, ಹೋರಾಟದ ನಂತರವೂ ಸಹಾ ಗ್ರಾಮಕ್ಕೆ ಬಸ್ ಬರಲು ಸರ್ಕಾರ ಗಮನವನ್ನು ನೀಡಲೇ ಇಲ್ಲ. ಇದರಿಂದ ಸಾಮಾನ್ಯ ಜನರಿಗೆ ಎಷ್ಟು ಸಮಸ್ಯೆಗಳಾಗಿದೆ ಎಂಬುದನ್ನು ವಿವರಿಸಿ ನೋವು ತೋಡಿಕೊಂಡು, ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.

ಸೂರ್ಯಕಾಂತ್ ಅವರ ಈ ಮನವಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿದ್ದಾರೆ. ಅಲ್ಲದೇ ಗಡ್ಡದಲಿಂಗದ ಹಳ್ಳಿಗೆ ಬಸ್ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ. ಅದು ಮಾತ್ರವೇ ಅಲ್ಲದೇ ಮುಖ್ಯಮಂತ್ರಿ ಅವರು ಸೂರ್ಯಕಾಂತ್ ಅವರ ಪ್ರತಿಭೆಯನ್ನು ಹೊಗಳಿದ್ದು, ನಮ್ಮ ಹುಡುಗ, ಕರ್ನಾಟಕ ಜನತೆ ಸೇರಿ ನಾವು ಅವರ ಅಭಿಮಾನಿ, ಚೆನ್ನಾಗಿ ಹಾಡು ಹಾಡುತ್ತಾರೆ” ಎಂದಿದ್ದಾರೆ.

ಸೂರ್ಯಕಾಂತ್ ಅವರಿಗೆ ಅವರ ಊರಿನಿಂದ ಫೋನ್ ಕರೆ ಮಾಡಿ ಊರಿಗೆ ಬಸ್ ಬಂದಿರುವ ವಿಷಯ ತಿಳಿಸಿದಾಗ ಸೂರ್ಯಕಾಂತ್ ಅವರು ಅದನ್ನು ಕೇಳಿ ತನಗೆ ಹಾಲು ಕುಡಿದಷ್ಟು ಸಂತೋಷವಾಗಿದೆ ಎನ್ನುತ್ತಾ, ಮುಖ್ಯಮಂತ್ರಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಎದೆ ತುಂಬಿ ಹಾಡುವೆನು ಶೋ ಜಡ್ಜ್ ಗಳು ಸಹಾ ಮುಖ್ಯಮಂತ್ರಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Leave a Comment