ಗರ್ಲ್ ಫ್ರೆಂಡ್ ಮಾಡಿಕೊಳ್ಳೋದು ಹೇಗೆ? ಕೋಚಿಂಗ್ ಕೊಡ್ತಾಳೆ ಈ ಮಾಡೆಲ್: ಆದ್ರೆ ಫೀಸು ಎಷ್ಟು ಗೊತ್ತಾ??

Entertainment Featured-Articles News

ಮೊನ್ನೆ ಮೊನ್ನೆಯಷ್ಟೇ ವ್ಯಾಲಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನ ಮುಗಿದಿದೆ. ಇನ್ನು ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಜೋಡಿಗಳು ಪರಸ್ಪರ ಭರ್ಜರಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಶುಭಾಶಯವನ್ನು ಹಂಚಿಕೊಂಡು ಬಹಳ ಖುಷಿಯಿಂದ ಪ್ರೇಮಿಗಳ ದಿನವನ್ನು ಸಂಭ್ರಮಿಸಿದ್ದಾರೆ.‌ ಮತ್ತೆ ಕೆಲವರು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ಆದರೆ ಇವೆಲ್ಲವುಗಳ ನಡುವೆಯೇ ಕೆಲವರು ಅಂದರೆ ಸಿಂಗಲ್ ಆಗಿದ್ದವರಿಗೆ ಮಾತ್ರ ಇದೆಲ್ಲವೂ ಬೇಸರವನ್ನು ಮೂಡಿಸಿದೆ. ತಮಗೂ ಗರ್ಲ್ ಫ್ರೆಂಡ್ ಇದ್ದಿದ್ದರೆ ಎಂದು ಆಲೋಚಿಸಿದ್ದಾರೆ.

ಅಲ್ಲದೇ ಹೀಗೆ ಗರ್ಲ್ ಫ್ರೆಂಡ್ ಇಲ್ಲದೇ ಬೇಸರ ಹೊರಹಾಕುವವರಿಗೆ ಕೆಲವೊಮ್ಮೆ ಕೆಲವರು ತಮಾಷೆ ಮಾಡುತ್ತಾ ಈ ವಿಚಾರದಲ್ಲಿ ನೀನು ಫ್ಯೂಷನ್ ತಗೋಬೇಕು ಎನ್ನುವ ಮಾತನ್ನು ಸಹಾ ಹೇಳುವುದುಂಟು. ಆದರೆ ಇಂತಹ ಟ್ಯೂಷನ್ ಸಿಗುತ್ತೆ ಎಂದು ನಾವೇನಾದರೂ ಹೇಳಿದರೆ ಅಂದರೆ‌ ಹುಡುಗಿಯನ್ನು ಪಟಾಯಿಸುವುದು ಹೇಗೆ ಎನ್ನುವ ಟ್ಯೂಷನ್ ಸಿಗುತ್ತದೆ ಎಂದರೆ, ನೀವು ಹೇ, ಇದೆಲ್ಲಾ ಸುಳ್ಳು ಅನ್ನಬಹುದು. ಆದರೆ ಈ ವಿಷಯ ಓದಿದ ಮೇಲೆ ಖಂಡಿತ ನೀವು ಇದನ್ನು ಒಪ್ಪಲೇಬೇಕಾಗುತ್ತದೆ.

ಬ್ರಿಟಿಷ್ ಮಾಡೆಲ್ ಒಬ್ಬಾಕೆ ಹುಡುಗಿಯರನ್ನು ಪಟಾಯಿಸುವುದು ಹೇಗೆ? ಎನ್ನುವ ತರಬೇತಿಯನ್ನು ಹುಡುಗರಿಗೆ ನೀಡುವ ಕೆಲಸವನ್ನು ಮಾಡುತ್ತಿದ್ದಾಳೆ. ಅಲ್ಲದೇ ಆಕೆ ಯುವಕರಿಗೆ ಯುವತಿಯರ ಮನಸ್ಸನ್ನು ಗೆಲ್ಲಲು ಏನೆಲ್ಲಾ ಮಾಡಬೇಕು ಎನ್ನುವುದನ್ನು ತಿಳಿಸಿ, ತರಬೇತಿಯನ್ನು ನೀಡುವುದಕ್ಕೆ ನಿಗಧಿತ ಶುಲ್ಕವನ್ನು ಸಹಾ ನಿಗಧಿ ಮಾಡಿದ್ದಾಳೆ. ಹೌದು ಯುವಕರಿಗೆ ಇಂತಹ ಪ್ರೇಮ ಪಾಠವನ್ನು ಮಾಡುವ ಈ ಮಾಡೆಲ್ ಹೆಸರು ಕೆಜಿಯಾ ನೊಬೆಲ್ ಎನ್ನಲಾಗಿದೆ. ಈಕೆ ಡೇಟಿಂಗ್ ಮತ್ತು ಅಟ್ರಾಕ್ಷನ್ ಬಗ್ಗೆ ಕ್ಲಾಸ್ ಮಾಡುತ್ತಾರೆ.

ದಿ ಸನ್ ವರದಿಯ ಪ್ರಕಾರ ಕೆಜಿಯಾ ತನ್ನ 15 ನೆಯ ವಯಸ್ಸಿನಲ್ಲೇ ಶಿಕ್ಷಣಕ್ಕೆ ಬೈ ಬೈ ಹೇಳಿದಳು. ಅನಂತರ ಈ ರೀತಿ ಆಕೆ ತಾನು ಮಾಡುವ ಕೆಲಸವನ್ನು ಹೆಚ್ಚು ಎಂಜಾಯ್ ಮಾಡುತ್ತಿದ್ದು, ಲವ್ ಟ್ರೈನಿಂಗ್ ನೀಡುವ ಮೂಲಕ ಭರ್ಜರಿ ಹಣವನ್ನು ಗಳಿಸುತ್ತಿರುವುದಾಗಿಯೂ ಸಹಾ ವರದಿ ಮಾಡಿದೆ ಪತ್ರಿಕೆ. 2006 ರಲ್ಲಿ ಲಂಡನ್ ನ ಒಂದು ಬಾರ್ ನಲ್ಲಿ ಕುಳಿತಿದ್ದ ವೇಳೆಯಲ್ಲಿ ಕೆಜಿಯಾಗೆ ಇದ್ದಕ್ಕಿದ್ದಂತೆ ಇಂತಹುದೊಂದು ಐಡಿಯಾ ಬಂದಿತು ಎನ್ನಲಾಗಿದೆ. ‌ಆಗ ಆಕೆಯ ವಯಸ್ಸು 25 ಆಗಿತ್ತು.

ಆಕೆ ಬಾರ್ ನಲ್ಲಿ ಕುಳಿತಿದ್ದಾಗ ಒಂದು ಬೂಟ್ ಕ್ಯಾಂಪ್ ನ ಭಾಗವಾಗಿದ್ದ ವ್ಯಕ್ತಿಯೊಬ್ಬರು ಬಂದು,‌ ಸಿಂಗಲ್ ಹುಡುಗರಿಗೆ ಹುಡುಗಿಯರ ಜೊತೆ ಚಾಟ್ ಮಾಡೋದಕ್ಕೆ ಸ್ಪಲ್ಪ ಫೀಡ್ ಬ್ಯಾಕ್ ಕೊಡುವಿರಾ ಎಂದು ಕೇಳಿದ್ದರಂತೆ. ಆಗಲೇ ಕೆಜಿಯಾ ಗೆ ಪರ್ಸನಲ್ ಡೆವಲಪ್ಮೆಂಟ್ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ ಎನ್ನುವುದು ತಿಳಿಯಿತಂತೆ. ಆಗ ಕೆಜಿಯಾಗೆ ತಾನೇ ಏಕೆ ಈ ಹೊಸ ಬ್ಯುಸಿನೆಸ್ ಆರಂಭ ಮಾಡಬಾರದು ಎನ್ನುವ ಆಲೋಚನೆ ಮೂಡಿತ್ತು.

ಈ ಆಲೋಚನೆ ಬಂದ ಮೇಲೆ ಆಕೆ ಅದನ್ನು ಆರಂಭಿಸಿದಳು. ಕೆಜಿಯಾ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಸಹಾ ಹೊಂದಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಆಕೆಗೆ ದೊಡ್ಡ ಹಿಂಬಾಲಕರ ಬಳಗವೇ ಇರುವುದು ವಿಶೇಷ. ಇನ್ನು ಕೆಜಿಯಾ ಒಂದು ಗಂಟೆ ಕೋಚಿಂಗ್ ಗೆ 30 ಸಾವಿರ ರೂ. ಗಳ‌ ಶುಲ್ಕ ಪಡೆಯುತ್ತಾರೆ ಎನ್ನಲಾಗಿದೆ. ಲವ್ ಟ್ರೈನಿಂಗ್ ಸ್ವಲ್ಪ ದುಬಾರಿಯೇ ಆದರೂ ಈಕೆಯ ಕೋಚಿಂಗ್ ಗೆ ಬಲು ಬೇಡಿಕೆಯೂ ಇದೆಯಂತೆ.

Leave a Reply

Your email address will not be published.