ಗರ್ಭಿಣಿ ನಟಿ ಕಾಜಲ್ ಅಗರ್ವಾಲ್ ಟ್ರೋಲಿಂಗ್: ಬೆಂಬಲಕ್ಕೆ ನಿಂತರು ಸ್ಟಾರ್ ನಟಿಯರು

Entertainment Featured-Articles News
33 Views

ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಕಾಜಲ್ ಅಗರ್ವಾಲ್ ತಮ್ಮ ಖಾಸಗಿ ಜೀವನದಲ್ಲಿ, ತಮ್ಮ ಜೀವನದ ಬಹಳ ಶ್ರೇಷ್ಠವಾದ ಘಟ್ಟಕ್ಕೆ ಪ್ರವೇಶ ಮಾಡಿದ್ದಾರೆ. ಕಾಜಲ್ ಅಗರ್ವಾಲ್ ಅವರು ತಾಯಿಯಾಗಲಿದ್ದಾರೆ. ತಾಯಿ ಆಗುವ ಸಂಭ್ರಮದಲ್ಲಿ ಇರುವ ಕಾಜಲ್ ಅಗರ್ವಾಲ್ ಅವರು ಇತ್ತೀಚಿಗೆ ತಮ್ಮ ಪತಿ ಗೌತಮ್ ಕಿಚ್ಲು ಜೊತೆಗೆ ಫೋಟೋ ಶೂಟ್ ಒಂದನ್ನು ಮಾಡಿಸಿದ್ದರು. ಏಳು ತಿಂಗಳ ಗರ್ಭಿಣಿಯಾಗಿರುವ ಕಾಜಲ್ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ತಮ್ಮ ಸಂಭ್ರಮವನ್ನು ಎಲ್ಲರ ಜೊತೆ ಹಂಚಿಕೊಂಡಿದ್ದರು.

ಕಾಜಲ್ ಅಗರ್ವಾಲ್ ಅವರು ಶೇರ್ ಮಾಡಿಕೊಂಡ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ಖುಷಿ ಪಟ್ಟರು. ಅಲ್ಲದೇ ನಟಿಯ ಹೃದಯ ಪೂರ್ವಕವಾಗಿ ಶುಭ ಹಾರೈಸಿದರು. ಆದರೆ ಇದೇ ವೇಳೆ ಕೆಲವರು ನಟಿಯ ದೇಹದ ಆಕಾರದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ನಟಿ ಕಾಜಲ್ ಅಗರ್ವಾಲ್ ಅವರ ಬಾಡಿ ಶೇ ಮಿಂ ಗ್ ಮಾಡಲಾಯಿತು. ಈ ವಿಚಾರವು ದೊಡ್ಡ ಮಟ್ಟದ ಸುದ್ದಿ ಕೂಡಾ ಆಯಿತು. ಕಾಜಲ್ ಅಗರ್ವಾಲ್ ಅವರ ಸಂಭ್ರಮಕ್ಕೆ ಕೆಲವರು ಅಸೂಯೆಯಿಂದ ಮನಸ್ಸಿಗೆ ಬಂದ ಹಾಗೆ ನಟಿಯನ್ನು ಟ್ರೋಲ್ ಮಾಡಿದ್ದರು.

ಹೀಗೆ ತನ್ನ ಗರ್ಭಾವಸ್ಥೆಯ ದೇಹವನ್ನು ಕುರಿತು ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ನಟಿ ಕಾಜಲ್ ಅಗರ್ವಾಲ್ ಉತ್ತರ ನೀಡಿದ್ದು ಉಂಟು, ಅವರು ತಮ್ಮ ಪೋಸ್ಟ್ ನಲ್ಲಿ, “ನನ್ನ ಜೀವನದಲ್ಲಿ, ಶರೀರದಲ್ಲಿ, ಮನೆಯಲ್ಲಿ, ಕೆಲಸ ಮಾಡುವಲ್ಲಿ, ಅದ್ಭುತವಾದ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ, ಅವೆಲ್ಲವನ್ನೂ ನಾನು ಆನಂದಿಸುತ್ತಿದ್ದೇನೆ. ಈ ಸಮಯದಲ್ಲಿ ಬಾಡಿ ಶೇ ಮಿಂ ಗ್, ಮೀಮ್ಸ್ ಗಳಿಂದ ನನಗೇ ಆಗಲೀ, ನಿಮಗೆ ಆಗಲೀ ಪ್ರಯೋಜನ ಇಲ್ಲ. ಕಷ್ಟ ಎನಿಸಿದರೂ ಕೂಡಾ ಮುಂದೆ ದಯೆ ಎಂದರೇನು ಎಂದು ತಿಳಿದು ಬದುಕಿರಿ. ನೀವು ಬದುಕಿ, ಇತರರನ್ನು ಬದುಕಲಿ ಬಿಡಿ ಎಂದು ಬರೆದುಕೊಂಡಿದ್ದರು.”

ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ಬಹಳ ಶುದ್ಧವಾದ ಭಾಷೆಯಲ್ಲಿಯೇ ಯಾವುದೇ ಕೋ ಪ ಅಥವಾ ಆ ವೇಶ ಗಳನ್ನು ಹೊರ ಹಾಕದೇ ನಟಿ ಕಾಜಲ್ ಅಗರ್ವಾಲ್ ಉತ್ತರ ನೀಡಿದ್ದು ಅವರ ಅಭಿಮಾನಿಗಳು ಹಾಗೂ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೇ ಕಾಜಲ್ ಅಗರ್ವಾಲ್ ಮಾಡಿದ ಈ ಟ್ವೀಟ್ ನೋಡಿದ ನಟಿಯರು ಸಹಾ ಪ್ರತಿಕ್ರಿಯೆ ನೀಡಿ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ, ಕೆಲವು ನಟಿಯರು ಲವ್ ಇಮೋಜಿಗಳನ್ನು ಹಾಕುವ ಮೂಲಕ ಕಾಜಲ್ ಅಗರ್ವಾಲ್ ಅವರ ಮಾತಿಗೆ ಸ್ಪಂದಿಸಿ ಬೆಂಬಲ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಜಲ್ ಮಾಡಿದ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿ ಹೊಗಳಿದ ಸ್ಟಾರ್ ನಟಿ ಸಮಂತಾ, “ನೀನು ಅಂದು, ಇಂದು, ಯಾವಾಗಲೂ ಕೂಡಾ ಅಂದವಾಗಿಯೇ ಇರುವೆ” ಎಂದು ಕಾಮೆಂಟ್ ಮಾಡಿ ಲವ್ ಇಮೋಜಿ ಹಾಕಿದ್ದಾರೆ. ನಟಿ ಮಂಚು ಲಕ್ಷ್ಮೀ ತಮ್ಮ ಕಾಮೆಂಟ್ ನಲ್ಲಿ, “ನೀನು ಪ್ರತಿ ಹಂತದಲ್ಲಿ ಸಹಾ ಪರ್ಫೆಕ್ಟ್ ಆಗಿರುವೆ, ನಿನ್ನ ಸುತ್ತಾ ಬಹಳ ಪ್ರೀತಿಯಿದೆ ಬೇಬಿ” ಎಂದು ಹೇಳಿದ್ದಾರೆ. ಇನ್ನು ನಟಿ ಹನ್ಸಿಕಾ ಮತ್ತು ರಾಶಿ ಖನ್ನಾ ಲವ್ ಇಮೋಜಿ ಹಾಕಿ ಮೆಚ್ಚುಗೆಯನ್ನು ನೀಡಿದ್ದಾರೆ. ಕಾಜಲ್ ಅವರ ತಂಗಿ ನಿಷಾ ಕಾಮೆಂಟ್ ಮಾಡಿ, ಇದಕ್ಕಿಂತ ಹೆಚ್ಚಿಗೆ ಏನೂ ಹೇಳಲು ಸಾಧ್ಯವಿಲ್ಲ, ಆಕೆ ಬಹಳ ಅಂದಗಾತಿ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *