ಗರ್ಭಿಣಿ ಎಂದು ತಿಳಿದು ನಾಯಿಗೆ ಎಕ್ಸ್ ರೇ: ಎಕ್ಸ್ ರೇ ನೋಡಿ ಬೆಚ್ಚಿದ ವೈದ್ಯರು ಮತ್ತು ನಾಯಿಯ ಮಾಲೀಕ!!

0 5

ಸೋಶಿಯಲ್ ಮೀಡಿಯಾಗಳು ಹೆಚ್ಚು ಪರಿಣಾಮಕಾರಿ ಹಾಗೂ ಪ್ರಭಾವಶಾಲಿ ಆದ ಮೇಲೆ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೇ ವಿಸ್ಮಯಕಾರಿ ಅಥವಾ ಶಾ ಕಿಂ ಗ್ ವಿಚಾರಗಳು ಅಥವಾ ವಿಷಯಗಳು ನಡೆದರೆ ಕೂಡಲೇ ಅವು ಸೋಶಿಯಲ್ ಮೀಡಿಯಾ ಮೂಲಕ ಜಗತ್ತಿನ ಮೂಲೆ ಮೂಲೆಗಳನ್ನು ಸಹಾ ತಲುಪುತ್ತದೆ. ಅಲ್ಲದೇ ಇಂತಹ ವಿಷಯಗಳಲ್ಲಿ ಕೆಲವು ಬಹಳ ಬೇಗ ವೈರಲ್ ಆಗಿ ಬಿಡುತ್ತವೆ. ಆದರೆ ಕೆಲವೊಂದು ಮಾತ್ರ ಸ್ಬಲ್ಪ ತಡವಾಗಿಯಾದರೂ ಸಹಾ ಸೋಶಿಯಲ್ ಮೀಡಿಯಾಗಳ ಜನರ ಮುಂದಕ್ಕೆ ಬರುವುದು ಕೂಡಾ ನಡೆಯುತ್ತದೆ.

ಪ್ರಸ್ತುತ ಕಳೆದ ವರ್ಷ ನಡೆದಿದ್ದ ಘಟನೆಯೊಂದು ಈಗ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಈ ಸುದ್ದಿ ಒಂದು ನಾಯಿಗೆ ಸಂಬಂಧಿಸಿದ್ದಾಗಿದೆ. ವ್ಯಕ್ತಿಯೊಬ್ಬರು ತಮ್ಮ ನಾಯಿ ಗರ್ಭಿಣಿಯಾಗಿದೆಯೆಂದು ಭಾವಿಸಿದ್ದರು. ಏಕೆಂದರೆ ಅವರು ಸಾಕಿದ್ದ ನಾಯಿಯ ಹೊಟ್ಟೆಯು ಇದ್ದಕ್ಕಿದ್ದಂತೆ ಉಬ್ಬಿತ್ತು. ಅಲ್ಲದೇ ನಾಯಿ ಆಯಾಸವಾಗಿ ಇರುವಂತೆ ಕಂಡು ಬರುತ್ತಿತ್ತು. ಇದನ್ನೆಲ್ಲಾ ಗಮನಿಸಿದ ನಾಯಿಯ ಮಾಲೀಕ ಬಹುಶಃ ಅದು ಗರ್ಭ ಧರಿಸಿರಬಹುದು ಎನ್ನುವ ಅನುಮಾನದಿಂದ ಅದನ್ನು ವೈದ್ಯರ ಬಳಿಗೆ ಕರೆದು ಕೊಂಡು ಹೋಗಿದ್ದಾರೆ.

ಇನ್ನು ನಾಯಿಗೆ ಏನಾಗಿದೆ ಎಂದು ಪರೀಕ್ಷಿಸಲು ನಾಯಿಗೆ ಎಕ್ಸ್ ರೇ ಮಾಡಿದ ನಂತರ ವೈದ್ಯರು ಅದನ್ನು ನೋಡಿ ಶಾ ಕ್ ಆಗಿದ್ದಾರೆ. ಹೌದು, ಯುಕೆಯ ನೀಲ್ ಟೇಲರ್ ಎನ್ನುವ ವ್ಯಕ್ತಿ ಸಾಕಿದ್ದ ನಾಯಿ ಆಲ್ಫಿ ಗೆ ಕಳೆದ ಕೆಲವು ದಿನಗಳಿಂದಲೂ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ಅದು ಆಗಾಗ ವಾಂತಿ ಮಾಡಿಕೊಳ್ಳುವುದನ್ನು ನೀಲ್ ಗಮನಿಸಿದ್ದಾರೆ. ಅಲ್ಲದೇ ಅದರ ಹೊಟ್ಟೆ ಕೂಡಾ ಉಬ್ಬುತ್ತಿರುವುದು ಅವರ ಗಮನಕ್ಕೆ ಬಂದಿದೆ. ಬಹುಶಃ ಅದು ಗರ್ಭಿಣಿಯಾಗಿರದೆ ಎಂದು ಭಾವಿಸಿದ ನೀಲ್ ಪಶು ವೈದ್ಯರ ಬಳಿಗೆ ಅದನ್ನು ಕರೆ ತಂದಿದ್ದಾರೆ.

ನಾಯಿಯ ಪರೀಕ್ಷೆ ಮಾಡಿ, ಎಕ್ಸ್ ರೇ ನೋಡಿ ದಂಗಾದ ವೈದ್ಯರು ನಂತರ ನೀಲ್ ಗೆ ಅಸಲಿ ವಿಷಯವನ್ನು ತಿಳಿಸಿದ್ದಾರೆ. ವೈದ್ಯರು ನಾಯಿಯ ಹೊಟ್ಟೆಯಲ್ಲಿ ಗಾಲ್ಫ್ ಬಾಲ್ ಗಳು ಇವೆ ಎಂದು ಹೇಳಿದ್ದಾರೆ. ಆಗ ನೀಲ್ ತಾನು ಕೆಲವು ದಿನಗಳ ಹಿಂದೆ ಆಲ್ಫೀ ಯನ್ನು ಗಾಲ್ಫ್ ಆಟ ಆಡುವ ಜಾಗಕ್ಕೆ ಕರೆದುಕೊಂಡು ಹೋಗಿದ್ದೆ ಅಲ್ಲಿಂದ ಬಂದ ಮೇಲೆಯೇ ಅದಕ್ಕೆ ಹುಷಾರಿಲ್ಲದೇ ಆಗಿದ್ದು ಎಂದು ನೆನಪಿಸಿಕೊಂಡಿದ್ದಾರೆ. ಆಗ ಅವರಿಗೂ ನಾಯಿಗೆ ಹೇಗೆ ಸಮಸ್ಯೆ ಆಗಿದೆ ಎಂದು ಅರ್ಥ ಮಾಡಿಕೊಂಡಿದ್ದಾರೆ.

ತಾನು ಅದು ಬಾಲ್ ಗಳನ್ನು ನುಂಗಿದ್ದು ತಾನು ಗಮನಿಸಲಿಲ್ಲ ಎಂದಿರುವ ನೀಲ್, ನಾಯಿಯ ಹೊಟ್ಟೆಯಲ್ಲಿ ಇದ್ದ ಬಾಲ್ ಗಳನ್ನು ತೆಗೆಯಲೇ ಬೇಕಾದ ಪರಿಸ್ಥಿತಿ ಇದ್ದುದ್ದರಿಂದ ನೀಲ್ ಅದರ ಶಸ್ತ್ರಚಿಕಿತ್ಸೆ ಹಾಗೂ ಆಸ್ಪತ್ರೆ ಬಿಲ್ ಆಗಿ 2 ಲಕ್ಷ, 37 ಸಾವಿರ ರೂ. ಬಿಲ್ ಪಾವತಿ ಮಾಡಿದ್ದಾರೆ. ಹೇಗೋ ತಮ್ಮ ಆಲ್ಫೀ ಮೊದಲಿನಂತೆ ಆದರೆ ಸಾಕೆಂದು ಕಾಳಜಿ ಮೆರೆದ ನೀಲ್ ಅದಕ್ಕೆ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ.

Leave A Reply

Your email address will not be published.